ಪುತ್ತೂರು: ಒಳಮೊಗ್ರು ಗ್ರಾಮದ ಮೊಡಪ್ಪಾಡಿಯಲ್ಲಿ ತೋಟಕ್ಕೆ ತೆರಳಿದ್ದ ಮಹಿಳೆಯೊಬ್ಬರು ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟಿದ್ದಾರೆ.
Advertisement
ಮಂಜುನಾಥ ರೈ ಅವರ ಪತ್ನಿ ಹೇಮಲತಾ (47) ಅವರು ಮನೆ ಸಮೀಪದ ತೋಟದಲ್ಲಿ ತೆಂಗಿನಕಾಯಿ ತೆಗೆಯುತ್ತಿದ್ದಾಗ ಕಾಲು ಜಾರಿ ಕೆರೆಗೆ ಬಿದ್ದು ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಮೃತಪಟ್ಟಿದ್ದಾರೆ.
ಉಪ್ಪುಂದ: ಕೆರ್ಗಾಲು ಗ್ರಾಮ ಪಂಚಾಯತ್ ನಂದನವನದ ಬಸವನಬೆಟ್ಟು ನಿವಾಸಿ ಸುಬ್ಬ ಯಾನೆ ಸುಭಾಷ್ (50) ಅವರು ಕಾಲು ಜಾರಿ ತೋಡಿಗೆ ಬಿದ್ದು ಮೃತಪಟ್ಟಿದ್ದಾರೆ. ಅವರು ಜು.19ರಂದು ಸಂಜೆ ಮನೆಯಿಂದ ಪೇಟೆಗೆಂದು ಹೋದವರು ನಾಪತ್ತೆಯಾಗಿದ್ದಾರೆ ಎಂದು ಪೊಲೀಸ್ ದೂರು ದಾಖಲಾಗಿತ್ತು.
Related Articles
Advertisement