Advertisement
ಬೆಳಗಿನ ಜಾವ ರಬ್ಬರ್ ಟ್ಯಾಪಿಂಗ್‌ಗೆ ಹೊರಟಿದ್ದ ಸ್ಥಳೀಯ ನಿವಾಸಿ ಶೀನಪ್ಪ ಕುಂಬಾರ ಅವರು ಮೊಸಳೆಯೊಂದು ತೆವಳಿಕೊಂಡು ರಸ್ತೆ ದಾಟುತ್ತಿರುವುದನ್ನು ಗಮನಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು.
ಕುಮಾರಧಾರಾ ನದಿಯಲ್ಲಿ ಮೊಸಳೆಗಳ ಸಂಖ್ಯೆ ಹೆಚ್ಚುತ್ತಿದ್ದು, ಇತ್ತೀಚಿನ ದಿನಗಳಲ್ಲಿ ನದಿ ತಟದಲ್ಲಿರುವ ಆಲಂಕಾರು ಗ್ರಾಮದ ಕೊಂಡಾಡಿ ಕೊಪ್ಪ, ಏಂತಡ್ಕ, ಶಾಂತಿಮೊಗೆರು, ಪಜ್ಜಡ್ಕ, ಕಕ್ವೆ ಭಾಗಗಳ ಹಲವು ತೋಟಗಳ ಕೆರೆಗಳಲ್ಲಿ ಆಗಾಗ ಮೊಸಳೆಗಳು ಕಾಣಸಿಗುತ್ತಿ¤ವೆ. ಆಗಾಗ ಮೇಲೆ ಬಂದು ಸಂಚಾರಕ್ಕೆ ಹೊರಡುವುದೂ ಸಾಮಾನ್ಯವಾಗಿದೆ. ಕಳೆದ ವರ್ಷ ಪಜ್ಜಡ್ಕದ ಕೆರೆಯಲ್ಲಿ ಠಿಕಾಣಿ ಹೂಡಿದ್ದ ಮೊಸಳೆಯನ್ನು ಅರಣ್ಯ ಇಲಾಖೆಯವರು ಹಿಡಿದು ಕುಮಾರಧಾರಾ ನದಿಗೆ ಬಿಟ್ಟಿದ್ದರು.
Related Articles
Advertisement
ಇದನ್ನೂ ಓದಿ : ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ : ಎನ್ಐಎ ಅಧಿಕಾರಿಗಳಿಂದ ಮತ್ತೆ ಮೂವರ ಬಂಧನ