ಮಂಗಳೂರು: ನಗರದ ಸ್ಟೇಟ್‌ಬ್ಯಾಂಕ್ ಬಳಿಯ ಮೀನು ಮಾರ್ಕೆಟ್ ಹಿಂಭಾಗದ ಪಾರ್ಕ್ ನಲ್ಲಿ ಬಲ್ಲಾಳ್‌ಬಾಗ್‌ನ ಶರತ್ (35) ಅವರನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಕಟೀಲಿನ ಲಿಂಗಪ್ಪ (38)ನನ್ನು ಪೊಲೀಸರು ಬಂಧಿಸಿದ್ದಾರೆ.
Advertisement
ಮೃತ ಶರತ್ ಮತ್ತು ಆರೋಪಿ ಲಿಂಗಪ್ಪ ಮದ್ಯಪಾನ ಮಾಡಿ ಪರಸ್ಪರ ಹೊಡೆದಾಡಿಕೊಂಡಿದ್ದು, ಬಳಿಕ ಕೊಲೆ ನಡೆದಿರಬೇಕೆಂದು ಶಂಕಿಸಲಾಗಿದೆ. ಪ್ರಕರಣದಲ್ಲಿ ಇನ್ನೂ ಒಂದಿಬ್ಬರು ಆರೋಪಿಗಳು ಭಾಗಿಯಾಗಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೂಲ್ಕಿ: ಅಕ್ರಮವಾಗಿ ಉಲಾಯಿ – ಪಿದಾಯಿ ಜೂಜಾಡು ತ್ತಿದ್ದ ತಂಡದ ನಾಲ್ವರನ್ನು ಮೂಲ್ಕಿ ಪೊಲೀಸರು ಬಂದಿಸಿದ್ದಾರೆ. ಎರಡೂರು ದಿನ ಗಳ ಹಿಂದೆಯೂ ಇಲ್ಲಿಂದ ಜೂಜಾಟ ನಿರತ ಕೆಲವರನ್ನು ಬಂಧಿಸಲಾಗಿತ್ತು. ಖಚಿತ ಮಾಹಿತಿ ಪಡೆದ ಮೂಲ್ಕಿ ಎಸ್. ಐ. ಶೀತಲ್ ಅಲಗೂರು ಹಾಗೂ ತಂಡದವರು ರಾತ್ರಿ 10 ಗಂಟೆ ಸುಮಾರಿಗೆ ವನಭೋಜನ ಬಳಿಯ ಎಂ.ಆರ್.ಪಿ.ಎಲ್. ಸೆಟ್ ಕಾಲನಿಯ ಮರದಡಿ ಯಲ್ಲಿ ಜೂಜಾಟ ನಿರತ ರಾಗಿದ್ದ ನಾಗರಾಜ,ಕಾಂತಯ್ಯ,ಸಂಗಯ್ಯ ಮತ್ತು ಮನೋಜ್ ಎಂಬವರನ್ನು ಬಂಧಿಸಿ ಆಟದ ಸಲಕರಣೆ ಹಾಗೂ ರೂ. 3 ಸಾ.ರೂ.ಅನ್ನು ವಶಪಡಿಸಿಕೊಂಡಿದ್ದಾರೆ.
Related Articles
ಮೂಲ್ಕಿ: ಇಲ್ಲಿನ ಬಸ್ ನಿಲ್ದಾಣ ಬದಿಯ ಲಲಿತ ಮಹಲ್ ಎದುರಿನ ಹೆದ್ದಾರಿ ಬದಿಯ ಗೂಡಂಗಡಿಯೊಂದರಲ್ಲಿ ಮಟ್ಕಾ ನಿರತನಾಗಿದ್ದ ಓರ್ವನನ್ನು ನಗದು ಸಹಿತ ಮೂಲ್ಕಿ ಪೊಲೀಸರು ಬಂಧಿಸಿದ್ದಾರೆ.
Advertisement
ಕುಟ್ಟಿ ಸಾಲ್ಯಾನ್ ಅವರ ಅಂಗಡಿಯೊಳಗೆ ಮಟ್ಕಾ ಬರೆದು ಚೀಟಿ ಕೊಡುತ್ತಿದ್ದ ಗುರುಪ್ರಸಾದ್‌ನನ್ನು ಮೂಲ್ಕಿ ಎಸ್.ಐ. ಶೀತಲ್ ಅಲಗೂರು ಮತ್ತು ತಂಡದವರು ಬಂಧಿಸಿ 2,500 ರೂ. ಅನ್ನು ವಶಪಡಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ರಿಕ್ಷಾ ಢಿಕ್ಕಿ:ಯಕ್ಷಗಾನ ಕಲಾವಿದ ಸಾವುಮಂಗಳೂರು: ನಗರದ ಕರಂಗಲ್ಪಾಡಿ – ಬಿಜೈ ರಸ್ತೆಯ ತಂದೂರು ಬಾರ್ ಬಳಿ ಶುಕ್ರವಾರ ರಾತ್ರಿ ಆಟೋರಿಕ್ಷಾ ಢಿಕ್ಕಿ ಹೊಡೆದು ತೀವ್ರ ಸ್ವರೂಪದ ಗಾಯಗೊಂಡಿದ್ದ ಪಾದಚಾರಿ, ಯಕ್ಷಗಾನ ಕಲಾವಿದ ಕದ್ರಿ ಕಂಬಳದ ರಾಜೀವ್ ಕುಮಾರ್ (64) ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ರಾಜೀವ್ ಕುಮಾರ್ ಅವರು ರಾತ್ರಿ 8.30ಕ್ಕೆ ಕೆಲಸ ಮುಗಿಸಿ ಮನೆ ಕಡೆಗೆ ಕರಂಗಲ್ಪಾಡಿ ರಸ್ತೆಯ ಮೂಲಕ ಕದ್ರಿ ಕಂಬÛ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ವಿರುದ್ಧ ದಿಕ್ಕಿನಿಂದ ಬಂದ ಆಟೋ ರಿಕ್ಷಾ ಢಿಕ್ಕಿ ಹೊಡೆದಿತ್ತು. ರಸ್ತೆಗೆ ಬಿದ್ದ ಪರಿಣಾಮ ಪ್ರಜ್ಞಾಹೀನ ಸ್ಥಿತಿಯಲ್ಲಿ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖ ಲಿಸ ಲಾಗಿತ್ತು. ಚಿಕಿತ್ಸೆ ಫಲಕಾರಿ ಯಾಗದೆ ರವಿವಾರ ಅವರು ಸಾವನ್ನಪ್ಪಿದರು. ಮೃತರು ಪತ್ನಿ, ಪುತ್ರನನ್ನು ಅಗಲಿದ್ದಾರೆ. ಯಕ್ಷಗಾನ ಕಲಾವಿದ ಅವರು ಮೂಲತಃ ಧರ್ಮಸ್ಥಳ ನಿವಾಸಿಯಾಗಿದ್ದು, ಖ್ಯಾತ ಯಕ್ಷಗಾನ ಕಲಾವಿದರಾಗಿದ್ದರು. ಮುಂಬಯಿಯ ಗುರುನಾರಾಯಣ ಯಕ್ಷಗಾನ ಮಂಡಳಿಯಲ್ಲಿ 35 ವರ್ಷಗಳ ಕಾಲ ಯಕ್ಷಗಾನ ಸೇವೆ ಸಲ್ಲಿಸಿ “ಯಕ್ಷಗಾನ ಕಲಾಪ್ರಶಸ್ತಿ 2012′ ಪಡೆದ ಅವರು ಇತ್ತೀಚೆಗೆ ಬಂದು ಮಂಗಳೂರಿನಲ್ಲಿ ನೆಲೆಸಿದ್ದರು. ಪಚ್ಚನಾಡಿ ಡಂಪಿಂಗ್ ಯಾರ್ಡ್‌ಗೆ ಬೆಂಕಿ: ಸ್ಥಳೀಯರು ಅಸ್ವಸ್ಥ
ಮಂಗಳೂರು: ಪಚ್ಚನಾಡಿಯಲ್ಲಿರುವ ತ್ಯಾಜ್ಯ ಡಂಪಿಂಗ್ ಯಾರ್ಡ್‌ಗೆ ಸೋಮವಾರ ರಾತ್ರಿ ಬೆಂಕಿ ಸ್ಪರ್ಶವಾಗಿದೆ. ಸ್ಥಳದಲ್ಲಿ ಭಾರೀ ಹೊಗೆ ಎದ್ದಿದ್ದು, ಸಮೀಪದ ಮಂಗಳನಗರದ ಹಲವಾರು ನಿವಾಸಿಗಳು ತೀವ್ರ ಅಸ್ವಸ್ಥಗೊಂಡಿದ್ದಾರೆ. ತ್ಯಾಜ್ಯಕ್ಕೆ ತಗಲಿದ್ದ ಬೆಂಕಿಯಿಂದಾಗಿ ಸ್ಥಳೀಯ ಸುಮಾರು 50ಕ್ಕೂ ಹೆಚ್ಚಿನ ಮನೆಯವರು ತೀವ್ರ ವಾಂತಿ ಸಮಸ್ಯೆ ಎದು ರಿಸಿದರು. ಇವ ರನ್ನು ಅಲ್ಲಿಂದ ಸ್ಥಳಾಂತರಗೊಳಿಸಿ ಸಮೀ ಪದ ಕುಡುಪು ಸಹಿತ ಇತರ ಕೆಲ ವೆಡೆ ವಾಸ್ತವ್ಯ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.ಕೆಲವು ಸಮಯದ ಹಿಂದೆಯೂ ಇಲ್ಲಿ ಬೆಂಕಿ ಸ್ಪರ್ಶ ವಾಗಿ ಆರೋಗ್ಯ ಸಮಸ್ಯೆ ತಲೆದೋರಿತ್ತು. ಸಾರಡ್ಕದಲ್ಲಿ ಸಿಕ್ಕಿ ಬಿದ್ದ ಬೊಲೇರೋ: ಲಾಠೀ ಚಾರ್ಜ್
ವಿಟ್ಲ: ಅಪಹರಣಕಾರರದ್ದು ಎಂದು ಹೇಳಲಾದ ವಾಹನ ವೊಂದನ್ನು ಸಾರಡ್ಕ ಚೆಕ್ ಪೋಸ್ಟ್ ನಲ್ಲಿ ನಿಲ್ಲಿಸದ್ದಕ್ಕಾಗಿ ಗಲಾಟೆ ಮಾಡಿದ ತಂಡವನ್ನು ನಿಯಂತ್ರಿಸಲು ವಿಟ್ಲ ಪೊಲೀಸರು ಸೋಮವಾರ ರಾತ್ರಿ ಲಘು ಲಾಠಿ ಪ್ರಹಾರ ನಡೆಸಿದಾದರೆ.
ಅಪಹರಣದ ಸುದ್ದಿ ವಾಟ್ಸಾಪ್ ಮೂಲಕ ವೈರಲ್ ಆದ ಪರಿ ಣಾಮ ಕೆಲವರು ಇಲ್ಲಿ ಪಹರೆ ಕಾಯುತ್ತಿದ್ದರು. ಆಗ ಪೆರ್ಲ ಕಡೆ ಯಿಂದ ಅತಿ ವೇಗದಿಂದ ಬಂದ ಬೊಲೇರೊವನ್ನು ಸ್ಥಳೀ ಯರು ನಿಲ್ಲಿಸಲೆತ್ನಿಸಿದರೂ ಸಾಧ್ಯವಾಗಲಿಲ್ಲ. ಅದು ಹಲವು ವಾಹನಗಳಿಗೆ ಢಿಕ್ಕಿ ಹೊಡೆ ಯುತ್ತಾ ಮುಂದೆ ಸಾಗಿದ್ದು, ಸ್ಥಳೀಯರು ಬೆನ್ನಟ್ಟಿದ್ದರು.ಬಳಿಕ ಸಾರಡ್ಕದಲ್ಲಿ ತಡೆಯುವಲ್ಲಿ ಸಫಲರಾದರು. ಕೂಡಲೇ ಸ್ಥಳೀಯರು ವಾಹನದಲ್ಲಿದ್ದವರ ಮೇಲೆ ಹಲ್ಲೆಗೆ ಮುಂದಾಗಿ, ಬೊಲೇರೋ ವನ್ನು ಪಲ್ಟಿ ಮಾಡಲು ಮುಂದಾದರು. ಆಗ ಪರಿಸ್ಥಿತಿಯನ್ನು ನಿಯಂತ್ರಿಸಲು ಲಘು ಲಾಠಿ ಪ್ರಹಾರ ನಡೆಸಬೇಕಾಯಿತು. ಈ ಸಂದರ್ಭ ಪ್ರೊಬೆಷನರಿ ಉಪನಿರೀಕ್ಷಕರೊಬ್ಬರ ಕೈಗೂ ಗಾಯವಾಗಿದೆ. ಬಂಟ್ವಾಳ ವೃತ್ತ ನಿರೀಕ್ಷಕ ಶರಣ ಗೌಡ ನೇತೃತ್ವದ ವಿಟ್ಲ ಪ್ರೊಬೆಷನರಿ ಉಪನಿರೀಕ್ಷಕ ಕೀರ್ತಿ ಕುಮಾರ್ ಹಾಗೂ ರಾಜೇಶ್ ಅವರಿದ್ದ ವಿಟ್ಲ ಪೊಲೀಸರ ತಂಡ ಪರಿಸ್ಥಿತಿಯನ್ನು ನಿಭಾಯಿಸಿದೆ. ಹಲವು ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬದಿಯಡ್ಕ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಕಳತ್ತೂರು: ಮನೆಯಿಂದ ಕಾಲೇಜು ವಿದ್ಯಾರ್ಥಿನಿ ಅಪಹರಣ
ಕುಂಬಳೆ: ಇಲ್ಲಿಗೆ ಸಮೀಪದ ಕಳತ್ತೂರಿನಿಂದ ಕಾಲೇಜು ವಿದ್ಯಾರ್ಥಿನಿಯೋರ್ವಳನ್ನು ವಾಹನ ದಲ್ಲಿ ಬಂದ ತಂಡ ಮನೆ ಯಿಂದಲೇ ಅಪಹರಿಸಿದ ಘಟನೆ ಮೇ 13ರಂದು ಸಂಜೆ ನಡೆದಿದೆ. ಬೊಲೇರೊ ಮತ್ತು ಸ್ವಿಫ್ಟ್ ಕಾರುಗಳಲ್ಲಿ ಬಂದ ತಂಡವು ವಿದ್ಯಾರ್ಥಿನಿಯನ್ನು ಬಲವಂತವಾಗಿ ಕೊಂಡೊಯ್ದಿರು ವುದಾಗಿ ಮನೆಯವರು ಕುಂಬಳೆ ಪೊಲೀಸರಿಗೆ ದೂರವಾಣಿ ಮೂಲಕ ದೂರು ನೀಡಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ನಡೆಸಿದ್ದಾರೆ. ಒಂದು ವಾಹನವು ಪುತ್ತಿಗೆ ಪೆರ್ಮುದೆ ಭಾಗವಾಗಿ ಬಂದ್ಯೋಡಿಗೆ ತೆರಳಿದೆ. ಇದು ಕೆಲವು ವಾಹನಗಳಿಗೆ ಢಿಕ್ಕಿ ಹೊಡೆದಿದ್ದ ಕಾರಣ ಸಾರ್ವಜನಿಕರು ಅದನ್ನು ಬೆನ್ನಟ್ಟಿದ್ದರು. ಅದನ್ನು ಉಪ್ಪಳ ಸಮೀಪದ ಐಲದಲ್ಲಿ ತಡೆದು ಹಾನಿಮಾಡಲಾ ಗಿದೆ ಎಂದು ಹೇಳಲಾಗುತ್ತಿದೆ. ಕಾರಿನಲ್ಲಿದ್ದವರು ಪರಾರಿ ಯಾಗಿದ್ದು, ಅವರಿಗಾಗಿ ಶೋಧ ಮುಂದುವರಿದಿದೆ. ಐಲ ಪರಿಸರದಲ್ಲಿ ಲಾಠೀ ಚಾರ್ಜ್ ಕೂಡ ಆಗಿದೆ ಎಂದು ತಿಳಿದು ಬಂದಿದೆ.ಈ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕರಣದ ಬಗ್ಗೆ ಸಂದೇಶಗಳು ರವಾನೆಯಾಗಿ ಎಲ್ಲೆಡೆ ವೈರಲ್ ಆಗಿವೆ. ಮಾಣಿ:ತಂಡಗಳ ನಡುವೆ ಘರ್ಷಣೆ
ಕಾರು-ದ್ವಿಚಕ್ರ ವಾಹನ ಢಿಕ್ಕಿ ಕಾರಣ
ವಿಟ್ಲ: ಮಾಣಿಯಲ್ಲಿ ಆ್ಯಕ್ಟಿವಾ ಹಾಗೂ ಕಾರು ನಡುವೆ ಅಪಘಾತ ನಡೆದ ವಿಚಾರದಲ್ಲಿ ಉದ್ರಿಕ್ತರ ಗುಂಪೊಂದು ಕಾರನ್ನು ಪುಡಿಗೈದು, ಇತ್ತಂಡದ ನಡುವೆ ಮಾರಾಮಾರಿ ನಡೆದು ವ್ಯಕ್ತಿಯೊಬ್ಬರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಫರಂಗಿಪೇಟೆ ಮೂಲದ ಆ್ಯಕ್ಟಿವಾ ಹಾಗೂ ಇನ್ನೂ ಕೆಲವು ದ್ವಿಚಕ್ರ ವಾಹನಗಳು ಪೆರ್ನೆ ಕಡೆಯಿಂದ ಫರಂಗಿಪೇಟೆ ಕಡೆಗೆ ತೆರಳುತ್ತಿದ್ದ ವೇಳೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಣಿಯಲ್ಲಿ ಬಾರ್ ಮುಂಭಾಗ ಸ್ವಿಫ್ಟ್ ಕಾರಿನ ನಡುವೆ ಅಪಘಾತ ಸಂಭವಿಸಿದೆ. ಇದೇ ವಿಚಾರದಲ್ಲಿ ಇತ್ತಂಡದ ನಡುವೆ ಮಾತಿನ ಚಕಮಕಿ ನಡೆದಿದ್ದಲ್ಲದೆ ದ್ವಿಚಕ್ರದಲ್ಲಿದ್ದ ತಂಡ ಕಾರನ್ನು ಪುಡಿಗೈದಿದ್ದಾರೆನ್ನಲಾಗಿದೆ. ಬಳಿಕ ಅವರ ಮಾರಾಮಾರಿ ನಡೆ ದಿದೆ. ಘಟನೆಯಲ್ಲಿ ಹಲವು ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಗಾಯಾಳು ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ದಾಖ ಲಾ ಗಿದ್ದಾರೆ. ಸ್ಥಳಕ್ಕೆ ವಿಟ್ಲ ಪೊಲೀಸರು ತೆರಳಿ, ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋ ಬಸ್ತ್ ಏರ್ಪಡಿಸಲಾಗಿದೆ. ಆಮ್ನಿ-ಲಾರಿ ಢಿಕ್ಕಿ: ಓರ್ವ ಸಾವು
ಸುಳ್ಯ: ಮಾಣಿ -ಮೈಸೂರು ರಾ. ಹೆದ್ದಾರಿಯ ಸಂಪಾಜೆ ಗೇಟ್ ಬಳಿ ಸೋಮವಾರ ಸಂಜೆ ಆಮ್ನಿ ಕಾರು ಲಾರಿಗೆ ಢಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲೇ ಮೃತ ಪಟ್ಟಿದ್ದಾರೆ. ಆಮ್ನಿ ಕಾರಿನ ಸಹ ಪ್ರಯಾಣಿಕ ಪುತ್ತೂರಿನ ಬೆದ್ರಾಳದ ಜಯರಾಮ (40) ಮೃತ ವ್ಯಕ್ತಿ. ಕಾರು ಚಲಾಯಿಸುತ್ತಿದ್ದ ಸಹೋದರ ವಿಜಯ ಅವರಿಗೆ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಹೋದರರಾಗಿದ್ದ (ಅ ಣ್ಣ-ತಮ್ಮನ ಮಕ್ಕ ಳು ) ಇವರು ಮಡಿಕೇರಿಯಲ್ಲಿ ನಡೆ ದಿದ್ದ ಕಾರ್ಯಕ್ರಮಕ್ಕೆ ಆಮ್ನಿಯಲ್ಲಿ ತೆರಳಿ ವಾಪಸಾಗುತ್ತಿದ್ದರು. ಈ ಸಂದರ್ಭ ಸಂಪಾಜೆ ಗೇಟ್ ಬಳಿಯ ಪೆಟ್ರೋಲ್ ಪಂಪ್ ಬಳಿ ನಿಂತಿದ್ದ ಲಾರಿಯ ಹಿಂಬದಿಗೆ ಆಮ್ನಿ ಢಿಕ್ಕಿ ಹೊಡೆದಿದೆ. ಕೊಲ್ಲೂರು: ವರದಕ್ಷಿಣೆ ಕಿರುಕುಳ ಪ್ರಕರಣ
ಕೊಲ್ಲೂರು: ವರದಕ್ಷಿಣೆ ದೌರ್ಜನ್ಯ ಮತ್ತು ಜೀವ ಬೆದ ರಿಕೆ ಆರೋಪದಲ್ಲಿ ಗಂಡ ಮತ್ತು ಆತನ ಮನೆಯ ವರ ವಿರುದ್ಧ ಮಹಿಳೆಯೊಬ್ಬರು ನ್ಯಾಯಾಲಯಕ್ಕೆ ದೂರು ನೀಡಿದ್ದು, ಈಗ ನ್ಯಾಯಾಲಯದ ಸೂಚನೆಯಂತೆ ಕೊಲ್ಲೂರು ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ. ಕೊಲ್ಲೂರು ಗ್ರಾಮದ ಹೆಗ್ಡೆಹಕ್ಲು ರಮೇಶ ಅವರ ಪತ್ನಿ ಯಶೋದಾ (34) ದೂರು ನೀಡಿದವರು. ಪ್ರಕರಣದ ವಿವರ
ಯಶೋದಾ ಮತ್ತು ರಮೇಶ ಅವರ ವಿವಾ ಹವು 2014 ಫೆ. 3ರಂದು ಬೆಂಗಳೂರಿನ ಆನೆಕಲ್ಲು ತಾಲೂಕಿನ ಜಿಗಣೆಯ ಲಕ್ಷಿ$¾à ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಗುರುಹಿರಿಯರ ಸಮ್ಮುಖ ದಲ್ಲಿ ನಡೆ ದಿತ್ತು. ಆಗ 1,50,000 ರೂ. ಮತ್ತು 10 ಪವನ್ ಚಿನ್ನವನ್ನು ವರದಕ್ಷಿಣೆ ರೂಪದಲ್ಲಿ ನೀಡಲಾ ಗಿತ್ತು. ಬಳಿಕ ಗಂಡನು ಸಂಬಂಧಿ ಸರೋ ಜಮ್ಮ ಜತೆ ಸೇರಿ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡು ತ್ತದ್ದರು. ಅದೇ ವರ್ಷ ನವೆಂಬರ್‌ನಲ್ಲಿ ಯಶೋದಾ ಅವರು ಗಂಡು ಮಗುವಿನ ಜನ್ಮ ನೀಡಿದ್ದರು. ಈ ನಡುವೆ ಸವಿತಾ ಎಂಬಾಕೆಯನ್ನು ಮನೆಗೆ ಕರೆದುಕೊಂಡು ಬಂದು ಆಕೆಯೊಂದಿಗೆ ಅಕ್ರಮ ಸಂಬಂಧ ಬೆಳೆಸಿಕೊಂಡಿದ್ದ. ಅದಕ್ಕೆ ಯಶೋದಾ ಆಕ್ಷೇಪ ಎತ್ತಿದಾಗ, ಅವಳನ್ನು ಮದು ವೆಯಾಗಿದ್ದೇನೆ ಎಂದು ರಮೇಶ ಹೇಳಿದ್ದ. ಬಳಿಕ ರಮೇಶನು 2019 ಮಾ. 15ರಂದು ಹೆಚ್ಚು ವರಿ ವರದಕ್ಷಿಣೆ ತರು ವಂತೆ ಪತ್ನಿಯನ್ನು ಮನೆಯಿಂದ ಹೊರಹಾಕಿದ್ದ. ಬಳಿಕ ಯಶೋದಾ ತವರಿಗೆ ಬಂದಿದ್ದರು. 2019 ಎ. 5ರಂದು ಅಲ್ಲಿಗೂ ಬಂದ ರಮೇಶನು ಪತ್ನಿ ಮತ್ತು ಮಗು ವಿಗೆ ಹಲ್ಲೆ ಮಾಡಿದ್ದು, ಹಣ ನೀಡದಿದ್ದರೆ ಕೊಂದು ಹಾಕುವುದಾಗಿ ಬೆದ ರಿಕೆಯೊಡ್ಡಿದ್ದಾನೆ ಎಂದು ಯಶೋದಾ ಅವರು ಕುಂದಾಪುರದ ಎಸಿಜೆ ಮತ್ತು ಜೆಎಂಎ ಫ್ಸಿ ನ್ಯಾಯಾಲಯದಲ್ಲಿ ಖಾಸಗಿ ದೂರು ನೀಡಿದ್ದರು. ತೆಂಗಿನ ಮರಕ್ಕೆ ಬೈಕ್ ಢಿಕ್ಕಿ: ಸವಾರ ಸಾವು
ಬೆಳ್ತಂಗಡಿ: ನೆರಿಯ ಗ್ರಾಮದ ಬಯಲು ಎಂಬಲ್ಲಿ ತೆಂಗಿನ ಮರಕ್ಕೆಬೈಕ್ ಢಿಕ್ಕಿಯಾಗಿ ಸವಾರ ಮೃತಪಟ್ಟು ಸಹ ಸವಾರ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಸವಾರ ಕೇರಳ ಕೊಲ್ಲಂ ಮೂಲದ ರೆಜು (47) ಮೃತಪಟ್ಟಿದ್ದು, ಸಹ ಸವಾರ ಇಂದಬೆಟ್ಟು ಗ್ರಾಮದ ರಾಸರೊಟ್ಟು ನಿವಾಸಿ ನಾರಾಯಣ ಬಿ.ಆರ್. (37) ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೆಳ್ತಂಗಡಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.