Advertisement

ಮೂರು ಗಂಟೆ ಕಾರ್ಯಾಚರಣೆಯಲ್ಲಿ ಮೊಸಳೆ ಸೆರೆ

03:02 PM Jan 07, 2020 | Team Udayavani |

ಬೆಳ್ತಂಗಡಿ: ಧರ್ಮಸ್ಥಳ ಸಮೀಪದ ದೊಂಡೊಲೆಯಲ್ಲಿ ರವಿವಾರ ಪಾಳುಬಾವಿಗೆ ಬಿದ್ದಿದ್ದ ಮೊಸಳೆಯನ್ನು ಸೋಮವಾರ ಮೂರು ಗಂಟೆಯ ಕಾರ್ಯಾಚರಣೆಯ ಬಳಿಕ ಸೆರೆ ಹಿಡಿಯಲಾಗಿದೆ.

Advertisement

ದೊಂಡೊಲೆಯ ಅರಣ್ಯ ಪ್ರದೇಶದಲ್ಲಿ ಸಂಜೀವ ಸಪಲ್ಯ ಎಂಬವರ ಜಾಗದಲ್ಲಿರುವ ಪಾಳುಬಾವಿಗೆ ರವಿವಾರ ಮೊಸಳೆಯೊಂದು ಬಿದ್ದಿತ್ತು. ಸುಮಾರು ಐದೂವರೆ ಅಡಿ ಉದ್ದವಿರುವ ಮೊಸಳೆಯನ್ನು ಅರಣ್ಯಾಧಿಕಾರಿಗಳು, ಸ್ಥಳೀಯರು ಸೇರಿ ಮೇಲೆತ್ತಿ, ಸಮೀಪದ ಚಾರ್ಮಾಡಿ ನದಿಗೆ ಬಿಡಲಾಗಿದೆ.

ಬಾವಿಗೆ ಬಿದ್ದಿರುವ ಮೊಸಳೆಯನ್ನು ನೋಡಲು ಭಾರಿ ಸಂಖ್ಯೆಯ ಜನ ಸೇರಿದ್ದರು. ಜನರನ್ನು ನೋಡಿ ಮೊಸಳೆ ಬುಸುಗುಟ್ಟುತ್ತಿತ್ತು. ಮೊಸಳೆಯನ್ನು ತೆಪ್ಪಗಿರಿಸಲು ಮೀನು ಮತ್ತು ಕೋಳಿಯನ್ನು ಹಾಕಲಾಗಿತ್ತು. ಬಲೆ ಉಪಯೋಗಿಸಿ ಮೊಸಳೆ ಬಾಯಿಗೆ ಹಗ್ಗ ಕಟ್ಟಿ ಮೇಲೆತ್ತಲಾಯಿತು.

ಸ್ಥಳೀಯರಾದ ಜುಬೇರ್, ಸಮೀರ್ ಕಾರ್ಯಾಚರಣೆಗೆ ಸಹಕರಿಸಿದರು. ಉಪವಲಯ ಅರಣ್ಯಾಧಿಕಾರಿ ಶಂಕರ್, ಸುಧಾಕರ್, ಯತೀಂದ್ರ, ಸದಾಶಿವ ಶೆಟ್ಟಿ, ರಾಘವೇಂದ್ರ, ವಿನೋದ್, ಕುಶಾಲಪ್ಪ ಗೌಡ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next