Advertisement

ವಿಮರ್ಶಕರಿಗೆ ಮಲೆನಾಡಿನ ಅನುಭವ ಇಲ್ಲ

11:20 AM Apr 24, 2019 | Suhan S |

ಕೋಲಾರ: ಹಸಿರು ಸಾಹಿತ್ಯ ಸೃಷ್ಟಿ ಕುವೆಂಪು ಅವರ ವಿಶೇಷವಾಗಿತ್ತು. ಈಗಿನ ಬಹುತೇಕ ಸಾಹಿತಿ, ವಿಮರ್ಶಕರಿಗೆ ಮಲೆನಾಡಿನ ಸಾಹಿತ್ಯದ ಅನುಭವೇ ಇಲ್ಲದಾಗಿದೆ ಎಂದು ವಿಮರ್ಶಕ, ಸಾಹಿತಿ ಪ್ರೊ.ಚಂದ್ರಶೇಖರ್‌ ನಂಗಲಿ ವಿಷಾದಿಸಿದರು.

Advertisement

ನಗರ ಹೊರವಲಯದ ಮಂಗಸಂದ್ರದ ಸ್ನಾತಕೋತ್ತರ ಕೇಂದ್ರದಲ್ಲಿ ಮಂಗಳವಾರ ನಡೆದ ಕುವೆಂಪು ಅವರ ಶ್ರೀರಾಮಾಯಣ ದರ್ಶನಂ ಕೃತಿಯ ಅಭಿಯಾನದ ಗೋಷ್ಠಿಯಲ್ಲಿ ಮಾತನಾಡಿದ ಅವರು, ಇವತ್ತಿನ ಸಾಹಿತ್ಯ ರಚನೆ ದ್ವೀಪದ ಕೆಳಗೆ ಕತ್ತಲಿನಂತಿದ್ದು, ವಿಮರ್ಶಾತ್ಮಕವಾಗಿ ರಚನೆ ಮಾಡುವ ಗೋಜಿಗೆ ಹೋಗುವುದಿಲ್ಲ. ಹೇಳುವುದು ಒಂದು ಮಾಡುವುದು ಇನ್ನೊಂದು ಎನ್ನುವಂತಾಗಿದೆ ಎಂದು ವಿಷಾದಿಸಿ, ಕುವೆಂಪು ಸಾಹಿತ್ಯ ಶ್ರೀಮಂತಿಕೆಯಂತಿದ್ದು, ಹಸಿರು ಸಾಹಿತ್ಯ ಸೃಷ್ಟಿಯಾಗಿದ್ದು, ವಿಶ್ವಮಟ್ಟದಲ್ಲಿ ಸ್ಧಾನ ಪಡೆದುಕೊಂಡಿದೆ ಎಂದು ಹೇಳಿದರು.

ನೈಸರ್ಗಿಕ ಆವರಣದಲ್ಲಿ ಪ್ರತ್ಯೇಕಿಸಲ್ಪಟ್ಟ ಸಸಿಗಳು ಮಾನವನ ಮಧ್ಯ ಪ್ರವೇಶ ಮತ್ತು ಹೊತ್ತೂತ್ತಿನ ಆರೈಕೆ ಸಿಕ್ಕಿ ಆಶ್ಚರ್ಯಕರವಾಗಿ ಬೆಳೆಯುತ್ತವೆ. ಬೆಟ್ಟದ ಗಿಡಗಳನ್ನು ಕುಂಡಗಳಲ್ಲಿ ನಾಟಿ ಮಾಡಿದಾಗ ವಿಸ್ಮಯಕಾರಿಯಾಗಿ ಬೆಳೆಯುತ್ತವೆ. ಈ ಬದಲಾವಣೆ ನನಗೆ ನಿಷ್ಪಲಸಿದ್ಧಿಯಾಗಿ ಕಾಣಿತು ಎಂದು ವಿವರಿಸಿದರು.

ಸಾಹಿತ್ಯ ಹಸಿರು ಮಯ: ಕುವೆಂಪು ಸಾಹಿತ್ಯ ಮಲೆನಾಡಿನ ಸಾಹಿತ್ಯ. ಆದರೆ, ಅವರಿಗೆ ಮಳೆಕಾಡಿನ ಅನುಭವವೇ ಇಲ್ಲ. ಅವರು ಮಾಡಿದ ವಿಮರ್ಶೆ ವಿಪರೀತವೃದ್ಧಿಯಾಗಿ ನಿಷ್ಪಲಸಿದ್ಧಿಯಾಗಿ ಕಾಣುತ್ತಿದೆ. ಇದನ್ನು ನಾನು ಎಲ್ಲಿ ಬೇಕಾದರೂ ಸಮರ್ಥಿಸಿಕೊಳ್ಳುತ್ತೇನೆ. ಅವರ ವಿಮರ್ಶೆಗಳ ಕತ್ತಲೆಯ ಭಾಗವಾಗಿದೆ. ಕುವೆಂಪು ಅವರ ಇಡೀ ಸಾಹಿತ್ಯವೇ ಹಸಿರು ಸಾಹಿತ್ಯವಾಗಿದೆ ಎಂದರು.

ಮದ್ರಾಸ್‌ ವಿಶ್ವ ವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ.ತಮಿಳ್‌ ಸೆಲ್ವಿ ಶ್ರೀರಾಮಾಯಣ ದರ್ಶನಂ ಕಾವ್ಯದಲ್ಲಿ ಸ್ತ್ರೀ ಸಂವೇದನೆ ವಿಷಯ ಮಂಡಿಸಿ, ರಾಮಾಯಾಣ ದರ್ಶನಂದಲ್ಲಿ ಸಮಾಜದಲ್ಲಿ ಹೆಣ್ಣಿಗೆ ಗೌರವ ನೀಡಬೇಕು ಎಂಬುದನ್ನು ಉಲ್ಲೇಖೀಸಿದ್ದಾರೆ ಎಂದು ತಿಳಿಸಿದರು.

Advertisement

ಹೆಣ್ಣಿಗೆ ಗೌರವ: ಸೀತೆಯನ್ನು ಕಾಡಿಗೆ ಕಳುಹಿಸಿದ ರಾಮನನ್ನು ಆದರ್ಶ ಪುರುಷನಾಗಿ ಹಲವು ಪಾತ್ರಗಳಲ್ಲಿ ಚಿತ್ರಿಸಿದ್ದಾರೆ. ಕುವೆಂಪು ರಾಮಯಾಣ ದರ್ಶನಂದಲ್ಲಿ ಗಾಂಧಿ ಮತ್ತು ಲೋಹಿಯ ಅವರ ಆದರ್ಶ ತೆಗೆದುಕೊಳ್ಳಲಾಗಿದೆ. ಹೆಣ್ಣಿಗೆ ಪ್ರಾರಂಭದಿಂದಲ್ಲೂ ಗೌರವ, ಬೆಲೆ ಕೊಡದೆ ಇರುವ ಸಮಾಜವನ್ನು ನಾನು ಇತಿಹಾಸದಲ್ಲಿ ತಿಳಿದಿದ್ದೇವೆ ಎಂದು ಹೇಳಿದರು.

ಮಹಿಳಾ ಮನಸ್ಸುಗಳು: ಕಾವ್ಯದಲ್ಲಿ ಹೆಣ್ಣಿನ ಬಗ್ಗೆ ಗೌರವ ಕಂಡು ಬಂದರೂ ನಿಜ ಜೀವನದಲ್ಲಿ ಕಾಣಲು ಸಾಧ್ಯವಾಗುತ್ತಿಲ್ಲ. ಸ್ತ್ರೀಯರ ಮನೋವಿಜ್ಞಾನದ ವಿಚಾರಗಳನ್ನು ಭಾರತೀಯ ಸಾಹಿತ್ಯದಲ್ಲಿ ಮಹಿಳೆಯರ ಹೇಳಿಕೊಳ್ಳುವ ಅವಕಾಶಗಳು ತೀರ ಕಡಿಮೆಯಾಗಿದೆ. ಮಹಿಳಾ ಮನಸ್ಸುಗಳ ಧ್ವನಿಯಾಗಿ ಶ್ರೀರಾಮಾಯಣ ದರ್ಶನಂ ನೀಡಿದೆ ಎಂದು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next