ಮಹಾಲಿಂಗಪುರ: ಇತ್ತೀಚೆಗೆ ಉಪಮುಖ್ಯ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರ ವಿರುದ್ಧ ಮಹಾಲಿಂಗಪುರದ ಜೆಡಿಎಸ್ ಮುಖಂಡ ನಿಂಗಪ್ಪ ಬಾಳಿಕಾಯಿ ಮತ್ತು ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇತರರು ಮಾಡಿದ ಟೀಕೆಯನ್ನು ರನ್ನಬೆಳಗಲಿ ಗ್ರಾಮಸ್ಥರು ಖಂಡಿಸಿದ್ದಾರೆ.
ಬುಧವಾರ ರನ್ನಬೆಳಗಲಿ ಪಂಚಾಯತಿ ಸಭಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಪಂ ಮಾಜಿ ಅಧ್ಯಕ್ಷ ಸಿದ್ದುಗೌಡ ಪಾಟೀಲ ಹಾಗೂ ಮುಖಂಡರಾದ ಪಂಡಿತ ಪೂಜಾರಿ, ಮಹಾಲಿಂಗಪುರದ 6 ಮತ್ತು 7ನೇ ವಾರ್ಡ್ ಪ್ರತಿಶತ 75ರಷ್ಟು ಕಂದಾಯ ಭೂಮಿಯನ್ನು ಬೆಳಗಲಿ ಪಟ್ಟಣ ಪಂಚಾಯಿತಿಗೆ ಸೇರ್ಪಡೆಗೊಳಿಸಿ ಆದೇಶ ಹೊರಡಿಸಿದ್ದು, ಇದರಿಂದ ಮಹಾಲಿಂಗಪುರ ಜನತೆಗೆ ಡಿಸಿಎಂ ಗೋವಿಂದ ಕಾರಜೋಳ ದ್ರೋಹ ಮಾಡಿದ್ದಾರೆ ಎಂದು ಮಹಾಲಿಂಗಪುರದಲ್ಲಿ ಆಪಾದಿಸಿದ್ದು ಸತ್ಯಕ್ಕೆ ದೂರವಾದ ಸಂಗತಿ.
ಡಿಸಿಎಂ ಗೋವಿಂದ ಕಾರಜೋಳ ಅವರಿಗೆ ಮಹಾಲಿಂಗಪುರದ ಬಗ್ಗೆ ಅಪಾರ ಗೌರವವಿದೆ ಎಂದರು. 1995ರ ಮುಂಚೆಯೂ ಈ ಜಾಗೆ ಬೆಳಗಲಿ ಗ್ರಾಮಕ್ಕೆ ಸೇರಿತ್ತು. 1995ರ ಗೆಜೆಟ್ ಪಂಚಾಯತಿ ಗಮನಕ್ಕೆ ಬಂದಿರಲಿಲ್ಲ. ಅದಕ್ಕಾಗಿ ನಂತರ ತಕರಾರು ಕೊಟ್ಟಿàವಿ. ನಾವು ಹಸ್ತಾಂತರ ಮಾಡಿಲ್ಲ. ಈ ಬಗ್ಗೆ ಈ ಮುಂಚೆ ಜಮಖಂಡಿ ಉಪವಿಭಾಗಾ ಧಿಕಾರಿಗಳ ಕಚೇರಿಯಲ್ಲಿ ವಿಚಾರಣೆ ನಡೆದಾಗ ಮಹಾಲಿಂಗಪುರ ಪುರಸಭೆ ಮುಖ್ಯಾ ಧಿಕಾರಿ ಯಾವುದೇ ತಕರಾರು ಸಲ್ಲಿಸಿಲ್ಲ. ಕೇವಲ ಒಂದು ಲೇಓಟ್‌ದಾಗ ಮಾತ್ರ ಮಹಾಲಿಂಗಪುರ ಪುರಸಭೆಯಿಂದ ಅಭಿವೃದ್ಧಿ ಮಾಡಲಾಗಿದೆ. ಉಳಿದ ಸರ್ವೇ ನಂಬರಗಳಲ್ಲಿ ರನ್ನಬೆಳಗಲಿ ಪಟ್ಟಣ ಪಂಚಾಯತಿಯಿಂದ ನೀರು, ರಸ್ತೆ, ವಿದ್ಯುತ್ ದೀಪ ಮುಂತಾದ ವ್ಯವಸ್ಥೆ ಮಾಡಲಾಗಿದೆ.ಅವರು ನಮ್ಮಲ್ಲಿಯೆ ಕರ ತುಂಬುತ್ತಾ ಬಂದಿದ್ದಾರೆ. ಇಲ್ಲಿಯವರೆಗೆ ಆ ಸರ್ವೇ ನಂಬರ್ ನಿವೇಶನಗಳ ಜನತೆಗೆ ಮಹಾಲಿಂಗಪುರ ಪುರಸಭೆಯಿಂದ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಂಡಿಲ್ಲ. ಈಗ ಬೆಳಗಲಿ ಪಂಚಾಯತಿಗೆ ಸೇರಿದೊಡನೆ ಟೀಕೆ ಮಾಡುವವರಿಗೆ ಈ ಸರ್ವೇ ನಂಬರ್‌ಗಳ ನೆನಪು ಬರುತ್ತಿದೆ. ಟೀಕೆ ಮಾಡುವವರಿಗೆ ವಾಸ್ತವದ ಅರಿವಿಲ್ಲ ಎಂದರು. ಇದು ಕೇವಲ ರಾಜಕೀಯ ಹಿತಾಸಕ್ತಿಯಿಂದ ಡಿಸಿಎಂ ಹಾಗೂ ಶಾಸಕ ಸಿದ್ದು ಸವದಿ ಅವರ ಮೇಲೆ ಆರೋಪ ಮಾಡಲಾಗುತ್ತಿದೆ. ಈಗ ಸದರಿ ಸರ್ವೇ ನಂಬರ್ ಬೆಳಗಲಿಗೆ ಅಂತಾ ಗೆಜೆಟ್ ನೋಟಿಫಿಕೇಶನ್ ಆಗಿದೆ. ಇದು ಮುಗಿದ ಅಧ್ಯಾಯ. ಅನವಶ್ಯಕ ವಿವಾದ ಎಬ್ಬಿಸುವುದು ಸರಿಯಲ್ಲ. ಇಡೀ ರನ್ನಬೆಳಗಲಿ ಪಟ್ಟಣವನ್ನು ಮಹಾಲಿಂಗಪುರ ಪುರಸಭೆಗೆ ಸೇರಿಸಿ ನಗರಸಭೆ ಮಾಡುತ್ತೇವೆಂದರೆ ನಾವು ಒಪ್ಪುತ್ತೇವೆ ಅದನ್ನು ಬಿಟ್ಟು ಸರ್ವೇ ನಂಬರ ಕೇಳಿದರೆ ನಾವು ಒಪ್ಪುವುದಿಲ್ಲ. ರನ್ನಬೆಳಗಲಿ ಜನತೆ ಸರ್ವ ವಿಧದಲ್ಲೂ ಮಹಾಲಿಂಗಪುರದ ಬೆಂಬಕ್ಕೆ ನಿಂತಿದ್ದಾರೆ. ಒಬ್ಬರಿಗೊಬ್ಬರಿಗೆ ಅನೋನ್ಯ ಸಂಬಂಧವಿದೆ. ಕೇವಲ ರಾಜಕೀಯ ಹಿತಾಸಕ್ತಿಗಾಗಿ ಕೆಲವರು ಟೀಕೆ ಮಾಡುತ್ತಾರೆ ಅಂತಾ ಸಂಬಂಧಗಳಿಗೆ ಧಕ್ಕೆ ತರುವುದು ಸರಿಯಲ್ಲ. ನಿಮಗೆ ನಿಮ್ಮದೇ ಸರಿ ಎನಿಸಿದರೆ ಕಾನೂನು ಹೋರಾಟ ಮಾಡಿ ನಾವು ಅದನ್ನು ಎದುರಿಸುತ್ತೇವೆ ಎಂದರು.
ಮುಖಂಡರಾದ ಚಿಕ್ಕಪ್ಪ ನಾಯಕ, ಮುತ್ತಪ್ಪ ಸಿದ್ದಾಪೂರ, ಶಿವನಗೌಡ ಪಾಟೀಲ, ಮಹಾಲಿಂಗ ಪುರಾಣಿಕ, ಅಪ್ಪನಗೌಡ ಪಾಟೀಲ, ಸಂಗನಗೌಡ ಪಾಟೀಲ, ಪುಟ್ಟು ಕುಲಕರ್ಣಿ, ಸಿದ್ದು ಹೆಗ್ಗಣ್ಣವರ, ಲಕ್ಕಪ್ಪ ಮೇಡ್ಯಾಗೋಳ, ಸಂಗಪ್ಪ ಅಮಾತಿ ಸೇರಿದಂತೆ ಹಲವರು ಇದ್ದರು.