Advertisement

ಕರಾವಳಿ ಅಪರಾಧ ಸುದ್ದಿಗಳು

11:27 AM Jun 01, 2019 | Team Udayavani |

ಕಟಪಾಡಿಯಿಂದ ನಾಪತ್ತೆಯಾಗಿದ್ದ ಮಹಿಳೆ ಶವ ಮಣಿಪುರ ಕಾಡಿನಲ್ಲಿ ಪತ್ತೆ
ಕಾಪು: ಕಟಪಾಡಿ – ಏಣಗುಡ್ಡೆ ಗ್ರಾಮದ ಮನೆಯಿಂದ ಮೇ 16ರಿಂದ ನಾಪತ್ತೆಯಾಗಿದ್ದ ರೇಣುಕಾ ಪೂಜಾರಿ (52) ಅವರ ಶವ ಮಣಿಪುರ ರೈಲ್ವೇ ಬ್ರಿಡ್ಜ್ ಬಳಿಯ ಕಾಡಿನಲ್ಲಿ ಮರಕ್ಕೆ ನೇಣು ಬಿಗಿದು, ಕೊಳೆತ ಸ್ಥಿತಿಯಲ್ಲಿ ಶುಕ್ರ ವಾರ ಬೆಳಗ್ಗೆ ಪತ್ತೆಯಾಗಿದೆ.

Advertisement

ಅಗ್ರಹಾರ ನಿವಾಸಿ, ಮುಂಬಯಿಯಲ್ಲಿ ಉದ್ಯೋಗದಲ್ಲಿದ್ದ ಗೋಪಾಲ ಪೂಜಾರಿ ಅವರ ಪತ್ನಿಯಾಗಿದ್ದ ಇವರು ಪತಿ ಮತ್ತು ಮಕ್ಕಳೊಂದಿಗೆ ಎ. 29ರಂದು ಮುಂಬಯಿಯಿಂದ ಕಟಪಾಡಿಗೆ ಬಂದಿದ್ದರು. ಗೋಪಾಲ ಪೂಜಾರಿ ಅವರು ಹೆಂಡತಿ ಮತ್ತು ಮಕ್ಕಳನ್ನು ಮನೆಯಲ್ಲೇ ಬಿಟ್ಟು ಸಂತೆಕಟ್ಟೆ ಗೊರಟ್ಟಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ತಾಯಿಯನ್ನು ನೋಡಲು ಹೋಗಿದ್ದರು. ವಾಪಸ್‌ ಬಂದು ನೋಡಿದಾಗ ಪತ್ನಿ ನಾಪತ್ತೆಯಾಗಿದ್ದರು. ಈ ಸಂಬಂಧ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮಣಿಪುರದ್ದೇ ಲೊಕೇಶನ್‌ ತೋರಿಸುತ್ತಿದ್ದ ಫೋನ್‌
ನಾಪತ್ತೆಯಾದಂದಿನಿಂದಲೂ ಅವರ ಮೊಬೈಲ್‌ ಫೋನ್‌ ಲೊಕೇಶನ್‌ ಮಣಿಪುರವನ್ನೇ ತೋರಿಸುತ್ತಿತ್ತು. ಈ ಕಾರಣದಿಂದಾಗಿ ಮನೆಯವರು ಮತ್ತು ಗ್ರಾಮಸ್ಥರು ಮಣಿಪುರ ಸುತ್ತಮುತ್ತ ತೀವ್ರ ಹುಡುಕಾಟ ನಡೆಸಿದ್ದರೂ ರೇಣುಕಾ ಪತ್ತೆಯಾಗಿರಲಿಲ್ಲ.  ಶುಕ್ರವಾರ ತರಗಲೆಗೆಂದು ಬಂದಿದ್ದ ಮಹಿಳೆಗೆ ಶವ ಪತ್ತೆಯಾಗಿದೆ. ರೇಣುಕಾ ಅವರು ತಾನು ಧರಿಸಿದ್ದ ಚೂಡಿದಾರದ ಶಾಲನ್ನು ಮರಕ್ಕೆ ಬಿಗಿದು ಆತ್ಮಹತ್ಯೆ ಮಾಡಿಕೊಂಡಂತೆ ಕಂಡು ಬಂದಿದೆ.

ಖನ್ನತೆಯಿಂದ ಬಳಲುತ್ತಿದ್ದರು
ರೇಣುಕಾ ಕೆಲವು ತಿಂಗಳಿಂದ ಖನ್ನತೆ ಯಿಂದ ಬಳಲುತ್ತಿದ್ದರೆಂದು ಹೇಳಲಾ ಗುತ್ತಿದೆ. ಆಕೆಯ ವ್ಯಾನಿಟಿ ಬ್ಯಾಗ್‌, ಮೊಬೈಲ್‌ ಫೋನ್‌ ಶವದ ಪಕ್ಕದಲ್ಲೇ ದೊರಕಿದೆ. ರೈಲ್ವೇ ಬ್ರಿಡ್ಜ್ ಪರಿಸರದಲ್ಲಿ ಮಹಿಳೆಯೊಬ್ಬರು ತಿರುಗಾಡುತ್ತಿದ್ದುದನ್ನು ಹಿಂದೆಯೇ ಸ್ಥಳೀಯರು ಗಮನಿಸಿದ್ದರು ಎನ್ನಲಾಗುತ್ತಿದೆ. ಸಮಾಜ ಸೇವಕ ಕಾಪುವಿನ ಸೂರಿ ಶೆಟ್ಟಿ ಅವರು ಶವವನ್ನು ಮೇಲೆತ್ತಲು ಸಹಕರಿಸಿದ್ದಾರೆ. ಶಂಕರಪುರದ ಪೌಲ್‌ ಅವರ ಆ್ಯಂಬುಲೆನ್ಸ್‌ನಲ್ಲಿ ಮರಣೋತ್ತರ ಪರೀಕ್ಷೆಗಾಗಿ ಸಾಗಿಸಲಾಗಿದೆ. ಕಾಪು ಎಸ್‌ಐ ನವೀನ್‌ ನಾಯ್ಕ ಮತ್ತು ಸಿಬಂದಿ ಸ್ಥಳಕ್ಕೆ ತೆರಳಿ, ಪರಿಶೀಲಿಸಿದ್ದಾರೆ.

*

Advertisement

ಬೆಳ್ತಂಗಡಿ: ಆಸ್ಪತ್ರೆ ನಿರ್ಲಕ್ಷಕ್ಕೆ ನವಜಾತ ಶಿಶು ಸಾವು ಆರೋಪ
ಬೆಳ್ತಂಗಡಿ: ನವಜಾತ ಶಿಶುವೊಂದು ಸಾವನ್ನಪ್ಪಿದ್ದು, ಸರಕಾರಿ ಆಸ್ಪತ್ರೆಯವರೇ ಕಾರಣ ಎಂದು ಮನೆಯವರು ಆರೋಪಿಸಿದ್ದಾರೆ. ಆದರೆ ಇದನ್ನು ಆಸ್ಪತ್ರೆಯವರು ತಳ್ಳಿ ಹಾಕಿದ್ದಾರೆ. ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದ ಬಾಳಂಪಾಡಿ ಮನೆ ರಾಘವ ಗೌಡ ಹಾಗೂ ಕುಸುಮಾವತಿ ದಂಪತಿ ಮಗುವನ್ನು ಕಳೆದುಕೊಂಡವರು.

ಕುಸುಮಾವತಿಗೆ ಮೇ 29ರಂದು ಹೆರಿಗೆ ಬೇನೆ ಬಂದ ಕಾರಣ ದಂಪತಿ ಸ್ಥಳೀ ಯ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿದ್ದರು. ಈ ವೇಳೆ ವೈದ್ಯರು ಸ್ಕ್ಯಾನಿಂಗ್‌ ನಡೆಸದೆ ತಾಯಿಯ ನಾಡಿಮಿಡಿತ ಪರಿಶೀಲಿಸಿ ಗರ್ಭದಲ್ಲಿ ಮಗು ಸಾವನ್ನಪ್ಪಿರುವುದಾಗಿ ತಿಳಿಸಿದ್ದರು. ಆರೆ ಬಳಿಕ ಮಗುವನ್ನು ಹೊರ ತೆರೆದಾಗ ಅದು ಜೀವಂತವಿತ್ತು. ಅನಂತರ ಕೂಡಲೇ ವೆನಾಕ್‌ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿರುವುದಾಗಿ ತಿಳಿಸಿದ್ದಾರೆ. ವೆನಕ್‌ನಲ್ಲಿ ಬೆಡ್‌ ಖಾಲಿ ಇಲ್ಲ ಎಂದು ಹೇಳಿ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದರು. ಬಳಿಕ ಎರಡು ಆಸ್ಪ ತ್ರೆಗೆ ನಾವು ಅಲೆದಾಡಿದೆವು. ಈ ವೇಳೆ ಮಗು ಸಾವನ್ನಪ್ಪಿದೆ ಎಂದು ದಂಪತಿ ಆರೋಪಿಸುತ್ತಿದ್ದಾರೆ. ಕುಸುಮಾವತಿ ದೀರ್ಘ‌ ಕಾಲದ ಬಳಿಕ ಗರ್ಭಿಣಿಯಾಗಿದ್ದರು.

ಅವಧಿ ಪೂರ್ವ ಹೆರಗೆ: ವೈದ್ಯರು
ಬೆಳ್ತಂಗಡಿ ವೈದ್ಯರು ಹೇಳುವಂತೆ ಕುಸುಮಾವತಿಗೆ 6 ತಿಂಗಳಲ್ಲಿ ಹೆರಿಗೆ ನೋವು ಕಂಡಿದೆ. ಗರ್ಭಕೋಶಕ್ಕೆ ಘಾಸಿಯಾಗಿದ್ದರಿಂದ ಮಗು ಹೊರತೆಗೆಯುವುದು ಅನಿವಾರ್ಯವಾಗಿತ್ತು. ಮತ್ತೂಂದೆಡೆ ಮಗು 700 ಗ್ರಾಂ. ಇದ್ದಿದ್ದರಿಂದ ವೆಂಟಿಲೇಟರ್‌ ಸಮಸ್ಯೆ ಎದುರಾಗಿ ಸೂಕ್ತ ಚಿಕಿತ್ಸೆಗೆ ಮಂಗಳೂರು ಕಳುಹಿಸಿದ್ದೇವೆ. ನಾವು ನೇರವಾಗಿ ಖಾಸಗಿ ಆಸ್ಪತ್ರೆಗೆ ಕಳುಹಿಸುವಂತಿಲ್ಲ. ಬೆಳ್ತಂಗಡಿ ಆಸ್ಪತ್ರೆಯಲ್ಲಿ ಮಕ್ಕಳ ತಜ್ಞರ ಕೊರತೆಯಿದ್ದು, ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಲು ತೊಂದರೆಯಾಗುತ್ತಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next