Advertisement

ಪ್ರಿಯಕರಿನಿಗಾಗಿ ಮಗುವಿನ ಹತ್ಯೆ: ʼದೃಶ್ಯಂʼ ಸಿನಿಮಾ ನೋಡಿ ಪೊಲೀಸರ ದಿಕ್ಕು ತಪ್ಪಿಸಿದ ಮಹಿಳೆ

02:31 PM Jul 02, 2023 | Team Udayavani |

ಸೂರತ್:‌ ತಾಯಿಯೊಬ್ಬಳು ತನ್ನ ಎರಡೂವರೆ ವರ್ಷದ ಮಗುವನ್ನು ಕೊಂದು ಕೃತ್ಯವನ್ನು ಮರೆಮಾಚಿ ಪೊಲೀಸರ ದಿಕ್ಕು ತಪ್ಪಿಸಲು ಯತ್ನಿಸಿರುವ ಘಟನೆ ಗುಜರಾತ್‌ನ ಸೂರತ್ ಜಿಲ್ಲೆಯಲ್ಲಿ ನಡೆದಿದೆ.

Advertisement

ಘಟನೆಯ ಹಿನ್ನೆಲೆ: ಸೂರತ್‌ನ ದಿಂಡೋಲಿ ಪ್ರದೇಶದಲ್ಲಿ ಕಟ್ಟಡದ ಕೆಲಸವನ್ನು ಮಾಡುತ್ತಿದ್ದ ನಯನಾ ಮಾಂಡವಿ ತನ್ನ ಎರಡೂವರೆ ವರ್ಷದ ಮಗು ವೀರ್ ಮಾಂಡವಿ ನಾಪತ್ತೆಯಾಗಿರುವ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತಾನು ಕೆಲಸ ಮಾಡುತ್ತಿದ್ದ ಸೈಟ್‌ ನಿಂದ ತನ್ನ ಮಗ ಕಾಣೆಯಾಗಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾಳೆ. ಪೊಲೀಸರು ನಾಪತ್ತೆ ಪ್ರಕರಣವನ್ನು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಮಹಿಳೆ ಹೇಳಿದ ಸ್ಥಳದ ಸಿಸಿಟಿವಿಯನ್ನು ಪೊಲೀಸರು ಪರಿಶೀಲಿಸಿದ್ದಾರೆ. ಆದರೆ ಮಗು ಆ  ಜಾಗದಿಂದ ಹೊರ ಹೋಗುವುದು ಪೊಲೀಸರಿಗೆ ಪತ್ತೆಯಾಗಿಲ್ಲ. ಇದಾದ ಬಳಿಕ ಪೊಲೀಸ್‌ ಡಾಗ್‌ ಬಳಸಿ ಪರಿಶೀಲಿಸಿದ್ದಾರೆ. ಆ ವೇಳೆಯೂ ಪೊಲೀಸರಿಗೆ ಸೂಕ್ತವಾಗಿ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಪೊಲೀಸರು ಮಗುವಿನ ತಾಯಿ ಮೇಲೆಯೇ ಶಂಕೆ ವ್ಯಕ್ತಪಡಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಜಾರ್ಖಂಡ್‌ನಲ್ಲಿ ನೆಲೆಸಿರುವ ತನ್ನ ಪ್ರಿಯಕರನೇ ತನ್ನ ಮಗುವನ್ನು ಅಪಹರಿಸಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ. ಮಹಿಳೆ ಮಾಡಿದ ಆರೋಪ ಸುಳ್ಳೆಂದು ಪೊಲೀಸ ತನಿಖೆಯಲ್ಲಿ ಗೊತ್ತಾಗಿದೆ. ಆಕೆಯ ಪ್ರಿಯಕರ ತಾನು ಸೂರತ್‌ ಗೆ ಬಂದೇ ಇಲ್ಲ ಎಂದಿದ್ದಾನೆ.

ತಾನೇ ಕೊಲೆ ಮಾಡಿ ಪೊಲೀಸರ ದಿಕ್ಕು ತಪ್ಪಿಸಿದಳು.. : ಪ್ರಕರಣದ ಬಗ್ಗೆ ಯಾವುದೇ ಸುಳಿವು ಸಿಗದಿದ್ದಾಗ ಪೊಲೀಸರು ಮಗುವಿನ ತಾಯಿಯನ್ನೇ ತೀವ್ರವಾಗಿ ವಿಚಾರಣೆ ನಡೆಸಿದ್ದಾರೆ. ಅಂತಿಮವಾಗಿ ತನ್ನ ಮಗುವನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾಳೆ. ಆದರೆ ಶವವನ್ನು ಎಲ್ಲಿ ಬಚ್ಚಿಟ್ಟಿದ್ದಾಳೆ ಎಂದು ಕೇಳಿದಾಗ ಆರಂಭದಲ್ಲಿ ಸುಳ್ಳು ಮಾಹಿತಿ ನೀಡಿ ಪೊಲೀಸರ ದಿಕ್ಕು ತಪ್ಪಿಸಿದ್ದಾಳೆ. ಶವವನ್ನು ಗುಂಡಿಯಲ್ಲಿ ಹೂತಿಟ್ಟಿದ್ದೇನೆ ಎಂದು ಹೇಳಿದ್ದಾಳೆ. ಪೊಲೀಸರು ಪರಿಶೀಲಿಸಿದಾಗ ಶವ ಅಲ್ಲಿರಲಿಲ್ಲ. ನಂತರ ಶವವನ್ನು ಕೊಳಕ್ಕೆ ಎಸೆದಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾಳೆ. ಆದರೆ ಪೊಲೀಸರಿಗೆ ಅಲ್ಲಿಯೂ ಏನೂ ಸಿಗಲಿಲ್ಲ. ವಿಚಾರಣೆ ಇನ್ನಷ್ಟು ತೀವ್ರಗೊಳಿಸಿದ ಬಳಿಕ ಶವವನ್ನು ನಿರ್ಮಾಣ ಹಂತದ ಕಟ್ಟಡದ  ಶೌಚಾಲಯಕ್ಕಾಗಿ ತೋಡಲಾಗಿರುವ ಗುಂಡಿಗೆ ಎಸೆದಿದ್ದೇನೆ ಎಂದು ಸತ್ಯವನ್ನು ಹೇಳಿದ್ದಾಳೆ.

ಪ್ರಿಯಕರಿನಿಗಾಗಿ ಸ್ವಂತ ಮಗನ ಕೊಲೆ; ಸಿನಿಮಾ ನೋಡಿ ಕೃತ್ಯದಿಂದ ಪಾರಿಗೆ ಯತ್ನ:

ತನ್ನ ಮಗನನ್ನು ಕೊಂದು ಶವವನ್ನು ಬಚ್ಚಿಟ್ಟಿರುವ ಉದ್ದೇಶದ ಬಗ್ಗೆ ಮಹಿಳೆಯನ್ನು ಕೇಳಿದಾಗ, ನಾನು ಮೂಲತಃ ಜಾರ್ಖಂಡ್‌ನವಳು ಮತ್ತು ಅಲ್ಲಿ ನನ್ನ ಪ್ರಿಯಕರನಿದ್ದಾನೆ. ಒಂದು ವೇಳೆ ನಾನು ಮಗುವಿನೊಂದಿಗೆ ಅಲ್ಲಿಗೆ ಬಂದರೆ ಆತ ನನ್ನನು ಬರಮಾಡಿಕೊಳ್ಳುವುದಿಲ್ಲ ಎಂದಿದ್ದ ಆ ಕಾರಣಕ್ಕಾಗಿ ಈ ಕೃತ್ಯವನ್ನು ಎಸೆಗಿದೆ ಎಂದಿದ್ದಾಳೆ.

Advertisement

ಕೃತ್ಯವನ್ನು ಮರೆಮಾಚಲು ಮಹಿಳೆ ʼದೃಶ್ಯಂʼ ಸಿನಿಮಾವನ್ನು ನೋಡಿದ್ದಾಳೆ. ಸಿನಿಮಾದಲ್ಲಿರುವ ವಿಧಾನವನ್ನು ಅನುಸರಿಸಿ ಕೃತ್ಯದಿಂದ ಪಾರಾಗಲು ಯತ್ನಿಸಿದ್ದಳು ಎಂದು ವಿಚಾರಣೆಯಲ್ಲಿ ಪೊಲೀಸರ ಮುಂದೆ ಹೇಳಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next