Advertisement

ವರಂಗ : ಮೀನು ಹಿಡಿಯುವಾಗ ಬಿದ್ದು ಸಾವು

12:22 AM May 14, 2022 | Team Udayavani |

ಹೆಬ್ರಿ: ವರಂಗ ಗ್ರಾಮದ ಬೈದಡಪು ಹೊಳೆಯ ದಡದಲ್ಲಿ ನಿಂತು ಹೊಳೆಗೆ ಬಲೆಯನ್ನು ಹಾಕಿ ಮೀನು ಹಿಡಿಯುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ಗುರುವಾರ ಸಂಜೆ ನಡೆದಿದೆ.

Advertisement

ಶ್ರೀಧರ ಪೂಜಾರಿ (69) ಮೃತಪಟ್ಟವರು. ಹೊಳೆಗೆ ಬಲೆಯನ್ನು ಹಾಕಿ ಮೀನು ಹಿಡಿಯುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಹೊಳೆಯ ನೀರಿಗೆ ಬಿದ್ದು ಕೆಸರಿನಲ್ಲಿ ಸಿಲುಕಿ ಮೇಲಕ್ಕೆ ಬರಲು ಆಗದೇ ಮೃತಪಟ್ಟಿದ್ದು ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪತ್ನಿ ಸಾವಿನಿಂದ ನೊಂದು ಆತ್ಮಹತ್ಯೆ
ಸಾಗರ: ಪತ್ನಿ ಸಾವಿನಿಂದ ಮನನೊಂದು ಮಾನಸಿಕವಾಗಿ ಖನ್ನತೆಗೆ ಒಳಗಾಗಿದ್ದ ಕೃಷಿಕ ನಾರಾಯಣಪ್ಪ (70) ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ತಾಲೂಕಿನ ಕಾರ್ಗಲ್‌ನಲ್ಲಿ ನಡೆದಿದೆ.
ಕಾರ್ಗಲ್‌ ಸಮೀಪದ ಕಣಪಗಾರು ಮಕ್ಕಿಮನೆ ಗ್ರಾಮದ ನಿವಾಸಿ ನಾರಾಯಣಪ್ಪ ತಮ್ಮ ಮನೆ ಸಮೀಪವಿರುವ ಅರಣ್ಯ ಪ್ರದೇಶದಲ್ಲಿ ಅವರ ಶವ ಪತ್ತೆಯಾಗಿದೆ. ಕಾರ್ಗಲ್‌ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next