Advertisement

ಕಂಬದಕೋಣೆ; ವರದಕ್ಷಿಣೆ ಕಿರುಕುಳ ದೂರು ದಾಖಲು

08:02 PM May 04, 2022 | Team Udayavani |

ಉಪ್ಪುಂದ: ಸುನಂದ ಇವರು 2020ರಲ್ಲಿ ಹಿರಿಯರ ಸಮ್ಮಖದಲ್ಲಿ ನಾಗರಾಜ್‌ ಇವರೊಂದಿಗೆ ವಿವಾಹವಾಗಿದ್ದು, ಮದುವೆಯ ನಂತರ ಸೂರುಬೆಟ್ಟು ಹೌಸ್‌ ಕಂಬದಕೋಣೆ ಮನೆಯಲ್ಲಿ ವಾಸವಾಗಿದ್ದಾರೆ.

Advertisement

ಮದುವೆಗೆ 25 ಪವನ್‌ ಚಿನ್ನಾಭರಣವನ್ನು ವರದಕ್ಷಿಣೆಯಾಗಿ ನೀಡಿದ್ದು, ಮದುವೆಯ ಅರ್ಧ ಖರ್ಚನ್ನು ನೀಡಿರುತ್ತಾರೆ. ಮದುವೆಯಾದ 15 ದಿನದ ಒಳಗೆ ಪತಿ ನಾಗರಾಜ್‌ ನೊಂದಿಗೆ ಗಿರಿಜ, ಶಿವರಾಜ್‌, ಆಶಿಕಾ, ರಘುನಾಥ , ಪ್ರೇಮ ಆರೋಪಿತರೆಲ್ಲರೂ ಸೇರಿ ಮಾನಸಿಕ ಹಿಂಸೆ ನೀಡಿ ಕೀಳು ದೃಷ್ಟಿಯಿಂದ ನೋಡುತ್ತಿದ್ದರು.

ಆರೋಪಿ 2ನೇ ಗಿರಿಜ ಏನೇ ಕೆಲಸ ಮಾಡಿದರೂ ಕೂಡಾ ಮಾಡಿದ ಕೆಲಸ ಸರಿಯಾಗಿಲ್ಲ ಎಂದು ಪದೇ ಪದೇ ಕಿರುಕುಳವನ್ನು ನೀಡಿ, ಇಲ್ಲ ಸಲ್ಲದ ಸುಳ್ಳು ಆರೋಪ ಹೇಳಿ ಜಗಳ ಮಾಡುವಂತೆ ಮಾಡುತ್ತಿದ್ದರು. ಪತಿ ಗರ್ಭಿಣಿ ಇರುವಾಗ ತಾಯಿ ಮನೆಯಲ್ಲಿ ಬಿಟ್ಟು ಹೋಗಿ, ತನ್ನ ಬಳಿ ಇದ್ದ 25 ಪವನ್‌ ಚಿನ್ನಾಭರಣವನ್ನು ಪಡೆದುಕೊಂಡಿರುತ್ತಾನೆ.

7 ತಿಂಗಳು ಗರ್ಭಿಣಿ ಇರುವಾಗ ಮನೆಯವರೊಂದಿಗೆ ಆರೋಪಿತರ ಮನೆಗೆ ಹೋದಾಗ ಮನೆಯೊಳಗೆ ಸೇರಿಸದೇ, ಅವಾಚ್ಯ ಶಬ್ದಗಳಿಂದ ಬೈದು ಕಳುಹಿಸಿರುತ್ತಾರೆ. ಬಳಿಕ ತಾಯಿ ಮನೆಯಲ್ಲಿರುವಾಗ ಆರೋಪಿತರು ತಾಯಿ ಮನೆಯೊಳಗೆ ನುಗ್ಗಿ ಇನ್ನು ಮುಂದೆ ಹೆಂಡತಿಯಾಗಿ ಪರಿಗಣಿಸುವುದಿಲ್ಲ. ನೀನು ನಾನು ಹೇಳಿದಲ್ಲಿಗೆ ಬಂದು ವಿವಾಹ ವಿಚ್ಚೇಧನ ಪತ್ರಕ್ಕೆ ಸಹಿ ಹಾಕು. ಇಲ್ಲದಿದ್ದರೆ ನಿನ್ನನ್ನು ಹಾಗೂ ನಿನ್ನ ಮನೆಯವರನ್ನು ಕೊಂದು ಹಾಕುವುದಾಗಿ ಜೀವ ಬೆದರಿಕೆ ಹಾಕಿ ಹೋಗಿರುತ್ತಾರೆ ಎಂದು ಬೈಂದೂರು ಪೊಲೀಸ್‌ ಠಾಣೆಯಲ್ಲಿ ಸುನಂದ ಅವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next