Advertisement
ಜಯನಗರ ನಿವಾಸಿ ವಿಜಯ್ ಭಾರದ್ವಾಜ್ ಬಂಧಿತ. ಈಗಾಗಲೇ ಎಂಬಿಬಿಎಸ್ ಪದವಿ ವ್ಯಾಸಂಗ ಮುಗಿಸಿ, ಕೆಂಪೇಗೌಡ ವೈದ್ಯಕೀಯ ಕಾಲೇಜಿನಲ್ಲಿ ಸ್ನಾತಕೋತ್ತರ ವೈದ್ಯಕೀಯ ಪದವಿ ವ್ಯಾಸಂಗ ಮಾಡುತ್ತಿದ್ದಾನೆ. ಸಿಗ್ನಲ್‌ನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ಕಾರಿನ ನಂಬರ್ ನೆರವಿನಿಂದ ಆರೋಪಿ ಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Related Articles
Advertisement
ಆದರೂ ಆರೋಪಿ ಅವರ ಕಾರು ಹಿಂಬಾಲಿಸಿಕೊಂಡೇ ಬರುತ್ತಿದ್ದ. ಗೊರಗುಂಟೆಪಾಳ್ಯದ ಬಳಿ ಮತ್ತೂಮ್ಮೆ ಕಾರು ಅಡ್ಡಗಟ್ಟಲು ಯತ್ನಿಸಿದ್ದ. ಇದರಿಂದ ಹೆದರಿದ ಮಹಿಳೆ, ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಸಹಾಯ ಕೋರಿದ್ದರು ಠಾಣೆಯಲ್ಲೇ ತಾಯಿ ಮಕ್ಕಳಿಗೆ ರಕ್ಷಣೆ ಫೋನ್ ಕರೆ ಬರುತ್ತಿದ್ದಂತೆ ಆರ್‌ಎಂಸಿ ಯಾರ್ಡ್ ಠಾಣೆಯ ಹೊಯ್ಸಳ ಗಸ್ತು ವಾಹನದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದರು.
ಗಸ್ತುವಾಹನ ನೋಡಿದ ತಕ್ಷಣ ಆರೋಪಿ ಅಲ್ಲಿಂದ ಪರಾರಿಯಾದ ಎಂದು ಪೋಲೀಸರು ಮಾಹಿತಿ ನೀಡಿದ್ದಾರೆ. ಘಟನೆ ನಡೆದ ವೇಳೆ ಮುಂಜಾನೆ 4 ಗಂಟೆಯಾಗಿದ್ದರಿಂದ ಮಹಿಳೆ ಹಾಗೂ ಅವರ ಮಕ್ಕಳನ್ನು ಹೊಯ್ಸಳ ಗಸ್ತು ವಾಹನದ ಸಿಬ್ಬಂದಿ, ಆರ್‌ಎಂಸಿ ಯಾರ್ಡ್ ಠಾಣೆಗೆ ಕರೆದೊಯ್ದಿದ್ದು, ಬೆಳಗ್ಗೆವರೆಗೂ ತಾಯಿ-ಮಕ್ಕಳಿಗೆ ಆಶ್ರಯ ನೀಡಿದ್ದರು. ನಂತರ ಸುರಕ್ಷತವಾಗಿ ಮನೆಗೆ ಕಳುಹಿಸಿಕೊಟ್ಟಿದ್ದರು.
ಸಿಸಿ ಕ್ಯಾಮೆರಾ ನೀಡಿದ ಸುಳಿವು
ಘಟನೆ ನಡೆದ ಸ್ಥಳದ ಆಧಾರ ಹಾಗೂ ಆ ಕಾರಿನ ನಂಬರ್ ನೀಡಿ ಅಮೃತಹಳ್ಳಿ ಠಾಣೆಗೆ ಮಹಿಳೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಾರಿನ ಸಂಖ್ಯೆ ಪರಿಶೀಲಿಸಿ ಹಾಗೂ ಸಿಗ್ನಲ್‌ಗಳಲ್ಲಿನ ಸಿಸಿ ಕ್ಯಾಮೆರಾ ವೀಕ್ಷಿಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಮೃತಹಳ್ಳಿ ಪೊಲೀಸರು ಹೇಳಿದರು.
ಮಹಿಳೆ ಕಾರಿನಲ್ಲಿ ತೆರಳುತ್ತಿದ್ದಾಗ ಪೊಲೀಸ್ ಕಂಟ್ರೋಲ್ ರೂಮ್‌ಗೆ ಕರೆ ಮಾಡಿ ಸಂಭಾಷಣೆ ನಡೆಸುತ್ತಿರುವುದನ್ನು ಜತೆಗಿದ್ದವರು ವಿಡಿಯೋ ಮಾಡಿದ್ದರು. ಎದುರಿಗಿನ ಕಾರಿನಲ್ಲಿದ್ದ ವ್ಯಕ್ತಿ ಇವರ ಕಾರಿನ ಸಮೀಪಕ್ಕೆ ಆಗಮಿಸುತ್ತಿರುವುದು, ಮಹಿಳೆ ಆತಂಕಗೊಂಡಿರುವುದು ಇದರಲ್ಲಿ ದಾಖಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಹಿಂದೆ ಹರಿದಾಡಿತ್ತು.