Advertisement

Critics’ Choice Awards: ಮಿಂಚಿದ ʼ12th ಫೇಲ್‌ʼ.. ಇಲ್ಲಿದೆ ಪ್ರಶಸ್ತಿ ಗೆದ್ದವರ ಲಿಸ್ಟ್

03:27 PM Mar 13, 2024 | Team Udayavani |

ಮುಂಬಯಿ: ಸಿನಿಮಾ ಹಾಗೂ  ವೆಬ್‌ ಸರಣಿಗಳಿಗೆ ಕೊಡಮಾಡುವ ಪ್ರತಿಷ್ಠಿತ ಕ್ರಿಟಿಕ್ಸ್‌ ಚಾಯ್ಸ್‌ ಅವಾರ್ಡ್ಸ್‌ನ 6ನೇ ಆವೃತ್ತಿಯ ಪ್ರಶಸ್ತಿ ವಿಜೇತರ ಪಟ್ಟಿ ಬುಧವಾರ(ಮಾ.13 ರಂದು) ಹೊರಬಿದ್ದಿದೆ.

Advertisement

ಭಾರತದ ಚಲನಚಿತ್ರಗಳು, ಕಿರುಚಿತ್ರಗಳು ಮತ್ತು ವೆಬ್ ಸರಣಿಗಳು ಸೇರಿದಂತೆ 24 ವಿಭಾಗಗಳಿಗೆ ಪ್ರಶಸ್ತಿಗಳನ್ನು ನೀಡಲಾಗಿದೆ.

ವಿಧು ವಿನೋದ್‌ ಚೋಪ್ರಾ ಅವರ ‘12th Fail’ ಸಿನಿಮಾಕ್ಕೆ ಅತ್ಯುತ್ತಮ ಚಿತ್ರ ಹಾಗೂ ವಿಕ್ರಾಂತ್ ಮಾಸ್ಸೆ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕಿದೆ. ʼತ್ರೀ ಆಫ್‌ ಅಸ್‌ʼ ಸಿನಿಮಾದಲ್ಲಿನ ಅಭಿನಯಕ್ಕಾಗಿ ಶೆಫಾಲಿ ಶಾ ಅವರು ಅತ್ಯುತ್ತಮ ನಟಿ ಪ್ರಶಸ್ತಿ ಸಂದಿದೆ.

ಇಲ್ಲಿದೆ ವಿಜೇತರ ಪಟ್ಟಿ..

ಬೆಸ್ಟ್‌ ಫೀಚರ್‌ ಫಿಲ್ಮ್:‌ 12th ಫೇಲ್‌

Advertisement

ಅತ್ಯುತ್ತಮ ನಿರ್ದೇಶಕ: ಪಿ.ಎಸ್.ವಿನೋತ್ರಾಜ್: ಕೂಜಂಗಲ್ (ಪೆಬಲ್ಸ್)ಗಾಗಿ

ಅತ್ಯುತ್ತಮ ನಟ: ವಿಕ್ರಾಂತ್ ಮಾಸ್ಸೆ(12th ಫೇಲ್ )

ಅತ್ಯುತ್ತಮ ನಟಿ: ಶೆಫಾಲಿ ಶಾ (ʼತ್ರೀ ಆಫ್ ಅಸ್‌ʼ)

ಅತ್ಯುತ್ತಮ ಪೋಷಕ ನಟ: ಜೈದೀಪ್ ಅಹ್ಲಾವತ್ (ಜಾನೆ ಜಾನ್‌)

ಅತ್ಯುತ್ತಮ ಪೋಷಕ ನಟಿ: ದೀಪ್ತಿ ನೇವಲ್(ಗೋಲ್ಡ್ ಫಿಶ್)

ಅತ್ಯುತ್ತಮ ಬರಹ: ದೇವಶಿಶ್ ಮಖಿಜಾ(ಜೋರಾಮ್‌)

ಅತ್ಯುತ್ತಮ ಸಂಕಲನ: ಅಭ್ರೋ ಬ್ಯಾನರ್ಜಿ( ಜೋರಾಮ್‌)

ಅತ್ಯುತ್ತಮ ಛಾಯಾಗ್ರಹಣ: ಅವಿನಾಶ್ ಅರುಣ್ ಧವರೆ (ʼತ್ರೀ ಆಫ್ ಅಸ್‌ʼ)

ವೆಬ್ ಸರಣಿ ವಿಭಾಗ:  

ಅತ್ಯುತ್ತಮ ವೆಬ್ ಸರಣಿ: ಕೊಹ್ರಾ

ವರ್ಷದ ಅತ್ಯುತ್ತಮ OTT ಪ್ಲಾಟ್‌ಫಾರ್ಮ್: ಡಿಸ್ನಿ+ಹಾಟ್‌ಸ್ಟಾರ್

ಅತ್ಯುತ್ತಮ ನಿರ್ದೇಶಕ: ವಿಕ್ರಮಾದಿತ್ಯ ಮೋಟ್ವಾನೆ (ಜುಬಿಲಿ)

ಅತ್ಯುತ್ತಮ ನಟ: ಸುವಿಂದರ್ ವಿಕ್ಕಿ (ಕೊಹ್ರಾ)

ಅತ್ಯುತ್ತಮ ನಟಿ: ರಾಜಶ್ರೀ ದೇಶಪಾಂಡೆ (ಟ್ರಯಲ್ ಬೈ ಫೈರ್‌)

ಅತ್ಯುತ್ತಮ ಪೋಷಕ ನಟ: ಸಿದ್ದಾಂತ್ ಗುಪ್ತಾ (ಜುಬಿಲಿ)

ಅತ್ಯುತ್ತಮ ಪೋಷಕ ನಟಿ: ಅಮೃತಾ ಸುಭಾಷ್ (ಲಸ್ಟ್ ಸ್ಟೋರೀಸ್ S2: ದಿ ಮಿರರ್‌)

ಅತ್ಯುತ್ತಮ ಬರಹ: ಗುಂಜಿತ್ ಚೋಪ್ರಾ, ಡಿಗ್ಗಿ ಸಿಸೋಡಿಯಾ ,ಸುದೀಪ್ ಶರ್ಮಾ(ಕೊಹ್ರಾ)

ಕಿರುಚಿತ್ರ ವಿಭಾಗ:

ಅತ್ಯುತ್ತಮ ಕಿರುಚಿತ್ರ: ನಾಕ್ಟರ್ನಲ್ ಬರ್ಗರ್

ಅತ್ಯುತ್ತಮ ನಿರ್ದೇಶಕಿ: ರೀಮಾ ಮಾಯಾ (ನಾಕ್ಟರ್ನಲ್ ಬರ್ಗರ್)

ಅತ್ಯುತ್ತಮ ನಟ: ಸಂಜಯ್ ಮಿಶ್ರಾ ಗಿದ್ಧ್ (ದಿ ಸ್ಕ್ಯಾವೆಂಜರ್)

ಅತ್ಯುತ್ತಮ ನಟಿ: ಮಿಲ್ಲೊ ಸುಂಕಾ (ನಾಕ್ಟರ್ನಲ್ ಬರ್ಗರ್)

ಅತ್ಯುತ್ತಮ ಬರಹ: ಅಶೋಕ್ ಸಂಖ್ಲಾ ಮತ್ತು ಮನೀಷ್ ಸೈನಿ ಗಿದ್ಧ್ (ದಿ ಸ್ಕ್ಯಾವೆಂಜರ್)

ಅತ್ಯುತ್ತಮ ಛಾಯಾಗ್ರಹಣ: ಜಿಗ್ಮೆಟ್ ವಾಂಗ್ಚುಕ್ (ಲಾಸ್ಟ್‌ ಡೇಸ್‌ ಆಫ್‌ ಸಮ್ಮರ್)‌

ಅತ್ಯುತ್ತಮ ಅನ್‌ಸ್ಕ್ರಿಪ್ಟೆಡ್ ಶೋ: ಕಾಫಿ ವಿತ್ ಕರಣ್ 8

ವಿಶೇಷ ವಿಭಾಗ:  

ಜೆಂಡರ್ ಸೆನ್ಸಿಟಿವಿಟಿ ಪ್ರಶಸ್ತಿ: ಫೈರ್ ಇನ್ ದಿ ಮೌಂಟೇನ್ಸ್

ಸಿನಿಮಾ ಪ್ರಶಸ್ತಿಗೆ ಅಸಾಮಾನ್ಯ ಕೊಡುಗೆ: ಉಷಾ ಖನ್ನಾ

ಕ್ರಿಟಿಕ್ ಚಾಯ್ಸ್ ಅವಾರ್ಡ್ಸ್ ಪ್ರಶಸ್ತಿ ಕಾರ್ಯಕ್ರಮ ಶೀಘ್ರದಲ್ಲೇ ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮ್‌ ಆಗಲಿದೆ.

 

Advertisement

Udayavani is now on Telegram. Click here to join our channel and stay updated with the latest news.

Next