ರಾಯಚೂರು: ಕೈಗಾರಿಕೆಗಳ ಹೇರಳ ಬೆಳವಣಿಗೆಯಿಂದ ರಾಜ್ಯದ ನಾಲ್ಕು ನಗರಗಳನ್ನು “ಕ್ರಿಟಿಕಲಿ ಪೊಲ್ಯೂಟೆಡ್’
ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಗುರುತಿಸಿದ್ದು, ಪರಿಸರಕ್ಕೆ ಎಷ್ಟು ಪ್ರಮಾಣದ ಹಾನಿಯಾಗಿದೆ ಎಂಬುದರ
ಕುರಿತಾಗಿ ಅಧ್ಯಯನ ನಡೆಸುತ್ತಿದೆ.
ಕೆಲ ವರ್ಷಗಳ ಹಿಂದೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ನಡೆಸಿದ ಅಧ್ಯಯನದಲ್ಲಿ ರಾಜ್ಯದ ಪೀಣ್ಯ,
ಮಂಗಳೂರು, ಭದ್ರಾವತಿ ಹಾಗೂ ರಾಯಚೂರಿಗೆ ಮಾಲಿನ್ಯದಲ್ಲಿ ಹೆಚ್ಚಿನ ರೇಟಿಂಗ್ ದೊರೆತಿತ್ತು. ಇಲ್ಲೆಲ್ಲ
ಕೈಗಾರಿಕೆಗಳು ಶರವೇಗದಲ್ಲಿ ಬೆಳೆಯುತ್ತಿದ್ದು, ಪರಿಸರ ಹಾನಿಯೂ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಮಂಡಳಿ ಏನೆಲ್ಲ
ಕ್ರಮ ಕೈಗೊಂಡಿದೆ ಎಂಬುದರ ಬಗ್ಗೆ ವಿವರ ನೀಡುವುದರ ಜತೆಗೆ, ಸದ್ಯದ ಪರಿಸ್ಥಿತಿ ಬಗ್ಗೆ ಸಮೀಕ್ಷೆ ನಡೆಸುವಂತೆ ಕೇಂದ್ರ ಸರ್ಕಾರ ಸೂಚಿಸಿದೆ.
ಸಮೀಕ್ಷೆಗೆ 8 ಸ್ಥಳಗಳ ಆಯ್ಕೆ: ರಾಯಚೂರು ಜಿಲ್ಲೆಯಲ್ಲೂ ಇತ್ತೀಚೆಗೆ ಸಾಕಷ್ಟು ಪ್ರಮಾಣದ ಕಾರ್ಖಾನೆಗಳು ತಲೆ ಎತ್ತಿವೆ. ಈತ್ತೀಚೆಗೆ ವೈಟಿಪಿಎಸ್ ಲೋಕಾರ್ಪಣೆಗೊಂಡಿದೆ. ರೈಸ್ ಮಿಲ್‌ಗಳು, ರಸಗೊಬ್ಬರ, ಕೆಮಿಕಲ್ ಕಾರ್ಖಾನೆಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ಜಿಲ್ಲೆಯ ವಾತಾವರಣ ಹದಗೆಡುತ್ತಿದೆ. ಅದರ ಜತೆಗೆ ಬಿಸಿಲಿನ ಪ್ರಮಾಣವೂ ಹೆಚ್ಚಾಗಿದೆ. ಇನ್ನುಳಿದ ನಗರಗಳಲ್ಲೂ ಇದೇ ಪರಿಸ್ಥಿತಿ ಇದೆ. ಬೆಂಗಳೂರು ಮೂಲದ ಎನ್ವಿರಾನ್‌ಮೆಂಟ್ ಹೆಲ್ತ್ ಆ್ಯಂಡ್ ಸೇμr ರಿಸರ್ಚ್ ಡೆವಲಪ್‌ಮೆಂಟ್ ಸೆಂಟರ್ ಎಂಬ ಸಂಸ್ಥೆ ಮೂಲಕ ಸಮೀಕ್ಷೆ ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು ಎಂಟು ಸ್ಥಳಗಳನ್ನು ಗುರುತಿಸಿದ್ದು, ಪ್ರತಿ ಕೇಂದ್ರದಲ್ಲಿ ಮೂರು ದಿನ ಸಮೀಕ್ಷೆ ನಡೆಸಿ ವರದಿತಯಾರಿಸಲಾಗುತ್ತಿದೆ. ಪ್ರತಿ ಐದರಿಂದ ಆರು ಕಿ.ಮೀ. ಅಂತರದಲ್ಲಿ ಯಂತ್ರ ಅಳವಡಿಸಲಾಗುತ್ತಿದೆ. ಕಣ್ಣಿಗೆ ಕಾಣುವ ಧೂಳು, ಕಾಣದಂಥ ಸೂಕ್ಷ್ಮ ವಸ್ತುಗಳ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ ಎಂದು ಸಂಸ್ಥೆಯ ಪ್ರತಿನಿ ಧಿಗಳು ವಿವರಿಸಿದರು. ಅಂತಿಮ ವರದಿಯನ್ನು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸಲ್ಲಿಸಿದ ನಂತರ ಮುಂದಿನ ನಿರ್ದೇಶನಗಳನ್ವಯ ಕ್ರಮ ಕೈಗೊಳ್ಳಲಾಗುವುದು ಎಂದು ನಿಯಂತ್ರಣ ಮಂಡಳಿ ಅ ಧಿಕಾರಿಗಳು ತಿಳಿಸಿದ್ದಾರೆ.
ಹಸಿರೀಕರಣಕ್ಕಿಲ್ಲ ಒತ್ತು
ಕೈಗಾರಿಕೆಗಳು ಹೇರಳವಾಗಿ ಬೆಳೆಯುತ್ತಿವೆಯಾದರೂ ಜಿಲ್ಲೆಯಲ್ಲಿ ಹಸಿರೀಕರಣಕ್ಕೆ ಮಾತ್ರ ಒತ್ತು ನೀಡುತ್ತಿಲ್ಲ. ಸಾರ್ವಜನಿಕ ಹೊಣೆಗಾರಿಕೆ ನಿಭಾಯಿಸಬೇಕಿದ್ದರೂ ಬಹುತೇಕ ಕೈಗಾರಿಕೆಗಳು ಇದರಿಂದ ದೂರ ಉಳಿಯುತ್ತಿವೆ. ಬೇಸಿಗೆ ಬಂದರೆ ಬಿಸಿಲಿನ ಪ್ರಮಾಣ ತೀವ್ರವಾಗುತ್ತದೆ.
ಈ ವರ್ಷ ಸತತ 20 ದಿನಗಳ ಕಾಲ 44ಕ್ಕೂ ಅ ಧಿಕ ಡಿಗ್ರಿ ಸೆಲ್ಸಿಯಸ್ ಬಿಸಿಲು ದಾಖಲಾಗಿತ್ತು. ಇದಕ್ಕೆಲ್ಲ ಕೈಗಾರಿಕೆಗಳೇ ಕಾರಣ ಎನ್ನುವುದು ಪರಿಸರವಾದಿಗಳ ಆರೋಪ. ಮಾಲಿನ್ಯ ನಿಯಂತ್ರಣ ಮಂಡಳಿ ಇನ್ನಾದರೂ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಲಿ ಎನ್ನುವುದು ಜಿಲ್ಲೆಯ ಜನರ ಒತ್ತಾಸೆ.
ಕೈಗಾರಿಕೆಗಳಿಂದ ಪರಿಸರದ ಮೇಲೆ ಎಷ್ಟರ ಮಟ್ಟಿಗೆ ಹಾನಿಯಾಗುತ್ತಿದೆ ಎಂಬ ಕುರಿತು ಅಧ್ಯಯನ ನಡೆಸಲಾಗುತ್ತಿದೆ. ಒಂದು ಸ್ಥಳದಲ್ಲಿ ಮೂರು ದಿನ ಸಮೀಕ್ಷೆ ನಡೆಸಲಾಗುವುದು. ಮಂಡಳಿ ಕೇಂದ್ರ ಕಚೇರಿಗೆ ವರದಿ ಸಲ್ಲಿಸುವುದು ನಮ್ಮ ಕೆಲಸ. ಮುಂದಿನ ಕ್ರಮ ಅವರೇ ಕೈಗೊಳ್ಳುತ್ತಾರೆ.
– ಕಾಶಿನಾಥ, ಫೀಲ್ಡ್ ಟೆಕ್ನಿಶಿಯನ್, ಇಎಚ್‌ಎಸ್‌ಆರ್‌ಡಿಸಿ
– ಸಿದ್ಧಯ್ಯಸ್ವಾಮಿ ಕುಕುನಾರು