Advertisement
ಗ್ರಾಮದ ಶಿವಮ್ಮ (70) ಮೃತ ದುರ್ದೈವಿ. ಈಕೆ ಗ್ರಾಮದಲ್ಲಿ ಕೂಲಿ ಮಾಡಿ ಜೀವನ ಸಾಗಿಸುತ್ತಾ ಕೂಡಿಟ್ಟಿದ್ದ ಹಣವನ್ನು ಪಕ್ಕದ ಮನೆಯ ರಾಜು (25) ಎಂಬಾತನಿಗೆ ಮನೆ ನಿರ್ಮಿಸುವ ಸಲುವಾಗಿ ಸಾಲವಾಗಿ ನೀಡಿದ್ದರು. ತನ್ನ ದೈನಂದಿನ ಖರ್ಚಿಗಾಗಿ ಹಣದ ಅವಶ್ಯಕತೆ ಇದ್ದ ಕಾರಣ ಸಾಲವನ್ನು ಮರು ಪಾವತಿಸುವಂತೆ ಶಿವಮ್ಮ ಕೇಳುತ್ತಿದ್ದರು. ವೃದ್ಧೆ ಸಿಕ್ಕಿದಾಗಲೆಲ್ಲಾ ಹಣ ಕೇಳುತ್ತಾಳೆ ಎಂದು ಕುಪಿತಗೊಂಡ ರಾಜು ತನ್ನ ಸ್ನೇಹಿತ ಶಿವರಾಜು (20) ಎಂಬಾತನ ನೆರವಿನೊಂದಿಗೆ ಆಕೆಯನ್ನು ಕೊಲೆಗೈದು ಸಾಲಮುಕ್ತನಾಗಲು ಯೋಚಿಸಿದ್ದನು. ಅದರಂತೆ ಹಣ ನೀಡುವುದಾಗಿ ಪುಸಲಾಯಿಸಿ ಪಾಳು ಬಾವಿಯ ಬಳಿ ವೃದ್ಧೆಯನ್ನುಕರೆಸಿಕೊಂಡಿದ್ದಾರೆ. ಬಳಿಕ ಆಕೆಯ ಕೈಕಾಲುಗಳನ್ನು ಕಟ್ಟಿ ರಾಗಿ ಬೀಸುವ ಕಲ್ಲನ್ನು ಹಗ್ಗದೊಂದಿಗೆ ಬಿಗಿದು ಪಾಳು ಬಾವಿಗೆ ಎಸೆದಿದ್ದರು.
Related Articles
ವೃದ್ದೆಯನ್ನು ಕಲ್ಲು ಕಟ್ಟಿ ಬಾವಿಗೆ ಬಿಸಾಡಿದ ಆರೋಪಿಗಳು ಮೃತ ದೇಹ ಮೇಲೆ ಬರಬಹುದೆಂದು ಎರಡು ಮೂರು ದಿನ ಬಾವಿಯ ಬಳಿ ಬಂದು ನೋಡುತ್ತಿದ್ದರು. ಇದರಿಂದ ಅನುಮಾನಗೊಂಡ ಗ್ರಾಮಸ್ಥರು ಇವರ ವಿರುದ್ಧ ಪೊಲೀಸರಿಗೆ
ದೂರು ನೀಡಿದ್ದರು. ಪೊಲೀಸರು ತನಿಖೆ ಕೈಗೊಂಡಿರುವ ಬೆನ್ನಲ್ಲೇ ಗ್ರಾಮದ ಬಾವಿಯೊಂದರಲ್ಲಿ ಕಂಡು ಬಂದ ಶವವನ್ನು ಹೊರ ತೆಗೆದಾಗ ಇದು ವೃದ್ಧೆ ಶಿವಮ್ಮ ಎಂಬುದು ದೃಢಪಟ್ಟಿದೆ. ಪ್ರಕರಣದ ಜಾಡು ಹಿಡಿದಾಗ ವೃದ್ಧೆಯ ಪಕ್ಕದ ಮನೆಯ ರಾಜು ಮತ್ತು ಆತನ ಸ್ನೇಹಿತ ಶಿವರಾಜು ಈ ಕೃತ್ಯ ಎಸಗಿರುವುದು ತಿಳಿದು ಬಂದಿದ್ದು, ಇಬ್ಬರನ್ನೂ ಬಂಧಿಸಿದ್ದಾರೆ.
Advertisement
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್, ಡಿವೈಎಸ್ಪಿ ನಾಗರಾಜು, ಸರ್ಕಲ್ ಇನ್ಸ್‌ಪೆಕ್ಟರ್ ಶ್ರೀಕಾಂತ್, ಗ್ರಾಮಾಂತರ ಪೊಲೀಸ್ ಠಾಣೆ ಎಸ್‌ಐ ಅಶೋಕ್ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಶವವನ್ನು ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಿದರು.