Advertisement
ಕೃಷಿ ಯಂತ್ರೋಪಕರಣಗಳ ಮಾರಾಟ, ದುರಸ್ತಿ ಮಳಿಗೆಗಳನ್ನು ತೆರೆಯುವಂತೆ ಆದೇಶ ಬಂದಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರಾ ದರೂ ಅನುಷ್ಠಾನವಾಗಿಲ್ಲ. ಪಂಪು ಸೆಟ್‌ಗಳಲ್ಲಿ ದೋಷ ಕಂಡುಬಂದು ಬರುವುದು ಸ್ಥಗಿತವಾದರೆ ದುರಸ್ತಿಗೊಳಿಸುವವರು ಸಿಗುತ್ತಿಲ್ಲ. ಇದರಿಂದ ಬಿಸಿಲಿನ ತಾಪಕ್ಕೆ ಸಂಪೂರ್ಣ ಸುಟ್ಟು ಹೋಗುವ ಸಾಧ್ಯತೆಯೇ ಹೆಚ್ಚು ಎಂದು ಕೃಷಿಕರು ಅಳಲನ್ನು ತೋಡಿಕೊಳ್ಳುತ್ತಿದ್ದಾರೆ.ಮತ್ತೂಂದೆಡೆ ವಿದ್ಯುತ್ ವೋಲ್ಟೆàಜ್ ಸಮಸ್ಯೆಯೂ ಕಾಡುತ್ತಿರುವುದರಿಂದ ಸ್ಪ್ರಿಂಕ್ಲರ್ ಸರಿಯಾಗಿ ನೀರು ಹಾಯಿಸಲು ಸಾಧ್ಯವಾಗುತ್ತಿಲ್ಲ ಎಂದು ಕೃಷಿಕರು ಹೇಳುತ್ತಿದ್ದಾರೆ.
ಕೃಷಿಕರ ತೊಂದರೆಯನ್ನು ಮನಗಂಡಿರುವ ಕೇಂದ್ರ ಗೃಹ ಸಚಿವಾಲಯ ಕೃಷಿ ಯಂತ್ರೋಪಕರಣ ಮಾರಾಟ, ದುರಸ್ತಿ ಮಳಿಗೆಗಳನ್ನು ತೆರೆಯುವಂತೆ ಎ. 3ಕ್ಕೆ ಆದೇಶ ನೀಡಿದೆ. ಅಂತಹ ಮಳಿಗೆಗಳನ್ನು ಗುರುತಿಸಿ ಪ್ರತಿ ತಾಲೂಕುಗಳ ಸಹಾಯಕ ಕೃಷಿ ನಿರ್ದೇಶಕರ ಮೂಲಕ ಪಾಸ್ ವಿತರಿಸಲಾಗುತ್ತದೆ. ಪಾಸ್‌ಗಾಗಿ ಅವರೇ ಅರ್ಜಿ ಸಲ್ಲಿಸಬಹುದು, ಇಲ್ಲದೇ ಇದ್ದರೆ ನಾವೇ ಅಂತಹವರನ್ನು ಗುರುತಿಸಿ ಪಾಸ್ ವಿತರಿಸುತ್ತೇವೆ ಎಂದು ದ.ಕ. ಜಿಲ್ಲಾ ಕೃಷಿ ಇಲಾಖೆಯ ಜಂಟಿ ನೀರ್ದೇಶಕಿ ಸೀತಾ ತಿಳಿಸಿದ್ದಾರೆ.
Related Articles
ಫೆಬ್ರವರಿಯಿಂದ ಎಪ್ರಿಲ್ ತನಕ ಬಹುತೇಕ ರೈತರು ತರಕಾರಿ ಬೆಳೆಯುವುದು ಕ್ರಮ. ಸೌತೆ, ತೊಂಡೆಕಾಯಿ, ಹರಿವೆ, ಬದನೆ ಮೊದಲಾದ ತರಕಾರಿಗಳನ್ನು ಬೆಳೆದ ರೈತರು ಈಗ ಮಾರುಕಟ್ಟೆ ಇಲ್ಲದೆ ಪರದಾಡುತ್ತಿದ್ದಾರೆ. ಕೆಲವು ರೈತರು ಕಡಿಮೆ ಬೆಲೆಗೆ ಅಥವಾ ಉಚಿತವಾಗಿ ಸ್ಥಳೀಯರಿಗೆ ಒದಗಿಸುತ್ತಿದ್ದಾರೆ.
Advertisement
ಮಾರ್ಚ್-ಎಪ್ರಿಲ್‌ನಲ್ಲಿ ಸಹಕಾರಿ ಬ್ಯಾಂಕ್‌ಗಳಿಗೆ ಸಾಲದ ಕಂತು ಮರುಪಾವತಿ ಮಾಡಬೇಕಾದ ರೈತ ಅಡಿಕೆಗೆ ಮಾರುಕಟ್ಟೆ ಇಲ್ಲದ ಕಾರಣ ಸಾಲದ ಕಂತು ಪಾವತಿಸಲು ಸಾಧ್ಯವಿಲ್ಲದಂತಾಗಿದೆ. ರಾಜ್ಯ ಸರಕಾರ ಸಾಲದ ಕಂತು ಮರುಪಾವತಿ ಮಾಡಲು ಅವಧಿ ಮುಂದುವರಿಸಿದ್ದರೂ ಸಹಕಾರಿ ಬ್ಯಾಂಕ್‌ಗಳು ಜನರಿಗೆ ಒತ್ತಡ ಹೇರುವ ಭೀತಿ ಇದೆ.
ಗ್ರೀನ್ಪಾಸ್ಕೃಷಿ ಚಟುವಟಿಕೆ ನಿರಂತರವಾಗಿರಬೇಕು. ಅದಕ್ಕೆ ಯಾವುದೇ ತೊಂದರೆ ನೀಡಬಾರದು ಎಂಬ ಆದೇಶವಿದೆ. ಕಾರ್ಮಿಕರ ನಡುವೆ ಸಾಮಾಜಿಕ ಅಂತರ ಕಾಯ್ದುಕೊಂಡು ಕೃಷಿ ಕೆಲಸ ಮಾಡಿಸುವುದಕ್ಕೂ ಅವಕಾಶವಿದೆ. ಅದಕ್ಕಾಗಿ ಕೃಷಿ ಇಲಾಖೆ ಗ್ರೀನ್‌ಪಾಸ್ ನೀಡುತ್ತಿದೆ.
– ಎಚ್.ಆರ್. ನಾಯಕ್
ಉಪನಿರ್ದೇಶಕರು, ತೋಟಗಾರಿಕಾ ಇಲಾಖೆ, ದಕ್ಷಿಣ ಕನ್ನಡ ಜಿಲ್ಲೆ