Advertisement

ಕಾಸರಗೋಡು ಅಪರಾಧ ಸುದ್ಧಿಗಳು

10:31 PM May 06, 2022 | Team Udayavani |

ಮರಳು ಸಾಗಾಟ : ಮೂರು ಲಾರಿ ವಶಕ್ಕೆ
ಮಂಜೇಶ್ವರ: ಜೋಡುಕಲ್ಲು ಬೊಳ್ಳಾರು ಬಳಿಯ ಬತ್ತಿ ಹೋದ ಹೊಳೆಯಿಂದ ಮರಳು ಸಾಗಿಸುತ್ತಿದ್ದ ಮೂರು ಲಾರಿಗಳನ್ನು ಡಿವೈಎಸ್‌ಪಿ ಪಿ.ಬಾಲಕೃಷ್ಣನ್‌ ನಾಯರ್‌ ನೇತೃತ್ವದ ಪೊಲೀಸರು ವಶಪಡಿಸಿದ್ದಾರೆ.

Advertisement

ಹೊಳೆಯಲ್ಲಿ ರಾಶಿ ಹಾಕಿದ್ದ ಐದು ಲೋಡ್‌ ಮರಳನ್ನು ವಶಪಡಿಸಿದ್ದಾರೆ. ಲಾರಿ ಚಾಲಕರಾದ ಪೈವಳಿಕೆಯ ಶರೀಫ್‌, ಬಾಯಿಕಟ್ಟೆಯ ಮುಹಮ್ಮದ್‌ ಶಾಫಿ ಮತ್ತು ಕಡಂಬಾರಿನ ಅಬೂಬಕ್ಕರ್‌ ಸಿದ್ದಿಕ್‌ನನ್ನು ಬಂಧಿಸಿದ್ದಾರೆ. ಮರಳು ಮಾಫಿಯಾ ಏಜೆಂಟರಾದ ಬೊಳ್ಳಾರ್‌ ಪಜೀರ್‌ನ ಖಾಲಿದ್‌ ಮತ್ತು ಅಟ್ಟೆಗೋಳಿ ಗುಂಡಿಬೈಲಿನ ಖಾಲಿದ್‌ ವಿರುದ್ಧ ಕೇಸು ದಾಖಲಿಸಲಾಗಿದೆ.

ಲೈಂಗಿಕ ದಂಧೆ : ಬಂಧನ
ಕಾಸರಗೋಡು: ನೀಲೇಶ್ವರ ರಾಷ್ಟ್ರೀಯ ಹೆದ್ದಾರಿಯ ಟೂರಿಸ್ಟ್‌ ಹೋಂವೊಂದರಲ್ಲಿ ನಡೆಯುತ್ತಿದ್ದ ಲೈಂಗಿಕ ದಂಧೆಗೆ ಸಂಬಂಧಿಸಿ ಪ್ರಧಾನ ಸೂತ್ರಧಾರ ಬಂಗಳಂ ಕುರುಡಿಯ ಸುಮಿತ್ರನ್‌(48)ನನ್ನು ಕಾಂಞಂಗಾಡ್‌ ಡಿವೈಎಸ್‌ಪಿ ಡಾ|ವಿ.ಬಾಲಕೃಷ್ಣನ್‌ ನಿರ್ದೇಶನದಂತೆ ಪೊಲೀಸರು ಬಂಧಿಸಿದ್ದಾರೆ. ಹೊಸದುರ್ಗ ಪ್ರಥಮ ದರ್ಜೆ ಜ್ಯುಡೀಶಿಯಲ್‌ ಮೆಜಿಸ್ಟ್ರೇಟ್‌ ನ್ಯಾಯಾಲಯ(ಎರಡು) ಸುಮಿತ್ರನ್‌ಗೆ ಎರಡು ವಾರಗಳ ರಿಮಾಂಡ್‌ ವಿಧಿಸಿದೆ.

ಚಾಕು ತೋರಿಸಿ ದಾಂಧಲೆ : ಬಂಧನ
ಉಪ್ಪಳ: ಚಾಕು ತೋರಿಸಿ ಭಯದ ವಾತಾವರಣ ಸೃಷ್ಟಿಸಿ ದಾಂಧಲೆ ನಡೆಸಿದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ದಾಂಧಲೆ ನಡೆಸಿದ ಯುವಕನನ್ನು ಹಿಡಿಯಲು ಹೋದಾಗ ಪೊಲೀಸರಿಗೆ ಬೆದರಿಕೆಯೊಡ್ಡಿದ ಈತ ಉಪ್ಪಳ ಪೇಟೆ ಹಾಗು ಪರಿಸರ ಪ್ರದೇಶದಲ್ಲಿ ತಿರುಗಾಡುತ್ತಿದ್ದನು. ಪೊಲೀಸರಿಗೆ ಬೆದರಿಕೆಯೊಡ್ಡಿದ ಈತ ಕಟ್ಟಡದ ಮೇಲೆ ಹತ್ತಿ ನಿಂತಿದ್ದು, ಹತ್ತಿರ ಬಂದರೆ ಇರಿಯುವುದಾಗಿ ಬೆದರಿಕೆಯೊಡ್ಡಿದ್ದ. ಕೊನೆಗೂ ಅಗ್ನಿಶಾಮಕ ದಳ ಹಾಗು ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಈತನನ್ನು ಬಂಧಿಸಿದರು. ಈತ ತಿಂಬರ ನಿವಾಸಿಯೆಂದು ತಿಳಿದು ಬಂದಿದೆ. ಸುಮಾರು 30 ವರ್ಷ ಪ್ರಾಯದ ಈತ ಅಮಲು ಪದಾರ್ಥ ಸೇವಿಸಿರಬೇಕೆಂದು ಪೊಲೀಸರು ಶಂಕಿಸಿದ್ದಾರೆ.

Advertisement

ಪತ್ನಿ, ಪುತ್ರಿಯನ್ನು ಆಟೋ ಪಿಕ್‌ಅಪ್‌ನೊಳಗೆ
ಕಿಚ್ಚಿಟ್ಟು ಕೊಲೆಗೈದು ವ್ಯಕ್ತಿ ಬಾವಿಗೆ ಹಾರಿ ಆತ್ಮಹತ್ಯೆ
ಕಾಸರಗೋಡು: ಪತ್ನಿ ಮತ್ತು ಪುತ್ರಿಯನ್ನು ಆಟೋ ಪಿಕ್‌ಅಪ್‌ನಲ್ಲಿ ಕುಳ್ಳಿರಿಸಿ ಪೆಟ್ರೋಲ್‌ ಸುರಿದು, ಪಟಾಕಿ ಸ್ಫೋಟಿಸಿ ಕಿಚ್ಚಿಟ್ಟು ಕೊಲೆಗೈದ ಘಟನೆ ಪೆರಿಂದಲ್‌ವುಣ್‌ನಲ್ಲಿ ನಡೆದಿದೆ.

ಹಲವು ವರ್ಷಗಳಿಂದ ಕಾಸರಗೋಡಿನ ಬೋವಿಕ್ಕಾನ, ಇರಿಯಣ್ಣಿ, ಕಾನತ್ತೂರು ಮೊದಲಾದೆಡೆಗಳಲ್ಲಿ ಆಟೋದಲ್ಲಿ ಮೀನು ಕೊಂಡೊಯ್ದು ಮಾರಾಟ ಮಾಡುತ್ತಿದ್ದ ಮುಹಮ್ಮದ್‌(52) ಇತ್ತೀಚೆಗೆ ಎಂಟು ತಿಂಗಳ ಕಾಲ ಫೋಕೊÕà ಪ್ರಕರಣದಲ್ಲಿ ಮುಮ್ಮದ್‌ ರಿಮಾಂಡ್‌ನ‌ಲ್ಲಿದ್ದ. ಜೈಲಿನಿಂದ ಬಿಡುಗಡೆಗೊಂಡ ಮುಹಮ್ಮದ್‌ ಮಲಪ್ಪುರಂ ಪೂಂದಾನಂ ಕೊಂಡಿಪರಂಬ್‌ನಲ್ಲಿರುವ ಜಾಸ್ಮಿನ್‌(37) ಮನೆಗೆ ಹೋಗಿದ್ದ.

ಮುಹಮ್ಮದ್‌ ಮೇ 5 ರಂದು ಆಟೋ ಪಿಕ್‌ಅಪ್‌ನಲ್ಲಿ ಪತ್ನಿ ಮತ್ತು ಪುತ್ರಿಯರಾದ ಫಾತಿಮ ಸಫ ಮತ್ತು ಶಿಫಾನ(5)ಳನ್ನು ಹತ್ತಿಸಿ ಕೂಡಲೇ ಬಾಗಿಲು ಹಾಕಿ ಸಕ್ಕರೆ ಮಿಶ್ರಿತ ಪೆಟ್ರೋಲ್‌ ಅವರ ಮೈಮೇಲೆ ಸುರಿದು, ಚಾಲಕನ ಸೀಟಿನಲ್ಲಿ ಕುಳಿತು ಲೈಟರ್‌ ಉರಿಸಿದನು. ತತ್‌ಕ್ಷಣ್‌ ಆಟೋ ಪಿಕ್‌ಅಪ್‌ ಸ್ಫೋಟಗೊಂಡು ಬೆಂಕಿ ಹತ್ತಿಕೊಂಡಿತು. ಮುಹಮ್ಮದ್‌ ಪಿಕ್‌ಅಪ್‌ನಿಂದ ಕೆಳಗಿಳಿದು ಹತ್ತಿರದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಿರಿಯ ಪುತ್ರಿ ಶಿಫಾನ ಹೊರಗಿಳಿದಿದ್ದಾಳೆ. ಗಂಭೀರ ಗಾಯಗೊಂಡಿರುವ ಶಿಫಾನಳನ್ನು ಕಲ್ಲಿಕೋಟೆಯ ಆಸ್ಪತ್ರೆಗೆ ಸೇರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next