Advertisement

ಶಾಂಪೇನ್‌ ಬಾಟಲಿಯಲ್ಲಿ  ಡ್ರಗ್ಸ್‌ ಮಾರಾಟ

03:20 PM Sep 25, 2021 | Team Udayavani |

ಬೆಂಗಳೂರು: ಇತ್ತೀಚೆಗೆ ಡ್ರಗ್ಸ್‌ ಮಾರಾಟ ಜಾಲದಲ್ಲಿ ಬಂಧನಕ್ಕೊಳಗಾಗಿರುವ ಮಾಡೆಲ್‌ ಸೋನಿಯಾ ಅಗರ್‌ ವಾಲ್‌ ಮತ್ತು ಆಕೆಯ ಸ್ನೇಹಿತ ದಿಲೀಪ್‌ ಜತೆ ಸಂಪರ್ಕದಲ್ಲಿದ್ದ ವಿದೇಶಿ ಫುಟ್ ಬಾಲ್ ಆಟಗಾರನೊಬ್ಬ ಶಾಂಪೇನ್‌ ಬಾಟಲಿಯಲ್ಲಿ ಡ್ರಗ್ಸ್‌ ತುಂಬಿ ಮಾರಾಟದ ವೇಳೆ ಗೋವಿಂದಪುರ ಪೊಲೀಸರ ಬಲೆಗೆ ಬಿದ್ದಿದ್ದಾನೆ.

Advertisement

ಐವೋರಿಯನ್‌ ದೇಶದ ಡೋಸ್ಕೋ ಖಲೀಫ್ (28) ಬಂಧಿತ. ಆರೋಪಿಯಿಂದ 2.5 ಕೋಟಿ ಮೌಲ್ಯದ 2500 ಗ್ರಾಂ ತೂಕದ ಎಂಡಿಎಂಎ ಕ್ರಿಸ್ಟಲ್‌ ಪೌಡರ್‌, 2 ಮೊಬೈಲ್‌ 1 ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಇತ್ತೀಚೆಗೆ ಆರೋಪಿ ಎಚ್‌ಬಿ ಆರ್‌ ಲೇಔಟ್‌ ಯೂಸಫ್ ಮಸೀದಿ ಬಳಿಯ ಸರ್ವೀಸ್‌ ರಸ್ತೆಯಲ್ಲಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಇನ್‌ಸ್ಪೆಕ್ಟರ್‌ ಆರ್‌. ಪ್ರಕಾಶ್‌ ಹಾಗೂ ಪಿಎಸ್‌ಐ ಮೊಹಮ್ಮದ್‌ ಅಲಿ ಇಮ್ರಾನ್‌ ನೇತೃತ್ವದ ತಂಡ ದಾಳಿ ನಡೆಸಿ ಮಾಲು ಸಮೇತ ಆರೋಪಿಯನ್ನು ಬಂಧಿಸಿದೆ.

2015ರಲ್ಲಿ ಕ್ರೀಡಾ ವೀಸಾ ಪಡೆದು ಬಂದಿದ್ದ ಡೋಸ್ಕೋ ಖಲೀಫ್. ದೆಹಲಿ, ಕೊಲ್ಕೊತ್ತಾದಲ್ಲಿ ಕೆಲ ತಿಂಗಳು ವಾಸವಾಗಿದ್ದು, ಫ‌ುಟ್ಬಾಲ್‌ ತರಬೇತಿ ಪಡೆಯುತ್ತಿದ್ದ. ನಂತರ ತನ್ನ ದೇಶದ ಪ್ರಜೆಯೊಬ್ಬನ ಕೋರಿಗೆ ಮೇರೆಗೆ 2018ರಲ್ಲಿ ಬೆಂಗಳೂರಿಗೆ ಬಂದಿದ್ದ ಆರೋಪಿ, ಡ್ರಗ್ಸ್‌ ಜಾಲದಲ್ಲಿ ತೊಡಗಿದ್ದಾನೆ. ಸದ್ಯ ಈತನ ಬಳಿ ಯಾವುದೇ ವೀಸಾ ಮತ್ತು ಪಾಸ್‌ ಪೋರ್ಟ್‌ಗಳು ಇಲ್ಲ. ಹೀಗಾಗಿ ಈತನ ವಿರುದ್ಧ ಎನ್‌ಡಿಪಿಎಸ್‌ ಜತೆಗೆ ವಿದೇಶಿ ಕಾಯ್ದೆ ಅಡಿಯೂ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಇದನ್ನೂ ಓದಿ:ವರದಕ್ಷಣೆ ಕಿರುಕುಳ : 6 ತಿಂಗಳ ಜೈಲುವಾಸದ ಶಿಕ್ಷೆ ನೀಡಿದ ನ್ಯಾಯಾಲಯ

Advertisement

ಗೋವಾದಿಂದ ಡ್ರಗ್ಸ್‌ : ಆರೋಪಿಗೆ ದೆಹಲಿ, ಕೊಲ್ಕತ್ತಾ, ದೆಹಲಿ, ಮುಂಬೈನ ಪೆಡ್ಲರ್‌ಗಳ ಜತೆ ನೇರ ಸಂಪರ್ಕವಿದ್ದು, ಗೋವಾಕ್ಕೆ ಪ್ರವಾಸಕ್ಕೆಂದು ಹೋಗಿ, ಅಲ್ಲಿ ಕಡಿಮೆ ಮೊತ್ತಕ್ಕೆ ಸಿಗುವ ಶಾಂಪೆನ್‌ ಬಾಟಲಿಗಳನ್ನು ಖರೀದಿಸಿ ಅವುಗಳಲ್ಲಿ ವಿದೇಶಿಗಳಿಂದ ಬರುತ್ತಿದ್ದ ಡ್ರಗ್ಸ್‌ ತುಂಬಿಕೊಂಡು ಬೆಂಗಳೂರಿಗೆ ತರುತ್ತಿದ್ದ. ಬಳಿಕ ಇಲ್ಲಿ ಕಾಲೇಜು ವಿದ್ಯಾರ್ಥಿಗಳು, ಟೆಕ್ಕಿಗಳು ಮತ್ತು ವಿದೇಶಿ ಪ್ರಜೆಗಳಿಗೆ ಮಾರಾಟ ಮಾಡುತ್ತಿ ದ್ದ ಎಂದು ಪೊಲೀಸರು ಹೇಳಿದರು.

60 ರಿಂದ 70 ಲಕ್ಷ: ಮಾದಕ ವಸ್ತು ಎಂಡಿಎಂಎ ಕ್ರಿಸ್ಟಲ್‌ ಪೌಡರ್‌ ತುಂಬಿದ್ದ ಶಾಂಪೇನ್‌ ಬಾಟಲಿಯನ್ನು 60 ರಿಂದ 70 ಲಕ್ಷ ರೂ.ಗೆ ಮಾರಾಟ ಮಾಡುತ್ತಿದ್ದ. ಬಳಿಕ ಇತರೆ ಪೆಡ್ಲರ್‌ಗಳಿಗೆ ಗ್ರಾಂ ಲೆಕ್ಕದಲ್ಲಿ ಮಾರಾಟ ಮಾಡುತ್ತಿದ್ದರು. ವಿದೇಶಿ ಪ್ರಜೆಯ ಪಾಸ್‌ಪೋರ್ಟ್‌ ಮತ್ತು ವೀಸಾ ಪರಿಶೀಲಿಸಿದೆ, ಬಾಡಿಗೆ ನೀಡಿರುವ ಮನೆ ಮಾಲೀಕನಿಗೆ ನೋಟಿಸ್‌ ನೀಡಲಾಗಿದ್ದು, ವಿಚಾರಣೆ ನಡೆಸಲಾಗು ವುದು ಎಂದು ಪೊಲೀಸರು ತಿಳಿಸಿದರು.

ಫ‌ುಟ್ಬಾಲ್‌ ಆಟಗಾರ: ದೆಹಲಿ, ಕೊಲ್ಕತ್ತಾದಲ್ಲಿ ಫ‌ುಟ್ಬಾಲ್‌ ಆಟವಾಡುತ್ತಿದ್ದ ಆರೋಪಿ, ಬೆಂಗಳೂರಿಗೆ ಬಂದಾಗಲೂ ನಗರದ ಕೆಲವೊಂದು ಫ‌ುಟ್ಬಾಲ್‌ ಆಟಗಾರರ ಜತೆ ಸೇರಿಕೊಂಡು ಟೂರ್ನಿಮೆಂಟ್‌ನಲ್ಲಿ ಪಾಲ್ಗೊಳ್ಳುತ್ತಿದ್ದ. ಇದರೊಂದಿಗೆ ಎರಡು ವರ್ಷಗಳಿಂದ ಡ್ರಗ್ಸ್‌ ದಂಧೆಯಲ್ಲಿ ತೊಡಗಿದ್ದಾನೆ ಎಂದು ಪೊಲೀಸರು ಹೇಳಿದರು.

ಮೂರು ಬಾರಿ ಬಂಧನ, ಬಿಡುಗಡೆ
ಆರೋಪಿ ಈ ಹಿಂದೆ 2019ರಲ್ಲಿ ಬಾಗಲೂರು, 2020ರಲ್ಲಿ ಕೋಣನ ಕುಂಟೆ ಪೊಲೀಸರಿಂದ ಎನ್‌ಡಿಪಿಎಸ್‌ ಕಾಯ್ದೆ ಅಡಿಯೇ ಬಂಧನಕ್ಕೊಳಗಾಗಿದ್ದ. ಜೈಲಿನಿಂದ ಬಿಡುಗಡೆಗೊಂಡ ಬಳಿಕ ಮತ್ತೆ ಕೃತ್ಯ ಮುಂದುವರಿಸಿದ್ದು, 2021ರ ಫೆಬ್ರವರಿಯಲ್ಲಿ ಜೆ.ಪಿ.ನಗರ ಪೊಲೀಸರಿಂದಲೂ ಡ್ರಗ್ಸ್‌ ಪ್ರಕರಣದಲ್ಲಿ ಡೋಸ್ಕೋ ಖಲೀಫ್ ಬಂಧನಕ್ಕೊಳಗಾಗಿದ್ದ. ಈ ವೇಳೆ ಆರೋಪಿ, “ಆರೆಂಜ್‌’ ಎಂಬ ಹೆಸರಿನಲ್ಲಿ ಪ್ರಕರಣದ ಇತರೆ ಆರೋಪಿಗಳಾದ ಸೈಯದ್‌ ಶೋಯಬುದ್ದೀನ್‌, ರವಿಕುಮಾರ್‌, ಬಿಡಿಎ ರವಿ ಎಂಬುವರ ಜತೆ ಸಂಪರ್ಕ ಹೊಂದಿದ್ದಾನೆ. ವಿದೇಶದಿಂದ ಮಾದಕ ವಸ್ತು ಕೊಕೇನ್‌ ಸರಬರಾಜು ಮಾಡುತ್ತಿದ್ದ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದ. ಎರಡು ತಿಂಗಳ ಹಿಂದೆ ಜಾಮೀನು ಪಡೆದು ಇದೀಗ ಮತ್ತೆ ಅದೇ ದಂಧೆಯಲ್ಲಿ ಸಿಕ್ಕಿ ಬಿದ್ದಾನೆ ಎಂದು ಪೊಲೀಸರು ಹೇಳಿದರು.

ಮಾಡೆಲ್‌, ಆಕೆಯ ಸ್ನೇಹಿತನ ಜತೆ ಲಿಂಕ್‌
ಕಳೆದ ತಿಂಗಳು ಗೋವಿಂದಪುರ ಪೊಲೀಸರ ಕಾರ್ಯಾಚರಣೆಯಲ್ಲಿ ಬಂಧನಕ್ಕೊಳಗಾಗಿ ದ್ದ ಮಾಡೆಲ್‌ ಸೋನಿಯಾ ಅಗರ್‌ವಾಲ್‌ ಮತ್ತು ಆಕೆಯ ಪ್ರಿಯಕರ ದಿಲೀಪ್‌ ಜತೆ ನೇರ ಸಂಪರ್ಕಹೊಂದಿದ್ದ ಡೋಸ್ಕೋ ಖಲೀಫ್, ನಗರದ ಪ್ರತಿಷ್ಠಿತ ಹೋಟೆಲ್‌ಗಳಲ್ಲಿ ನಡೆಯುತ್ತಿದ್ದ ಪಾರ್ಟಿಗಳಿಗೆ ಡ್ರಗ್ಸ್‌ ಪೂರೈಕೆ ಮಾಡುತ್ತಿದ್ದ. ಸೋನಿಯಾ, ದಿಲೀಪ್‌ ಭಾಗಿಯಾಗುತ್ತಿದ್ದ ಪಾರ್ಟಿಗಳಿಗೆ ಈತನ ಡ್ರಗ್ಸ್‌ ಪೂರೈಕೆದಾರನಾಗಿದ್ದ ಎಂಬ ವಿಚಾರವೂ ಬೆಳಕಿಗೆ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next