Advertisement
ಆರೋಪಿ ಶಿವರಾಜ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಲಾಗಿದೆ ಎಂದು ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ ಹೇಳಿದರು. ಸಂತ್ರಸ್ತ ಯುವತಿ ಹಾಗೂ ಆಕೆಯ ತಾಯಿಯನ್ನು ಪತ್ತೆ ಹಚ್ಚಲಾಗಿದೆ. ಪ್ರಕರಣ ಗಂಭೀರತೆಯ ಹಿನ್ನೆಲೆಯಲ್ಲಿ ಕಡಬ ಠಾಣೆಗೆ ಆಗಮಿಸಿರುವ ಐಜಿಪಿಯವರು ಆರೋಪಿ ಶಿವರಾಜ್‌ನನ್ನು ಹಾಗೂ ಆತನ ಜತೆ ಹೆಚ್ಚು ನಿಕಟವಾಗಿದ್ದ ಪೊಲೀಸ್ ಸಿಬಂದಿಯನ್ನೂ ವಿಚಾರಣೆ ನಡೆಸಿದ್ದಾರೆ.
Related Articles
ಐಜಿಪಿ ದೇವಜ್ಯೋತಿ ರೇ ಅವರನ್ನು ಠಾಣೆಯಲ್ಲಿ ಭೇಟಿಯಾದ ವಿಶ್ವ ಹಿಂದೂ ಪರಿಷತ್‌ನ ಮಹಿಳಾ ಸಂಘಟನೆ ಮಾತೃಶಕ್ತಿ ಕಡಬ ಪ್ರಖಂಡದ ಮುಖ್ಯಸ್ಥರು ಆರೋಪಿ ಶಿವರಾಜ್‌ನಿಗೆ ಸಂತ್ರಸ್ತ ಯುವತಿಯೊಂದಿಗೆ ಮದುವೆ ಮಾಡಿಸಿ ಆಕೆಗೆ ಬಾಳು ಕೋಡಬೇಕೆಂದು ಅಗ್ರಹಿಸಿದರು.
Advertisement
ಪುತ್ತೂರು ತಾ.ಪಂ. ಮಾಜಿ ಅಧ್ಯಕ್ಷೆ ಪುಲಸ್ತ್ಯ ರೈ, ಮಾತೃಶಕ್ತಿ ಕಡಬ ಪ್ರಖಂಡ ಅಧ್ಯಕ್ಷೆ ಗೀತಾ ಅಮೈ, ಜಿ.ಪಂ. ಮಾಜಿ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ ಉಪಸ್ಥಿತರಿದ್ದರು. ವಿಹಿಂಪ ಜಿಲ್ಲಾ ಕಾರ್ಯಾಧ್ಯಕ್ಷ ಭಾಸ್ಕರ ಧರ್ಮಸ್ಥಳ, ಕಾರ್ಯದರ್ಶಿ ನವೀನ್ ನೆರಿಯ, ಕಡಬ ಪ್ರಖಂಡ ಅಧ್ಯಕ್ಷ ರಾಧಾಕೃಷ್ಣ ಕೋಲ್ಪೆ, ಕಾರ್ಯದರ್ಶಿ ಪ್ರಮೋದ್ ರೈ ನಂದಗುರಿ, ಪ್ರಮುಖರಾದ ಸಂತೋಷ್ ಸುವರ್ಣ ಕೋಡಿಬೈಲು, ಜಯಂತ ಕಲ್ಲುಗುಡ್ಡೆ ಮತ್ತಿತರರು ಉಪಸ್ಥಿತರಿದ್ದರು.
“ಆರೋಪಿ ರಕ್ಷಣೆ ಪ್ರಶ್ನೆಯೇ ಇಲ್ಲ: ಎಸ್ಪಿ’ಪ್ರಶ್ನೆಯೊಂದಕ್ಕೆ ಉತ್ತರಿಸಿದ ಎಸ್ಪಿ, ಆರೋಪಿಯನ್ನು ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ಆತನ ಬಗ್ಗೆ ಇತರ ದೂರುಗಳಿದ್ದರೆ ತನಿಖೆ ನಡೆಸ ಲಾಗುವುದು ಎಂದರು. ಅಜ್ಞಾತ ಸ್ಥಳದಲ್ಲಿದ್ದಾರೆ ಎನ್ನಲಾದ ಯುವತಿ ಹಾಗೂ ತಾಯಿಯನ್ನು ಪತ್ತೆ ಹಚ್ಚಿ ಅವರನ್ನು ವೈದ್ಯಕೀಯ ತಪಾಸಣೆ ನಡೆಸಲಾಗುತ್ತಿದೆ ಎಂದರು.