Advertisement
ಕಾವ್ರಾಡಿ ಗ್ರಾಮದ ಮುಳ್ಳುಗುಡ್ಡೆ ಸಮೀಪ ಕುಂದಾಪುರ ಗ್ರಾಮಾಂತರ ಎಸ್‌ಐ ಪವನ್ ನಾಯಕ್ ನೇತೃತ್ವದ ಪೊಲೀಸರ ತಂಡ ರೌಂಡ್ಸ್‌ನಲ್ಲಿದ್ದಾಗ ರಾಘವೇಂದ್ರ ಆಚಾರ್ಯ (30) ಗಾಂಜಾ ಸೇವನೆ ಬಗ್ಗೆ ಅನುಮಾನ ಬಂದಿದ್ದು, ಆರೋಪಿಯನ್ನು ವಶಕ್ಕೆ ಪಡೆದು, ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿದಾಗ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ.ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಡುಬಿದ್ರಿ: ಹೆಜಮಾಡಿ ಗ್ರಾಮದ ಟೋಲ್‌ಗೇಟ್ ಸಮೀಪ ಹೆಜಮಾಡಿ ಗುಂಡಿ ನಿವಾಸಿ ಪ್ರಜ್ವಲ್ ಆಚಾರ್ಯ ಯಾವುದೋ ಮಾದಕ ಪದಾರ್ಥ ಸೇವಿಸಿರುವುದು ದೃಢಪಟ್ಟಿದೆ. ಆರೋಪಿ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಂತೆ ಪ್ರಕರಣ ದಾಖಲಿಸಲಾಗಿದೆ. ಬೈಂದೂರಿನಲ್ಲಿ
ಬೈಂದೂರು: ಇನ್‌ಸ್ಪೆಕ್ಟರ್ ಸಂತೋಷ್ ಎ. ಕಾಯ್ಕಿಣಿ ಅವರು ಆ. 26ರಂದು ಶಿರೂರು ಸಮುದ್ರ ಕಿನಾರೆ ಪರಿಸರದಲ್ಲಿ ರೌಂಡ್ಸ್‌ನಲ್ಲಿದ್ದಾಗ ಶರತ್ ಪೂಜಾರಿ (30) ಯನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಆತ ಗಾಂಜಾ ಸೇವಿಸಿರುವುದು ದೃಢಪಟ್ಟಿತ್ತು. ಬೈಂದೂರು ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅದೇ ದಿನ ಬೈಂದೂರು ಠಾಣೆಯ ಉಪನಿರೀಕ್ಷಕ ನಿರಂಜನ್ ಗೌಡ ಬಿ.ಎಸ್. ಅವರು ಪಡುವರಿ ಗ್ರಾಮದ ಸೋಮೇಶ್ವರ ಬೀಚ್ ಬಳಿ ಕರ್ತವ್ಯದಲ್ಲಿದ್ದಾಗ ಗಾಂಜಾ ಸೇವಿಸಿದ್ದ ವಿದ್ಯಾಧರ (19) ನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Related Articles
ಕಾರ್ಕಳ: ಕಾರ್ಕಳ ನಗರ ಠಾಣೆಯ ಉಪನಿರೀಕ್ಷಕ ದಾಮೋದರ ಕೆ.ಬಿ. ಅವರು ಆ. 26ರಂದು ಕಸಬ ಗ್ರಾಮದ ಬಂಗ್ಲೆಗುಡ್ಡೆ ಪರನೀರು ಮೈದಾನದ ಬಳಿ ತೆರಳಿದಾಗ ಅಲ್ಲಿ ಸಿಗರೇಟ್‌ನಂತೆ ರೋಲ್ ಮಾಡಿ ಗಾಂಜಾ ಸೇವಿಸುತ್ತಿದ್ದುದು ಪತ್ತೆಯಾಗಿದ್ದು, ಆತನ ಮೇಲೆ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
Advertisement
ಗಂಗೊಳ್ಳಿಯಲ್ಲಿ ಮೂವರುಗಂಗೊಳ್ಳಿ: ತ್ರಾಸಿ ಪ್ರವಾಸಿ ಮಂದಿರದ ಬಳಿಯ ಬೀಚ್‌ನಲ್ಲಿ ಆ. 27ರಂದು ಗಾಂಜಾದಂತಹ ಅಮಲು ಪದಾರ್ಥ ಸೇವನೆ ಮಾಡುತ್ತಿದ್ದ ಬಗ್ಗೆ ಬಂದ ಮಾಹಿತಿಯಂತೆ ಸ್ಥಳಕ್ಕೆ ತೆರಳಿದ ಗಂಗೊಳ್ಳಿ ಠಾಣೆಯ ಎಸ್‌ಐ ವಿನಯ ಕೊರ್ಲಹಳ್ಳಿ ಅವರು ಅಲ್ಲಿದ್ದ ಮೊಹಮ್ಮದ್ ರಿಹಾದ್ ಸಾದಾ, ಮೊಹಮ್ಮದ್ ದಾನಿಶ್, ಮೊಹಮ್ಮದ್ ಅರ್ಬಾಜ್ ವಶಕ್ಕೆ ಪಡೆದು ಅವರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.