Advertisement

ಭಟ್ಕಳ: ಟ್ಯಾಂಕರ್‌ ಡಿಕ್ಕಿ-ಬೈಕ್‌ ಸವಾರ ಸಾವು

10:39 PM May 13, 2022 | Team Udayavani |

ಭಟ್ಕಳ: ಟ್ಯಾಂಕರ್‌ ಡಿಕ್ಕಿಯಾದ ಪರಿಣಾಮ ತೀವ್ರ ಗಾಯಗೊಂಡ ಬೈಕ್‌ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಮೂಡಭಟ್ಕಳ ಬೈಪಾಸ್‌ನಲ್ಲಿ ನಡೆದಿದೆ.

Advertisement

ಮೃತನನ್ನು ಶಿರೂರು ಹಡವಿನಕೋಣೆ ನಿವಾಸಿ ಇಕ್ಬಾಲ್‌ ಮುಲ್ಲಾ (55) ಎಂದು ಗುರುತಿಸಲಾಗಿದೆ.

ಇವರು ಶಿರೂರು ಕಡೆಯಿಂದ ಭಟ್ಕಳ ಕಡೆಗೆ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಸಂದರ್ಭದಲ್ಲಿ ಮೂಡಭಟ್ಕಳ ಬೈಪಾಸ್‌ನಲ್ಲಿನ ಹೆದ್ದಾರಿ ಹೊಂಡ ತಪ್ಪಿಸಲು ಹೋಗಿ ನೆಲಕ್ಕೆ ಬಿದ್ದ ಸಂದರ್ಭದಲ್ಲಿ ಹಿಂಬದಿಯಿಂದ ಬರುತ್ತಿದ್ದ ಟ್ಯಾಂಕರ್‌ ಇವರ ಮೇಲೆ ಹಾಯ್ದು, ಗಂಭೀರ ಗಾಯಗೊಂಡು ಮೃತಪಟ್ಟರು.

ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ಇವರ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಶವ ಬಿಟ್ಟುಕೊಡಲಾಗಿದೆ. ಅಪಘಾತದ ಕುರಿತು ನಗರ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು ತನಿಖೆ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next