ಉಪ್ಪಿನಂಗಡಿ: ವಿವಾಹಿತ ಮಹಿಳೆಯೊಬ್ಬರು ಅನುಮಾ ನಾಸ್ಪದವಾಗಿ ಸಾವನ್ನಪ್ಪಿದ ಘಟನೆ ಕೊಕ್ಕಡ ಗ್ರಾಮದಲ್ಲಿ ನಡೆದಿದ್ದು ಪತಿಯೇ ಹೊಡೆದು ಕೊಲೆಗೈದಿರುವ ಬಗ್ಗೆ ಸಂಶಯ ವ್ಯಕ್ತವಾಗಿದೆ.
ಕೊಕ್ಕಡ ಗ್ರಾಮದ ಅಗರ್ತ ನಿವಾಸಿ ಗಣೇಶ್ ಗೌಡ ಅವರ ಪತ್ನಿ ಮೋಹಿನಿ(36) ಮೃತರು. ಪತಿ ಗಣೇಶ ಗೌಡನಿಗೆ ಕುಡಿತದ ಚಟವಿದ್ದು ಕುಡಿದ ಮತ್ತಿನಲ್ಲಿ ಪತ್ನಿ ಜತೆ ಜಗಳ ಉಂಟಾಗಿ ಗಲಾಟೆ ವಿಕೋಪಕ್ಕೆ ತಿರುಗಿ ಹಲ್ಲೆಗೈದ ಪರಿಣಾಮ ಪತ್ನಿ ಮೋಹಿನಿ ಸಾವನ್ನಪ್ಪಿರುವ ಬಗ್ಗೆ ಅನುಮಾ ನವಿದೆ. ಮಹಿಳೆಯ ಅನುಮಾನಾಸ್ಪದ ಸಾವಿನ ಬಗ್ಗೆ ಪ್ರಕರಣ ದಾಖಲಿಸಿ ಕೊಂಡಿರುವ ಧರ್ಮಸ್ಥಳ ಪಿಎಸ್‌ಐ ಅನಿಲ್ ಕುಮಾರ್ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸಂಶಯದ ಮೇಲೆ ಗಣೇಶ ಗೌಡನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ದಂಪತಿಯ 6 ವರ್ಷದ ಪುತ್ರನನ್ನು ನೋಡಿಕೊಳ್ಳಲು ಕುಟುಂಬಸ್ಥರು ಯಾರೂ ಮುಂದೆ ಬಾರದ ಹಿನ್ನೆಲೆ ಮಕ್ಕಳ ಪಾಲನಾ ಕೇಂದ್ರಕ್ಕೆ ನೀಡಲು ಪೊಲೀಸರು ನಿರ್ಧರಿಸಿದ್ದಾರೆ.
ಘಟನ ಸ್ಥಳಕ್ಕೆ ಬೆಳ್ತಂಗಡಿ ಸರ್ಕಲ್ ಇನ್‌ಸ್ಪೆಕ್ಟರ್ ಶಿವಕುಮಾರ್, ಧರ್ಮಸ್ಥಳ ಪಿಎಸ್‌ಐ ಅನಿಲ್ ಕುಮಾರ್ ಡಿ., ಪಿಎಸ್‌ಐ ಲೋಲಾಕ್ಷ, ಬೆಳ್ತಂಗಡಿ ಪಿಎಸ್‌ಐ ನಂದಕುಮಾರ್, ಪಿಎಸ್‌ಐ ಅರ್ಜುನ್ ಮತ್ತು ಸಿಬಂದಿ ಪ್ರಮೋದಿನಿ, ಪ್ರಶಾಂತ್, ಸತೀಶ್, ಇಬ್ರಾಹಿಂ, ಪ್ರಮೋದ್ ಕುಮಾರ್, ವಿಜಯ ರೈ, ಚಾಲಕ ಆಸೀಫ್ ಮತ್ತು ಮಂಗಳೂರು ಬೆರಳಚ್ಚು ತಜ್ಞರಾದ ಸಚಿನ್ ರೈ, ಪ್ರಶಾಂತ್, ಗಣೇಶ್, ಸುಂದರ್ ಶೆಟ್ಟಿ ಮತ್ತಿತರರು ಭೇಟಿ ನೀಡಿದ್ದರು.