Advertisement

ಫಿಫಾ ವಿಶ್ವಕಪ್‌ ಪ್ಲೇ ಆಫ್: ಕ್ರೊವೇಶಿಯಕ್ಕೆ 3ನೇ ಸ್ಥಾನ

10:59 PM Dec 17, 2022 | Team Udayavani |

ದೋಹಾ: ಮೊರೊಕ್ಕೊವನ್ನು 2-1 ಅಂತರದಿಂದ ಮಣಿಸಿದ ಕಳೆದ ಸಲದ ರನ್ನರ್ ಅಪ್‌ ಕ್ರೊವೇಶಿಯ ಫಿಫಾ ವಿಶ್ವಕಪ್‌ನಲ್ಲಿ ಮೂರನೇ ಸ್ಥಾನದ ಗೌರವ ಸಂಪಾದಿಸಿದೆ.

Advertisement

7ನೇ ನಿಮಿಷದಲ್ಲೇ ಜಾಸ್ಕೊ ಗ್ವಾರ್ಡಿಯೋಲ್‌ ಕ್ರೊವೇಶಿಯದ ಖಾತೆ ತೆರೆದರು. ಎರಡೇ ನಿಮಿಷದಲ್ಲಿ ಮೊರೊಕ್ಕೊ ತಿರುಗಿ ಬಿತ್ತು. ಅರಾಫ್ ದರಿ ಗೋಲು ಸಿಡಿಸಿದರು.

ಹೀಗೆ 9ನೇ ನಿಮಿಷದಲ್ಲೇ 2 ಗೋಲು ದಾಖಲಾಯಿತು; ಪ್ಲೇ ಆಫ್ ಪಂದ್ಯದ ರೋಮಾಂಚನ ಹೆಚ್ಚಿತು.

42ನೇ ನಿಮಿಷದಲ್ಲಿ ಮಿಸ್ಲಾವ್‌ ಒರ್ಸಿಕ್‌ ಕ್ರೊವೇಶಿಯಕ್ಕೆ ಮುನ್ನಡೆ ಒಸಗಿಸುವಲ್ಲಿ ಯಶಸ್ವಿ ಯಾದರು. ಇದನ್ನು ಕ್ರೊವೇಶಿಯ ಕೊನೆಯ ತನಕವೂ ಉಳಿಸಿಕೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next