ರಿಯಾದ್: ಮ್ಯಾಂಚೆಸ್ಟರ್ ಯುನೈಟೆಡ್ ತಂಡದಿಂದ ಹೊರಬಂದ ಪೋರ್ಚುಗಲ್ ತಂಡದ ನಾಯಕ ಕ್ರಿಸ್ಟಿಯಾನೋ ರೊನಾಲ್ಡೊ ಅವರು ಮುಂದೆ ಸೌದಿ ಅರೇಬಿಯಾದ ಕ್ಲಬ್ ಅಲ್ ನಾಸರ್ ಗೆ ಆಡಲಿದ್ದಾರೆ. ಇದರ ಬಗ್ಗೆ ಕ್ಲಬ್ ಅಧಿಕೃತವಾಗಿ ಘೋಷಣೆ ಮಾಡಿದೆ.
ಸಂದರ್ಶನವೊಂದರಲ್ಲಿ ಕ್ರಿಸ್ಟಿಯಾನೋ ರೊನಾಲ್ಡೊ ಅವರು ಮ್ಯಾಂಚೆಸ್ಟರ್ ಯುನೈಟೆಡ್ ಮಾಲಕರು ಮತ್ತು ಕೋಚ್ ಬಗ್ಗೆ ಹೇಳಿಕೆ ನೀಡಿದ್ದರು. ಈ ವಿವಾದದ ಬಳಿಕ ರೊನಾಲ್ಡೊ ಮ್ಯಾಂಚೆಸ್ಟರ್ ಯುನೈಟೆಡ್ ತೊರೆಯುವುದು ಖಚಿತವಾಗಿತ್ತು. ಆದರೆ ಯಾವ ತಂಡ ಈ ದಿಗ್ಗಜ ಆಟಗಾರನನ್ನು ಖರೀದಿ ಮಾಡುತ್ತದೆ ಎಂದು ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದರು.
“ಯುರೋಪಿಯನ್ ಫುಟ್ಬಾಲ್ ನಲ್ಲಿ ನಾನು ಗೆಲ್ಲಲು ಯೋಜಿಸಿದ್ದನ್ನೆಲ್ಲಾ ಗೆದ್ದಿರುವುದು ನನ್ನ ಅದೃಷ್ಟ. ಇದೀಗ ಏಷ್ಯಾದಲ್ಲಿ ನನ್ನ ಅನುಭವವನ್ನು ಹಂಚಿಕೊಳ್ಳಲು ಇದು ಸರಿಯಾದ ಕ್ಷಣ ಎಂದು ಭಾವಿಸುತ್ತೇನೆ. ನನ್ನ ಹೊಸ ತಂಡದ ಸದಸ್ಯರನ್ನು ಸೇರಲು ನಾನು ಎದುರು ನೋಡುತ್ತಿದ್ದೇನೆ ಮತ್ತು ಅವರೊಂದಿಗೆ ಕ್ಲಬ್ ಗೆ ಯಶಸ್ಸನ್ನು ಸಾಧಿಸಲು ಸಹಾಯ ಮಾಡುತ್ತೇನೆ” ಎಂದು ಎಂದು ರೊನಾಲ್ಡೊ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:ಪ್ರಶಾಂತ್ ನೀಲ್ ಸಿನಿಮಾದಲ್ಲಿ ಆಮಿರ್ ಖಾನ್ ನಟನೆ..? ಹೆಚ್ಚಾಯಿತು ಜೂ. ಎನ್ಟಿಆರ್ ಸಿನಿಮಾದ ಹೈಪ್
ವರದಿಯ ಪ್ರಕಾರ ಅಲ್ ನಾಸರ್ ಕ್ಲಬ್ ರೊನಾಲ್ಡೊ ಅವರಿಗೆ ವಾರ್ಷಿಕವಾಗಿ 1770 ಕೋಟಿ ರೂ ನೀಡಲಿದೆ. ಎರಡುವರೆ ವರ್ಷಗಳ ಕಾಲ ಒಪ್ಪಂದ ಮಾಡಿಕೊಳ್ಳಲಾಗಿದೆ.
ಮ್ಯಾಂಚೆಸ್ಟರ್ ಯುನೈಟೆಡ್ ಜೊತೆಗಿನ ಒಪ್ಪಂದದ ಸಮಯದಲ್ಲಿ ರೊನಾಲ್ಡೊ ವಾರಕ್ಕೆ 5 ಕೋಟಿ ಗಳಿಸುತ್ತಿದ್ದರು ಎಂದು ವರದಿಯಾಗಿದೆ. ಸೌದಿ ಅರೇಬಿಯಾದ ಮತ್ತೊಂದು ಕ್ಲಬ್ ಅಲ್ ಹಿಲಾಲ್ ಈ ಯುನೈಟೆಡ್ ದಿನಗಳಲ್ಲಿ ಅವರಿಗೆ 3,000 ಕೋಟಿ ವಾರ್ಷಿಕ ಒಪ್ಪಂದವನ್ನು ನೀಡಲಾಗಿತ್ತು ಆದರೆ ಅವರು ಆ ಪ್ರಸ್ತಾಪವನ್ನು ತಿರಸ್ಕರಿಸಿದ್ದರು.