Advertisement
ಸುಭಾಷ್ ನಗರದ ಕ್ರಿಶ್ಚಿಯನ್ ಕಾಲೋನಿಯ ನಿವೃತ್ತ ಶಿಕ್ಷಕಿ ವೀಣಾ ಜೋದಿನಿ ಮತ್ತು ಇವರ ಮಗ ನಿತಿನ್ ಸಾವನ್ನಪ್ಪಿದವರಾಗಿದ್ದು, ಇವರ ಸಾವಿನ ಸುತ್ತ ಹಲವು ಅನುಮಾನ ಸೃಷ್ಟಿಸಿದೆ.
Related Articles
Advertisement
ಹಣಕ್ಕಾಗಿ ತಾಯಿಯನ್ನು ಪೀಡಿಸುತ್ತಿದ್ದನು ಎನ್ನಲಾಗಿದ್ದು, ಕ್ರಿಸ್ಮಸ್ ಹಬ್ಬವನ್ನು ತಾಯಿ -ಮಗ ಆಚರಿಸಿದ್ದರು. ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಬೇಕಾಗಿತ್ತು. ಅಷ್ಟರಲ್ಲೆ ಹೊಸ ವರ್ಷದ ಮೊದಲ ದಿನ ತನ್ನ ಮನೆಯಲ್ಲಿ ನಿವೃತ್ತ ಶಿಕ್ಷಕಿ ವೀಣಾ ಜೋದಿನಿರ ಮೃತದೇಹ ಮನೆಯ ಕಿಟಕಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ನಿವೃತ್ತ ಶಿಕ್ಷಕಿ ಎತ್ತರವಾಗಿದ್ದು, ಆದರೆ ಅಷ್ಟು ಎತ್ತರ ಇರದ ಕಿಟಕಿಗೆ ನೇಣು ಬಿಗಿದುಕೊಳ್ಳಲು ಸಾಧ್ಯವೇ ಎಂಬ ಅನುಮಾನ ಸೃಷ್ಟಿಯಾಗಿ ಮಗನೇ ತಾಯಿಯನ್ನು ಕೊಂದಿರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು.
ಪಶ್ಚಿಮ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಮಿಮ್ಸ್ ಗೆ ರವಾನಿಸಿದ್ದರು, ತಾಯಿಯ ಸಾವಿನ ಬಗ್ಗೆ ನಿತಿನ್ ನನ್ನ ಪೊಲೀಸರು ವಿಚಾರಣೆ ಮಾಡಿದ್ದರು.
ತಾಯಿಯ ಶವ ಶವಗಾರದಲ್ಲಿ ಇರುವ ಸಮಯದಲ್ಲಿ ಮಗನ ಶವ ಕೂಡ ಸೋಮವಾರ ಬೆಳಗ್ಗೆ ವಿ ಸಿ ಫಾರಂ ಗೇಟ್ ಬಳಿಯ ರೈಲ್ವೆ ಹಳಿ ಮೇಲೆ ಪತ್ತೆಯಾಗಿದ್ದು, ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ತಾಯಿ ಕೊಲೆಗೈದ ಪ್ರಾಯಶ್ಚಿತ್ತಕ್ಕೆ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿ ಕೊಂಡಿದ್ದಾನಾ ಅಥವಾ ತಾಯಿಯ ಸಾವಿನಿಂದ ಮನನೊಂದಿದ್ದನಾ, ಒಟ್ಟಾರೆ ತಾಯಿಯ ಸಂಶಯಾಸ್ಪದ ಸಾವು, ಮಗನ ಆತ್ಮಹತ್ಯೆ ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ನಿವೃತ್ತ ಶಿಕ್ಷಕಿಯ ಸಾವಿನ ರಹಸ್ಯವನ್ನು ಪೊಲೀಸರು ಭೇದಿಸಬೇಕಾಗಿದ್ದು, ಮಗನ ಆತ್ಮಹತ್ಯೆ ಕಾರಣವನ್ನು ಪತ್ತೆ ಹಚ್ಚಬೇಕಾಗಿದೆ.