ಕಾಸರಗೋಡು: ನಿಯಂತ್ರಣ ಕಳೆದುಕೊಂಡ ಜೀಪು ಮಗುಚಿ ಬಿದ್ದು ಮಹಿಳೆ ಸಹಿತ ಇಬ್ಬರು ಸಾವಿಗೀಡಾಗಿ, ಏಳು ಮಂದಿ ಗಾಯಗೊಂಡ ಘಟನೆ ಗುರುವಾರ ರಾತ್ರಿ ಸುಮಾರು 8 ಗಂಟೆಗೆ ಕರಿಚ್ಚೇರಿಯಲ್ಲಿ ಸಂಭವಿಸಿದೆ. ಈ ಪೈಕಿ ಗಂಭೀರ ಗಾಯಗೊಂಡಿರುವ ಇಬ್ಬರನ್ನು ಮಂಗಳೂರಿನ ಆಸ್ಪತ್ರೆಗೆ ಸೇರಿಸಲಾಗಿದೆ.
Advertisement
ಚಟ್ಟಂಚಾಲ್‌ನ ಕರಿಚ್ಚೇರಿ ತಿರುವಿನಲ್ಲಿ ಜೀಪು ಪಲ್ಟಿಯಾಗಿದ್ದು, ಪಳ್ಳಂಜಿಯ ದಿ|ಕುಂಞಂಬು ನಾಯರ್ ಅವರ ಪತ್ನಿ ಶಾರದಾ (68) ಹಾಗೂ ಪುತ್ರ ಸುಧೀರ್(42) ಸಾವಿಗೀಡಾದರು. ಗಂಭೀರ ಗಾಯಗೊಂಡಿರುವ ಸುಧೀರ್ ಅವರ ಪುತ್ರ ನಿರಂಜನ್ (7) ಮತ್ತು ಸಂಬಂಧಿ ಸುರೇಶ್ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಸೇರಿಸಲಾಗಿದೆ. ಸಣ್ಣಪುಟ್ಟ ಗಾಯಗೊಂಡಿರುವ ಜೀಪು ಚಾಲಕ ರಂಜಿತ್(28), ಚಂದ್ರಿಕಾ (33), ಶಿವರಾಜ್ (15), ವಿಸ್ಮಯ (13) ಮತ್ತು ಸುನೀತಾ ಅವರನ್ನು ಚೆಂಗಳದ ಇ.ಕೆ.ನಾಯನಾರ್ ಸಹಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಸ್ಥಳೀಯರು ಧಾವಿಸಿ ಜೀಪಿನಲ್ಲಿ ಸಿಕ್ಕಿ ಹಾಕಿಕೊಂಡವರನ್ನು ಮೇಲಕ್ಕೆತ್ತಿ ಚೆಂಗಳದ ನಾಯನಾರ್ ಆಸ್ಪತ್ರೆಗೆ ತಲುಪಿಸಿದರೂ ಇಬ್ಬರು ಸಾವಿಗೀಡಾಗಿದ್ದರು. ಪೊಯಿನಾಚಿ ಪರಂಬ್‌ನಲ್ಲಿ ಸಂಬಂಧಿಕರ ವಿವಾಹ ಸಮಾರಂಭದಲ್ಲಿ ಭಾಗವಹಿಸಿ ವಾಪಸಾಗುತ್ತಿದ್ದಾಗ ದುರಂತ ಸಂಭವಿಸಿತು. ಜೀಪು ಸಂಪೂರ್ಣ ನಜ್ಜುಗುಜ್ಜಾಗಿದೆ.
ದೇವದುರ್ಗ: ಕುಂದಾಪುರದ ಯುವ ಹೊಟೇಲ್ ಉದ್ಯಮಿ ಆತ್ಮಹತ್ಯೆ
ಕುಂದಾಪುರ: ತಾಲೂಕಿನ ನಾಡ ಗ್ರಾ. ಪಂ.ವ್ಯಾಪ್ತಿಯ ಕೋಣಿR ಅಂಗಡಿಬೆಟ್ಟು ಪರಿಸರದ ವಿಶ್ವನಾಥ ಶೆಟ್ಟಿ (37) ಅವರು ರಾಯಚೂರು ಜಿಲ್ಲಾ ದೇವದುರ್ಗದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ .
ಬೆಂಗಳೂರಿನಲ್ಲಿ ಬೇಕರಿ ನಡೆಸಿಕೊಂಡಿದ್ದ ಇವರು ನಾಲ್ಕು ವರ್ಷಗಳಿಂದ ದೇವದುರ್ಗ ದಲ್ಲಿ ಹೋಟೇಲ್ ಉದ್ಯಮ ನಡೆಸುತ್ತಿದ್ದರು. 7 ವರ್ಷಗಳ ಹಿಂದೆ ವಿವಾಹಿತರಾಗಿದ್ದ ಅವ ರು ಪತ್ನಿ, 6 ವರ್ಷದ ಪುತ್ರಿ ಹಾಗೂ 4 ವರ್ಷದ ಪುತ್ರ ನನ್ನು ಅಗಲಿದ್ದಾರೆ.
ಆರಂಭದಲ್ಲಿ ಇದು ಕೊಲೆ ಎಂಬ ವದಂತಿ ಹಬ್ಬಿತ್ತಾದರೂ, ಪೊಲೀಸರು ಆತ್ಮಹತ್ಯೆ ಎಂದು ಸ್ಪಷ್ಟಪಡಿಸಿದ್ದಾರೆ. ಮೇ 15ರಂದು ರಾತ್ರಿ ಅವರ ಮೈಗೆ ಹೊಟೇಲಿ ನಲ್ಲಿ ಕುದಿಯುತ್ತಿದ್ದ ಎಣ್ಣೆ ಎ ರಚಿ ಕೊಲೆ ಮಾಡಲಾಗಿದೆ ಎಂದು ವದಂತಿ ಹಬ್ಬಿ ದ್ದು, ಇದಕ್ಕೆ ಪೂರಕವಾಗಿ ಮೃತದೇಹದ ಮೈ ಮೇಲೆ ಸುಟ್ಟ ಗುಳ್ಳೆಗಳಿದ್ದವು. ಈ ಬಗ್ಗೆ ದೇವದುರ್ಗ ಇನ್‌ಸ್ಪೆಕ್ಟರ್ ಉದಯವಾಣಿ ಜತೆ ಮಾತನಾಡಿ, ವಿಶ್ವನಾಥ ಶೆಟ್ಟಿ ವೈಯಕ್ತಿಕ ಕಾರಣದಿಂದ ಮೇ 14ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು ಮಲಗರಬಹುದು ಎಂದು ಜತೆಗಿದ್ದ ಅವರ ಭಾವ ಹುಡುಕಿರ ಲಿಲ್ಲ. ಮರುದಿನ ಬೆಳಗ್ಗೆ 11 ಗಂಟೆ ಆದರೂ ಹೊಟೇಲ್‌ಗೆ ಬಾರದ ಕಾರಣ ಹುಡುಕಾಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದರು. ರಾಯಚೂರಿನಲ್ಲಿ 44 ಡಿಗ್ರಿ ಉಷ್ಣಾಂಶ ಇದ್ದು, ಒಂದು ದಿನ ಮೊದಲೇ ಮೃತಪಟ್ಟ ಕಾರಣ ದೇಹ ಕೊಳೆತು ದೇಹ ದೊಳಗಿನ ರಾಸಾಯನಿಕ ಬಿಡುಗಡೆಯಾಗುವಾಗ ಮೈಮೇಲೆ ಬೊಕ್ಕೆಯಂತಾಗಿತ್ತು. ಸಾವಿನ ಕುರಿತು ಯಾವುದೇ ಸಂಶಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇವರ ಪತ್ನಿ ಮತ್ತು ಮಕ್ಕಳು ದೇವದುರ್ಗದಲ್ಲೇ ಇದ್ದರು. ರಜೆ ಕಾರಣ ಇತ್ತೀಚಿಗಷ್ಟೇ ಊರಿಗೆ ಬಂದಿದ್ದರು. ಸುಮಾರು 10 ದಿನ ಊರಲ್ಲಿದ್ದ ವಿಶ್ವನಾಥ ಶೆಟ್ಟಿ ಅವರು ಮೇ 12ರಂದು ದೇವ ದುರ್ಗಕ್ಕೆ ಹಿಂದಿರುಗಿದ್ದರು. ಸುದ್ದಿ ತಿಳಿದು ಪತ್ನಿ ದೇವದುರ್ಗಕ್ಕೆ ತೆರಳಿದ್ದಾರೆ. ವಿಶ್ವನಾಥ ಶೆಟ್ಟಿ ಅವರು ಪತ್ನಿಯ ಸಹೋದರನ ಜತೆಗಿದ್ದ ರು.