ಉಪ್ಪಿನಂಗಡಿ: ಇಲ್ಲಿನ ಹಳೆಗೇಟಿಲ್ಲಿರುವ “ಜಿ.ಕೆ. ಗುಜಿರಿ ಅಂಗಡಿಯ ಗೋದಾಮಿನಿಂದ ಸುಮಾರು ಒಂದು ಲಕ್ಷ ರೂ. ಮೌಲ್ಯದ ಸೊತ್ತು ಕಳವು ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದು, ಸೊತ್ತುಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಇಳಂತಿಲ ಗ್ರಾಮದ ಜೋಗಿಬೆಟ್ಟು ನಿವಾಸಿ ರವಿ ಶೆಟ್ಟಿ ಎಂಬವರ ಪುತ್ರ ಹರ್ಷಿತ್ (18), 34 ನೆಕ್ಕಿಲಾಡಿಯ ಆದರ್ಶನಗರದ ಅಬ್ದುಲ್ ಖಾದರ್ ಎಂಬವರ ಪುತ್ರ ಮುಹಮ್ಮದ್ ಸಿನಾನ್ (19) ಹಾಗೂ ಬಾರ್ಯ ಗ್ರಾಮದ ಪಿಲಿಗೂಡು ನಿವಾಸಿ ಮುಹಮ್ಮದ್ ಎಂಬವರ ಪುತ್ರ ಇಸ್ಮಾಯೀಲ್ ಜೆ. (18) ಬಂಧಿತ ಆರೋಪಿಗಳು. ಇವರಿಂದ ಸುಮಾರು 65 ಸಾವಿರ ರೂ. ಮೌಲ್ಯದ ಕಳವು ಮಾಡಿದ ಗುಜರಿ ಸಾಮಾನು ಹಾಗೂ ಸಾಗಾಟಕ್ಕೆ ಬಳಸಿದ ಸುಮಾರು 50 ಸಾವಿರ ರೂ. ಮೌಲ್ಯದ ಅಟೋ ರಿûಾವನ್ನು ವಶಕ್ಕೆ ಪಡೆಯಲಾಗಿದೆ.
ಘಟನೆಯ ವಿವರ: ಹಳೆಗೇಟು ಬಳಿಯಿರುವ “ಜಿ.ಕೆ. ಸ್ಕಾ$›ಪ್ ಗುಜಿರಿ ಅಂಗಡಿಯ ಗೋದಾಮಿನಲ್ಲಿರಿಸಲಾಗಿದ್ದ ತಾಮ್ರ, ಹಿತ್ತಾಳೆ, ಬ್ಯಾಟರಿ ಸೇರಿದಂತೆ ಸುಮಾರು ಒಂದು ಲಕ್ಷ ರೂ. ಮೌಲ್ಯದ ಗುಜರಿ ಸಾಮನುಗಳನ್ನು 15 ದಿನಗಳ ಹಿಂದೆ ಕಳವುಗೈಯಲಾಗಿತ್ತು. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಉಪ್ಪಿನಂಗಡಿ ಪೊಲೀಸರಿಗೆ ಇವರ ಬಗ್ಗೆ ಸುಳಿವು ಸಿಕ್ಕಿದ್ದು, ಫೆ.7ರಂದು ಬೆಳಗ್ಗೆ ಈ ಮೂವರು ಆರೋಪಿಗಳು ಬೆಳ್ತಂಗಡಿ ಕಡೆಯಿಂದ ಅಟೋ ರಿûಾದಲ್ಲಿ ಉಪ್ಪಿನಂಗಡಿಗೆ ಬರುತ್ತಿದ್ದಾಗ ಇವರಿಗಾಗಿ ಹೊಂಚು ಹಾಕಿದ್ದ ಪೊಲೀಸರು ಉಪ್ಪಿನಂಗಡಿಯ ನೇತ್ರಾವತಿ ಸೇತುವೆಯ ಬಳಿ ಮೂವರನ್ನು ಬಂಧಿಸಿ, ಸೊತ್ತು ವಶಕ್ಕೆ ಪಡೆದಿದ್ದರು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಅವರಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಪುತ್ತೂರು ಗ್ರಾಮಾಂತರ ಪ್ರಭಾರ ವೃತ್ತ ನಿರೀಕ್ಷಕ ಸಿಪಿಐ ತಿಮ್ಮಪ್ಪ ನಾಯ್ಕ ಅವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಉಪ್ಪಿನಂಗಡಿ ಠಾಣಾ ಉಪನಿರೀಕ್ಷಕ ಈರಯ್ಯ ಡಿ. ಎನ್., ಉಪ್ಪಿನಂಗಡಿ ಠಾಣಾ ಪೊ›ಬೆಷನರಿ ಪಿಎಸ್‌ಐ ಪವನ ನಾಯಕ್, ಎಎಸ್‌ಐ ಚೋಮ ಎಂ.ಪಿ., ಸಿಬ್ಬಂದಿಗಳಾದ ಶೇಖರ ಗೌಡ, ದೇವದಾಸ್, ಇರ್ಷಾದ್ ಪಿ., ಶ್ರೀಧರ್ ಸಿ.ಎಸ್., ಜಗದೀಶ್ ರೇವಣ್ಣ, ಜಿಲ್ಲಾ ಗಣಕಯಂತ್ರದ ಸಿಬ್ಬಂದಿ ದಿವಾಕರ ಮತ್ತು ಸಂಪತ್, ಚಾಲಕ ನಾರಾಯಣ ಅವರು ಭಾಗವಹಿಸಿದ್ದರು.