ಕುಣಿಗಲ್ : ಯಾರು ಇಲ್ಲದ ವೇಳೆ 12 ಜನರಿದ್ದ ಗುಂಪೊಂದು ಜೆಸಿಬಿ ಯಂತ್ರ ಬಳಸಿ ಏಕಾಏಕಿ ಮನೆಯನ್ನು ಧ್ವಂಸ ಮಾಡಿರುವ ಘಟನೆ ತಾಲೂಕಿನ ಕೊತ್ತಗೆರೆ ಹೋಬಳಿ ಮೆಣಸಿನಹಳ್ಳಿ ಗ್ರಾಮದಲ್ಲಿ ನಡೆದಿದೆ.
ದುಷ್ಕರ್ಮಿಗಳ ಕೃತ್ಯಕ್ಕೆ ಮೆಣಸಿನಹಳ್ಳಿ ಗ್ರಾಮದ ಡಿ.ಸುನಂದ ಮನೆ ಕಳೆದುಕೊಂಡ ಮಹಿಳೆ, ಈ ಸಂಬಂಧ ಆಕೆಯ ಮಾವ ಸಿದ್ದಲಿಂಗಯ್ಯ ಕುಣಿಗಲ್ ಠಾಣೆಗೆ ದೂರು ನೀಡಿದ್ದು 12 ಮಂದಿ ವಿರುದ್ದ ಪ್ರಕರಣ ದಾಖಲಾಗಿದೆ,
ಘಟನೆ ವಿವರ : ಗ್ರಾಮದಲ್ಲಿ ಖಾನೆಷುಮಾರಿ ನಂ-103 ರ ವಾಸದ ಮನೆಯು ಡಿ.ಸುನಂದ ಅವರ ಹೆಸರಿನಲ್ಲಿರುತ್ತದೆ, ಮನೆಯಲ್ಲಿ ಸುಮಾರು ವರ್ಷಗಳಿಂದ ಸಿದ್ದಲಿಂಗಯ್ಯ ಅವರ ಕುಟುಂಬ ವಾಸವಾಗಿದ್ದರು, ಹಾಲಿ ಸದರಿ ಮನೆಯನ್ನು ದನದ ಕೊಟ್ಟಿಗೆಯಾಗಿ ಮಾಡಿಕೊಂಡಿದ್ದು, ಸಿದ್ದಲಿಂಗಯ್ಯ ಆತನ ಹೆಂಡತಿ, ಲಕ್ಷ್ಮಮ್ಮ ಜಮೀನಿನ ಬಳಿ ಕೆಲಸಕ್ಕೆ ಹೋದಾಗ, ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ಗ್ರಾಮದ ಅಂಕೇಗೌಡ, ಚಂದ್ರಪ್ಪ, ನಿಂಗಮ್ಮ, ಕಲಾವತಿ, ರಾಜಲಕ್ಷ್ಮಿ, ರಮೇಶ್, ಹರೀಶ್, ರಾಜಣ್ಣ ಅಲಿಯಾಸ್ ಹುಚ್ಚೀರಯ್ಯ, ಯೋಗೇಶ್ ಹಾಗೂ ಬೋರೇಗೌಡನಪಾಳ್ಯ ವಾಸಿಗಳಾದ ರಾಮಕೃಷ್ಣಯ್ಯ, ಭರತ್, ಲೋಕೇಶ್ ಎಂಬುವರು ಮಧ್ಯಾಹ್ನ 12-30 ರ ಸಮಯದಲ್ಲಿ ಆಕ್ರಮವಾಗಿ ಗುಂಪು ಕಟ್ಟಿಕೊಂಡು ಜೆಸಿಬಿ ಯಂತ್ರ ಬಳಸಿ ಮನೆಯನ್ನು ಕೆಡವಿದ್ದಾರೆ, ಇದನ್ನು ಕೇಳಲು ಹೋದಾಗ ನಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂಧಿಸಿ, ಮನೆ ವಿಚಾರಕ್ಕೆ ಬಂದರೇ ನಿಮ್ಮನ್ನು ಉಳಿಸುವುದಿಲ್ಲ ಎಂದು ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಸಿದ್ದಲಿಂಗಯ್ಯ ನೀಡಿದ ದೂರಿನ ಮೇರೆಗೆ ಪೊಲೀಸರು 12 ಮಂದಿ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ : ನಗರಂಗೆರೆಯಲ್ಲಿ ಅದ್ಧೂರಿ ತೆಪ್ಪೋತ್ಸವ: 53 ವರ್ಷಗಳ ನಂತರ ಅದ್ಧೂರಿ ಕಾರ್ಯಕ್ರಮ