Advertisement

ವರ್ತೂರು ಅಪಹರಣ ಕೇಸ್‌: ಆರೋಪಿಗೆ ಗುಂಡೇಟು

01:11 PM Dec 12, 2021 | Team Udayavani |

ಬೆಂಗಳೂರು: ಮಾಜಿ ಸಚಿವ ವರ್ತೂರು ಪ್ರಕಾಶ್‌ ಅಪಹರಣ ಪ್ರಕರಣದಲ್ಲಿ ಜಾಮೀನು ಪಡೆದು, ಆಟೋ ಚಾಲಕ ವಿಜಯಕುಮಾರ್‌ ಕೊಲೆ ಪ್ರಕರ ಣದಲ್ಲಿ ತಲೆ ಮರೆಸಿಕೊಂಡಿದ್ದ ಪ್ರಮುಖ ಆರೋಪಿ ರೌಡಿಶೀಟರ್‌ ಲೋಹಿತ್‌ ಅಲಿಯಾಸ್‌ ರೋಹಿತ್‌ (36)ಗೆ ಇಂದಿ ರಾನಗರ ಪೊಲೀಸರು ಗುಂಡೇಟಿನ ರುಚಿ ತೋರಿಸಿದ್ದಾರೆ.

Advertisement

ಇದೇ ವೇಳೆ ಘಟನೆಯಲ್ಲಿ ಕಾನ್‌ಸ್ಟೇಬಲ್‌ ಮೊಯಿನುಲ್ಲಾ ಎಂಬುವರ ಎಡಗೈಗೆ ಆರೋಪಿ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆ ಯುತ್ತಿದ್ದಾರೆ. ಆರೋಪಿಯ ಬಲಗಾಲಿಗೆ ಗುಂಡೇಟು ಬಿದ್ದಿದ್ದು, ಸರ್ಕಾರಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿ ದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

2021ರ ಜುಲೈ 5ರಂದು ಇಂದಿರಾನಗರ ಠಾಣೆ ವ್ಯಾಪ್ತಿಯಲ್ಲಿ ಆಟೋ ಚಾಲಕ ಹಾಗೂ ಫೈನಾನ್ಸಿಯರ್‌ ವಿಜಯ್‌ ಕುಮಾರ್‌ ಎಂಬುವರನ್ನು ತನ್ನ ಸಹಚರರ ಜತೆ ಸೇರಿ ಅಪಹರಿಸಿ, ತಮಿಳುನಾಡಿನ ಕೃಷ್ಣಗಿರಿಯ ಕೊಂಗನಪಲ್ಲಿ ರಸ್ತೆಯ ಅರಣ್ಯ ಪ್ರದೇಶದಲ್ಲಿ ಅಕ್ರಮ ಬಂಧನದಲ್ಲಿರಿಸಿದ್ದರು.

ಇದನ್ನೂ ಓದಿ:- ಮಾನಸಿಕ ಸದೃಢಳಾಗಿದ್ದೇನೆ, ಅಮಾನತು ತೆರವುಗೊಳಿಸಿ: ಮಂಗಲಾ ಕಾಂಬಳೆ

ಆತ ಹಣ ಕೊಡಲು ನಿರಾಕರಿಸಿದಾಗ ಮಾರಕಾಸ್ತ್ರಗಳಿಂದ ಹತ್ಯೆಗೈದು ತಲೆಮರೆಸಿಕೊಂಡಿದ್ದರು. ಈ ಪ್ರಕರಣದಲ್ಲಿ 9 ಮಂದಿಯನ್ನು ಇಂದಿರಾನಗರ ಪೊಲೀಸರು ಬಂಧಿ ಸಿದ್ದರು. ಆದರೆ, ಪ್ರಕರಣದ ಎರಡನೇ ಆರೋಪಿಯಾಗಿರುವ ಲೋಹಿತ್‌ ತಲೆಮರೆಸಿಕೊಂಡಿದ್ದ. ಈತನ ಪತ್ತೆ ಗಾಗಿ ಹಲಸೂರು ಉಪವಿಭಾಗದ ಎಸಿಪಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಈ ತಂಡ ಆರೋಪಿ ಚಲನವಲನಗಳ ಮೇಲೆ ನಿಗಾವಹಿಸಿತ್ತು.

Advertisement

ಕೊಲೆ ಬಳಿಕ ಐದು ಪ್ರಕರಣದಲ್ಲಿ ಭಾಗಿ: ಆಟೋ ಚಾಲಕ ವಿಜಯ್‌ ಕುಮಾರ್‌ ಕೊಲೆ ಬಳಿಕ, ಬೈಯಪ್ಪನಹಳ್ಳಿಯಲ್ಲಿ ಉದ್ಯಮಿಯೊಬ್ಬರ ಕೊಲೆ ಯತ್ನ, ಎಲೆಕ್ಟ್ರಾನಿಕ್‌ ಸಿಟಿ, ಪರಪ್ಪ ನಅಗ್ರಹಾರ, ಹೆಬ್ಬಗೋಡಿ ಠಾಣೆ ವ್ಯಾಪ್ತಿಯಲ್ಲಿ ದರೋಡೆ, ಸುಲಿಗೆ ಮಾಡಿದ್ದ. ಅಲ್ಲದೆ, ಆಂಧ್ರಪ್ರದೇಶದ ವಿಕೋಟದಲ್ಲಿ ಬಾಡಿಗೆ ಇನ್ನೋವಾ ಕ್ಯಾಬ್‌ ಬುಕ್‌ ಮಾಡಿದ್ದ.

ಕಾರಿನಲ್ಲಿ ಕುಳಿತು ಸ್ವಲ್ಪದೂರ ಹೋಗುತ್ತಿದ್ದಂತೆ ಕ್ಯಾಬ್‌ ಚಾಲಕನಿಗೆ ಮಾರಕಾಸ್ತ್ರ ತೋರಿಸಿ, ಕಾರು ಕದ್ದು ಪರಾರಿಯಾಗಿದ್ದ. ನಗರಕ್ಕೆ ತಂದು ನಂಬರ್‌ ಪ್ಲೇಟ್‌ ಬದಲಿಸಿ ಸಂಚರಿಸುತ್ತಿದ್ದ. ಅಲ್ಲದೆ, ನಗರದಲ್ಲಿ ಲೋಹಿತ್‌ ವಿರುದ್ಧ ಎಚ್‌ಎಸ್‌ಆರ್‌ ಲೇಔಟ್‌, ಹಲಸೂರು, ಇಂದಿರಾನಗರ, ಕೋಲಾರ ಸೇರಿ ವಿವಿಧ ಠಾಣೆಗಳಲ್ಲಿ ಅಪಹರಣ, ಕೊಲೆ, ದರೋಡೆ, ಹಲ್ಲೆ ಸೇರಿ 17 ಪ್ರಕರಣಗಳು ದಾಖಲಾಗಿವೆ. ಎಚ್‌ಎಸ್‌ಆರ್‌ ಲೇಔಟ್‌ ಠಾಣೆಯಲ್ಲಿ ರೌಡಿಪಟ್ಟಿ ತೆರೆಯಲಾಗಿದೆ ಎಂದು ಪೊಲೀಸರು ಹೇಳಿದರು.

ಆರೋಪಿ ಬಲಗಾಲಿಗೆ ಗುಂಡು

ಕಳವು ಮಾಡಿದ್ದ ಇನೋವಾ ಕಾರಿನ ನಂಬರ್‌ ಪ್ಲೇಟ್‌ ಬದಲಾಯಿಸಿ ಓಡಾಡುತ್ತಿದ್ದ. ಈ ಮಾಹಿತಿ ಮೇರೆಗೆ ಆತನಿಗಾಗಿ ಶೋಧ ನಡೆಸಲಾಗುತ್ತಿತ್ತು. ಈ ಮಧ್ಯೆ ಶುಕ್ರವಾರ ರಾತ್ರಿ ಪಿಎಸ್‌ಐ ಅಮರೇಶ್‌, ಕಾನ್‌ಸ್ಟೇಬಲ್‌ ಮೊಯಿನುಲ್ಲಾ ಹಾಗೂ ಇತರೆ ಸಿಬ್ಬಂದಿ ಠಾಣೆ ವ್ಯಾಪ್ತಿಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದರು.

ಆಗ ಆರೋಪಿ ಪೊಲೀಸರನ್ನು ಕಂಡು ಕಾರು ತಿರುಗಿಸಿಕೊಂಡು ಪರಾರಿಯಾಗಿದ್ದ. ನಂತರ ರಸ್ತೆಗಳಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸರಿಗೆ ಎರಡು ಬಾರಿ ಸಿಕ್ಕಿ ಪರಾರಿಯಾಗಿದ್ದ. ಈ ವೇಳೆ ಕಾರಿನ ನಂಬರ್‌ ಗಮನಿಸಿ, ಪೊಲೀಸ್‌ ಸಹಾಯವಾಣಿಗೆ ಕರೆ ಮಾಡಿ, ವಾಹನ ನಿಲ್ಲಿಸುವಂತೆ ಸೂಚಿಸಲಾಗಿತ್ತು. ನಂತರ ಹಿರಿಯ ಅಧಿಕಾರಿಗಳಿಗೂ ಮಾಹಿತಿ ನೀಡಲಾಗಿತ್ತು. ಸ್ಥಳಕ್ಕೆ ಬಂದ ಇನ್‌ಸ್ಪೆಕ್ಟರ್‌ ಹರೀಶ್‌ ಆರೋಪಿಯ ಬಗ್ಗೆ ಮಾಹಿತಿ ಸಂಗ್ರಹಿಸಿ ಹಿಂಬಾಲಿಸಿ ದ್ದಾರೆ. ಇಂದಿರಾನಗರ ಮುಖ್ಯ ರಸ್ತೆಯಲ್ಲಿ ಆರೋಪಿಯನ್ನು ಹಿಂಬಾಲಿಸಲಾಗಿತ್ತು.

ಸುಮಾರು ಒಂದು ಗಂಟೆಗಳ ಕಾಲ ಬೆನ್ನತ್ತಿದ್ದಾಗ ಜೆ.ಬಿ.ನಗರ ಠಾಣೆಯ ಚೆಲ್ಲಘಟ್ಟ ಸಮೀಪದ ನಿರ್ಜನ ಪ್ರದೇಶಕ್ಕೆ ಹೋಗಿದ್ದ. ಮುಂದೆ ಹೋಗಲು ಜಾಗವಿಲ್ಲದೆ ಕಾರು ನಿಲ್ಲಿಸಿದ್ದು, ಕಾನ್‌ಸ್ಟೇಬಲ್‌ ಮೊಯಿನುಲ್ಲಾ ಆತನನ್ನು ಡಿಯಲು ಹೋದಾಗ ಅವರ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದಾನೆ. ಆಗ ಇನ್‌ಸ್ಪೆಕ್ಟರ್‌ ಹರೀಶ್‌ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಆರೋಪಿಗೆ ಶರಣಾಗಲು ಸೂಚಿಸಿದ್ದಾರೆ. ಆದರೂ ಆರೋಪಿ ಹಲ್ಲೆಗೆ ಮುಂದಾದಾಗ ಪಿಎಸ್‌ಐ ಅಮರೇಶ ಆತ್ಮರಕ್ಷಣೆಗಾಗಿ ಆರೋಪಿ ಬಲಗಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next