Advertisement
ಈ ಹಿಂದಿನ ವರ್ಷಗಳಲ್ಲಿ ಕಾಣಿಸದ ಮೊಸಳೆಗಳು ನದಿಗೆ ಹೇಗೆ ಬಂದವು ಎಂಬ ಬಗ್ಗೆ ಜನರಲ್ಲಿ ಸಂಶಯ ಮೂಡಿದೆ. ಈ ಭಾಗದ ಜನರು ಬಟ್ಟೆ ಒಗೆಯಲು, ದನ ತೊಳೆಯಲು ಅದಲ್ಲದೆ ಮಕ್ಕಳು ಈಜಾಡಲು ನದಿಗೆ ಬರುತ್ತಿದ್ದು ಅಪ್ಪಿತಪ್ಪಿ ನೀರಿಗಿಳಿದರೆ ಮೊಸಳೆಗಳಿಗೆ ಆಹಾರವಾಗುವ ಸಾಧ್ಯತೆ ಇದ್ದು ತತ್ ಕ್ಷಣವೇ ಸಂಬಂಧಪಟ್ಟ ಇಲಾಖೆ ಸೂಕ್ತ ಕ್ರಮ ಕೈಗೊಂಡು ಮೊಸಳೆಗಳನ್ನು ಹಿಡಿದು ಸ್ಥಳಾಂತರಿಸಬೇಕೆಂದು ಆಗ್ರಹಿಸಿದ್ದಾರೆ. ಮೊಸಳೆಗಳು ಎಷ್ಟಿವೆ, ಎಷ್ಟು ಹೊತ್ತಿಗೆ ಕಾಣಸಿಗುತ್ತವೆ ಎಂಬ ಬಗ್ಗೆ ಮಾಹಿತಿ ಇಲ್ಲ. ಮೊಸಳೆೆಗಳ ಉಪಸ್ಥಿತಿಯಿಂದಾಗಿ ಜನರು ನದಿಗೆ ತೆರಳಲು ಭಯಪಡುತ್ತಿದ್ದಾರೆ. ಇಲಾಖೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಸಂಭಾವ್ಯ ಅವಘಡವನ್ನು ತಪ್ಪಿಸಬೇಕಾಗಿದೆ ಎಂದು ಸ್ಥಳೀಯರಾದ ರವೀಂದ್ರ ಶೆಟ್ಟಿ ತಿಳಿಸಿದ್ದಾರೆ. Advertisement
ಮೊಸಳೆ ಬಂತು ಮೊಸಳೆ : ಪೊಸ್ರಾಲು ಪರಿಸರದ ಮಂದಿಗೆ ಗಾಬರಿ
08:30 AM May 17, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.