Advertisement
ಸುಮಿತ್ ಹೆಗ್ಡೆ(25), ಯತೀಶ್ ಪೂಜಾರಿ (24) ಮತ್ತು ಪ್ರವೀಣ್ ಪೂಜಾರಿ(24) ಬಂಧಿತ ಆರೋಪಿಗಳು. ಆರೋಪಿಗಳು ಕೃತ್ಯಕ್ಕೆ ಬಳಸಿದ ಕಾರನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎರಡು ಹುಲಿವೇಷ ತಂಡಗಳ ನಡುವಿನ ವೈಮನಸ್ಸಿನ ಹಿನ್ನೆಲೆಯಲ್ಲಿ ಕೃತ್ಯ ನಡೆದಿದೆ ಎನ್ನಲಾಗಿದೆ. ವಾಮಂಜೂರಿನಲ್ಲಿ ವಾಮಂಜೂರು ಫ್ರೆಂಡ್ಸ್ ಹುಲಿ ವೇಷ ತಂಡದವರು ದಸರಾ ಸಂದರ್ಭ ಮತ್ತು ವಾಮಂಜೂರು ಟೈಗರ್ಸ್ ತಂಡದವರು ಗಣೇಶೋತ್ಸವ ಸಂದರ್ಭ ಹುಲಿ ವೇಷ ಹಾಕುತ್ತಿದ್ದರು. ಬಂಧಿತ ಆರೋಪಿಗಳು ವಾಮಂಜೂರು ಟೈಗರ್ಸ್ ತಂಡದ ಸದಸ್ಯರು. ಧಾರ್ಮಿಕ ಭಾವನೆಗೆ ಧಕ್ಕೆ ತಂದು ಶಾಂತಿ ಕದಡುವ ಹುನ್ನಾರವೂ ಆರೋಪಿಗಳದ್ದಾಗಿತ್ತು ಎಂದು ತಿಳಿದು ಬಂದಿದೆ. ಆರೋಪಿಗಳ ಕೃತ್ಯ ಸಿಸಿ ಕೆಮರಾದಲ್ಲಿ ಸೆರೆಯಾಗಿದ್ದು ಅದರ ಆಧಾರದಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.