Advertisement

ಕರಾವಳಿ ಭಾಗದ ಅಪರಾಧ ಸುದ್ದಿಗಳು

10:07 AM Jun 03, 2019 | keerthan |

ನವಜಾತ ಶಿಶು ಪತ್ತೆ ಪ್ರಕರಣ: ಮೂವರ ವಿರುದ್ಧ ಕೇಸು
ಮುಳ್ಳೇರಿಯ: ಗರ್ಭಿಣಿ ಮಹಿಳೆಯ ಕೈಯಲ್ಲಿ ನವಜಾತ ಶಿಶು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ಆದೂರು ಠಾಣೆ ಪೊಲೀಸರು ದಂಪತಿ ಸಹಿತ ಮೂವರ ವಿರುದ್ಧ ಕೇಸು ದಾಖಲಿಸಿದ್ದಾರೆ.

Advertisement

ಬೋವಿಕ್ಕಾನ ಬಳಿಯ ಅಮ್ಮಂಗೋಡು ನಿವಾಸಿ ಯಶೋದಾ (25), ಈಕೆಯ ಸಹೋದರ, ಕರ್ನಾಟಕ ಈಶ್ವರಮಂಗಲ ನಿವಾಸಿ ತಿಮ್ಮಯ್ಯ (36) ಮತ್ತು ಆತನ ಪತ್ನಿ ಕಮಲಾ (29) ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ.

ತಿಮ್ಮಯ್ಯ ಮತ್ತು ಕಮಲಾ ದಂಪತಿಯ ಹದಿನೈದು ದಿನದ ಗಂಡು ಮಗುವನ್ನು ಯಶೋದಾ ಳಿಗೆ ಅನಧಿಕೃತವಾಗಿ ಹಸ್ತಾಂತರಿಸಿರುವುದಾಗಿ ಕೇಸು ದಾಖಲಿಸಲಾಗಿದೆ.  ದಂಪತಿ ಅಮ್ಮಂಗೋಡಿಗೆ ಬಂದು ಯಶೋದಾಳಿಗೆ ಮಗುವನ್ನು ನೀಡಿದ್ದರು. ಅನಂತರ ಮಗುವಿಗೆ ಅಸೌಖ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಯಶೋದಾ ಚಿಕಿತ್ಸೆಗಾಗಿ ಬೋವಿಕ್ಕಾನ ಸರಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದರು.

ಗರ್ಭಿಣಿ ಕೈಯಲ್ಲಿ ನವಜಾತ ಶಿಶು ಇರುವುದನ್ನು ಕಂಡು ಆಸ್ಪತ್ರೆ ಅಧಿಕಾರಿಗಳು ಚೈಲ್ಡ್‌ಲೈನ್‌ಗೆ ಮಾಹಿತಿ ನೀಡಿದ್ದರು. ಇದರಂತೆ ಅಮ್ಮಂಗೋಡಿ ನಲ್ಲಿರುವ ಯಶೋದಾ ಮನೆಗೆ ತಲುಪಿದ ಚೈಲ್ಡ್‌ಲೈನ್‌ ಅಧಿಕಾರಿಗಳು ವಿಚಾರಿಸಿದಾಗ ಮಗುವನ್ನು ಸಹೋದರ ನೀಡಿರುವುದು ಬೆಳಕಿಗೆ ಬಂತು. ಬಳಿಕ ಮಗುವನ್ನು ಶಿಶು ಕ್ಷೇಮ ಸಮಿತಿ ವಶಕ್ಕೆ ತೆಗೆದುಕೊಂಡಿದೆ. ಚೈಲ್ಡ್‌ಲೈನ್‌ ಅಧಿಕಾರಿಗಳ ದೂರಿನಂತೆ ಈಗ ಆದೂರು ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಪ್ರಕರ ಣದ ತನಿಖೆಯನ್ನು ಕರ್ನಾಟಕಕ್ಕೆ ಹಸ್ತಾಂತರಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

*
ಕಬ್ಬಿಣದ ತಡೆಗೋಡೆಗೆ ಬೈಕ್‌ ಢಿಕ್ಕಿ: ಸವಾರ ಸ್ಥಳದಲ್ಲೇ ಸಾವು
ಪಡುಬಿದ್ರಿ: ಕಾರ್ಕಳ – ಪಡುಬಿದ್ರಿ ರಾಜ್ಯ ಹೆದ್ದಾರಿಯ ಸಾಂತೂರು ದ್ವಾರದಿಂದ 50 ಮೀ. ದೂರದಲ್ಲಿ ಕಾರ್ಕಳದಿಂದ ಪಡು ಬಿದ್ರಿಯತ್ತ ಬರುತ್ತಿದ್ದ ಬೈಕ್‌ ಹೆದ್ದಾರಿ ಬದಿಯ ಕಬ್ಬಿಣದ ಗಾರ್ಡ್‌ (ತಡೆಗೋಡೆ)ಗೆ ಢಿಕ್ಕಿಯಾಗಿ ಸವಾರ ಉತ್ತರಪ್ರದೇಶ ಮೂಲದ ದೀಪು ಸಿಂಗ್‌ (20) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

Advertisement

ಸಹ ಸವಾರ ಅಮರ್‌ಜಿತ್‌ ಸಿಂಗ್‌ ಗಂಭೀರವಾಗಿ ಗಾಯಗೊಂಡಿದ್ದು, ಅವರನು ಮಂಗಳೂರಿನ ವೆನಾಕ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹೆಲ್ಮೆಟ್‌ ಇರಲಿಲ್ಲ
ಇಬ್ಬರೂ ಕಾಂಜರ ಕಟ್ಟೆಯ ಎಂಜೆ ಕ್ರಷರ್ ಸಂಸ್ಥೆಯ ಕಾರ್ಮಿಕರಾಗಿದ್ದು, ಇವರ ಬೈಕ್‌ ರಸ್ತೆಯ ತೀರಾ ಬಲಭಾಗಕ್ಕೆ ಬಂದು ಗಾರ್ಡ್‌ಗೆ ಢಿಕ್ಕಿ ಹೊಡೆದಿದೆ. ಇಬ್ಬರೂ ಹೆಲ್ಮೆಟ್‌ ಧರಿಸಿರಲಿಲ್ಲ. ಪಡುಬಿದ್ರಿ ಎಸ್‌ಐ ಸುಬ್ಬಣ್ಣ ಅವರು ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

*
ಲೊರೆಟ್ಟೊ ಹಲ್ಲೆ ಪ್ರಕರಣ: ಆರೋಪಿಗಳಿಗೆ ನ್ಯಾಯಾಂಗ ಬಂಧನ

ಬಂಟ್ವಾಳ: ಲೊರೆಟ್ಟೊ ಪೆದಮಲೆ ನಿವಾಸಿ ನಿತಿನ್‌ ಪೂಜಾರಿ ಅವರಿಗೆ ಹಲ್ಲೆ ನಡೆಸಿದ ಆರೋಪದಲ್ಲಿ ಸ್ಥಳೀಯ ನಿವಾಸಿ ರಾಕೇಶ್‌ ಮತ್ತು ಚೇತನ್‌ ಅವರನ್ನು ಬಂಟ್ವಾಳ ನಗರ ಪೊಲೀಸರು ಶನಿವಾರ ಬಂಧಿಸಿದ್ದು, ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಮೇ 30ರಂದು ರಾತ್ರಿ ನಿತಿನ್‌ ಮೇಲೆ ತಂಡವೊಂದು ಹಲ್ಲೆ ನಡೆಸಿತ್ತು. ಗಾಯಾಳು ಬಂಟ್ವಾಳ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಘಟನೆಯ ಸಂದರ್ಭ ನಿತಿನ್‌ ಕಿಸೆಯಲ್ಲಿದ್ದ 60 ಸಾ.ರೂ. ಅನ್ನು ದೋಚಿ, ಅವರ ಬುಲೆಟ್‌ ಬೈಕಿಗೆ ಹಾನಿ ಮಾಡಲಾಗಿತ್ತೆಂದು ದೂರಿನಲ್ಲಿ ತಿಳಿಸಲಾಗಿತ್ತು. ಈ ನಡುವೆ ನಿತಿನ್‌ ವಿರುದ್ಧವೂ ಆರೋಪಿಗಳು ಪ್ರತಿ ದೂರು ದಾಖಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next