ಬೆಂಗಳೂರು: ನಿರ್ವಹಣಾ ಅವಧಿ ಬಾಕಿಯಿರುವ ರಸ್ತೆಗಳಲ್ಲಿನ ಗುಂಡಿ ದುರಸ್ತಿಗೆ ಮುಂದಾಗದ ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ ಪ್ರಸಾದ್ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ಮಂಗಳವಾರ ಎಂಟು ವಲಯಗಳ ಜಂಟಿ ಆಯುಕ್ತರು, ಮುಖ್ಯ ಎಂಜಿನಿ ಯರ್‌ಗಳು, ಜನಪ್ರತಿನಿಧಿಗಳೊಂದಿಗೆ ಮಲ್ಲೇಶ್ವರದ ಐಪಿಪಿ ಕೇಂದ್ರದಲ್ಲಿ ಮೇಯರ್ ಸಂಪತ್‌ರಾಜ್ ನೇತೃತ್ವದಲ್ಲಿ ಸಭೆ ನಡೆಸಿದ ಅವರು, ರಸ್ತೆಗಳನ್ನು ಯಾವ ಗುತ್ತಿಗೆದಾರರಿಗೆ ನೀಡಲಾಗಿದೆ. ಯಾವ ರಸ್ತೆ ನಿರ್ವಹಣೆ ಅವಧಿ ಪೂರ್ಣ ಗೊಂಡಿಲ್ಲ ಎಂಬ ಮಾಹಿತಿ ಕಲೆ ಹಾಕು ವಂತೆ ಅಧಿಕಾರಿಗಳಿಗೆ ಸೂಚಿಸಿದರು.
ರಸ್ತೆ ನಿರ್ಮಿಸುವ ಸಂಸ್ಥೆ ರಸ್ತೆಯನ್ನು ಮೂರು ವರ್ಷಗಳ ಕಾಲ ನಿರ್ವಹಣೆ ಮಾಡಬೇಕು. ಗುತ್ತಿಗೆದಾರರು ಯಾವ ರಸ್ತೆಗಳ ಡಾಂಬರೀಕರಣ ಕಾಮಗಾರಿ ನಡೆಸಿದ್ದಾರೆ. ಆ ರಸ್ತೆಗಳ ನಿರ್ವಹಣಾ ಅವಧಿಯ ಬಗ್ಗೆ ಪಾಲಿಕೆಯ ವೈಟ್ ಸೈಟ್‌ನಲ್ಲಿ ಮಾಹಿತಿ ಪ್ರಕಟಿಸುವಂತೆ ಸೂಚಿಸಿದ ಅವರು, ರಸ್ತೆಗುಂಡಿಗಳ ದುರಸ್ತಿಗೆ ಹೆಚ್ಚುವರಿ ಅನುದಾನ ನೀಡ ದಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ರಸ್ತೆಗುಂಡಿಗಳನ್ನು ಮುಚ್ಚಿರುವ ಬಗ್ಗೆ ಮಾಹಿತಿ ಪಡೆಯುವ ಉದ್ದೇಶದಿಂದ ಭಾನುವಾರ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ಸಭೆ ಕರೆಯಲಾಗಿದೆ. ಆ ಸಭೆಯಲ್ಲಿ ಅವರು ಎಷ್ಟು ಗುಂಡಿಗಳನ್ನು ಮುಚ್ಚಿಸಿದ್ದಾರೆ ಎಂಬ ಮತ್ತೆ ಸಂಪೂರ್ಣ ಮಾಹಿತಿ ನೀಡಬೇಕು. ಯಾವುದೇ ಕ್ರಮಕ್ಕೆ ಮುಂದಾಗದಂತಹ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗು ವುದು ಎಂದು ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಮಳೆ ಬೀಳುವ ಸ್ಥಳದ ಮಾಹಿತಿ ತಂತ್ರಾಂಶದ ಕುರಿತು ದೆಹಲಿ ಮೂಲಕ ಸಂಸ್ಥೆ ಪ್ರಾತ್ಯಕ್ಷಿತೆಯ ಕುರಿತು ಮಾಹಿತಿ ನೀಡಿದ ಅವರು, ಈ ತಂತ್ರಾಂಶ ನಗರದಲ್ಲಿ ಮಳೆಯಾಗುವ ಹಾಗೂ ಎಷ್ಟು ಪ್ರಮಾಣದ ಮಳೆಯಾಗಲಿದೆ ಎಂಬ ಮಾಹಿತಿಯನ್ನು ಐದು ಗಂಟೆಗಳ ಮೊದಲೇ ನೀಡಲಿದೆ. ಆ ಮೂಲಕ ನಗರದಲ್ಲಿ ಆಗುವ ಅನಾಹುತಗಳನ್ನು ತಪ್ಪಿಸಬಹುದಾಗಿದೆ ಎಂದು ತಿಳಿಸಿದ್ದಾರೆ. ಉಪಮೇಯರ್ ಪದ್ಮಾವತಿ, ವಿಶೇಷ ಆಯುಕ್ತ ವಿಜಯ್ ಶಂಕರ್, ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿ ಇದ್ದರು.
ನಗರದ ರಸ್ತೆಗಳಲ್ಲಿನ ಯಮರೂಪಿ ಗುಂಡಿಗಳನ್ನು ಮುಚ್ಚಲು ಶೀಘ್ರವೇ ಮುಂದಾಗದಿದ್ದರೆ ಮುಖ್ಯ ಎಂಜಿನಿಯರ್‌ಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು.
-ಸಂಪತ್‌ರಾಜ್, ಮೇಯರ್