Advertisement
ಉಡುಪಿ: ವಾಹನ ತೆರಿಗೆ ಮರುಪಾವತಿಗೆ ಲಂಚ ಕೇಳಿದ ದೂರಿನ ಹಿನ್ನೆಲೆಯಲ್ಲಿ ಮಾ.16ರಂದು ಎಸಿಬಿಯಿಂದ ಬಂಧಿಸಲ್ಪಟ್ಟಿದ್ದ ಉಡುಪಿ ಆರ್‌ಟಿಒ ಆರ್.ಎಂ. ವರ್ಣೇಕರ್ ಅವರ ವಿರುದ್ಧ ಮಣಿಪಾಲದ ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘ ಕೂಡ ಮಾ.23ರಂದು ಎಸಿಬಿಗೆ ದೂರು ಸಲ್ಲಿಸಿದೆ.
ಜಿಲ್ಲಾಧಿಕಾರಿಯವರು 2012ರಲ್ಲಿ 2012ರ ಜ.31ರ ವರೆಗಿನ ಎಲ್ಲ ರಿಕ್ಷಾಗಳ ಪರವಾನಿಗೆಯನ್ನು ನಗರ ಪರವಾನಿಗೆಯನ್ನಾಗಿ ಪರಿವರ್ತಿಸಿ ಅಧಿಸೂಚನೆ ಹೊರಡಿಸಿದ್ದರು. ಅದರಂತೆ ಸುಮಾರು 10,000 ರಿಕ್ಷಾಗಳು ವಲಯ 1ರ ವ್ಯಾಪ್ತಿಗೆ ಬರುತ್ತದೆ. ಒಂದು ರಿಕ್ಷಾಕ್ಕೆ 70 ರೂ.ಗಳಂತೆ ಪಡೆದುಕೊಂಡರೆ ಈ ಮೊತ್ತ ದೊಡ್ಡದಾಗುತ್ತದೆ. ಸ್ಟಿಕ್ಕರ್ ಅಳವಡಿಸದ ರಿಕ್ಷಾಗಳಿಗೆ ಎಫ್ಸಿ ಕೂಡ ಮಾಡುತ್ತಿಲ್ಲ. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಸಂಘವು ಉಡುಪಿ ಎಸಿಬಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಹೇಳಿದೆ.
Related Articles
Advertisement
ನೈಲಾಡಿ:ಅಕ್ರಮ ಕೋರೆಗೆ ದಾಳಿ ಕೋಟ: ಹಳ್ಳಾಡಿ ಸಮೀಪದ ನೈಲಾಡಿಯ ಸರಕಾರಿ ಜಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅನಧಿಕೃತ ಕಪ್ಪುಕಲ್ಲು ಕೋರೆಗೆ ಪೊಲೀಸರು ಮಾ.22ರಂದು ದಾಳಿ ನಡೆಸಿ, ಗಣಿಗಾರಿಕೆಗೆ ಬಳಸುತ್ತಿದ್ದ ವಸ್ತುಗಳು ಹಾಗೂ ಲಾರಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಉಡುಪಿ ಡಿವೈಎಸ್‌ಪಿ ಜಯಶಂಕರ್ ಹಾಗೂ ಬ್ರಹ್ಮಾವರ ವೃತ್ತ ನಿರೀಕ್ಷಕ ಪೂವಯ್ಯ, ಕೋಟ ಠಾಣಾಧಿಕಾರಿ ರಫೀಕ್ ಜಂಟಿಯಾಗಿ ದಾಳಿ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ದಿವಾಕರ ಶೆಟ್ಟಿ ವಿರುದ್ಧ ಪ್ರಕರಣ ದಾಖಲಾಗಿದೆ.ಗಣಿಗಾರಿಕೆಯ ಕಲ್ಲು,ಲಾರಿ,ಕಂಪ್ರಷರ್ ಯಂತ್ರ, ಹಿಟಾಚಿ ಹಾಗೂ ಬಂಡೆ ಸಿಡಿಸಲು ಬಳಸುತ್ತಿದ್ದ ಸ್ಫೋಟಕ ಮುಂತಾದವುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೆಎಸ್ಸಾರ್ಟಿಸಿ ವಿಭಾಗೀಯ
ನಿಯಂತ್ರಕ ಅಮಾನತು
ಮಂಗಳೂರು: ವರ್ಗಾವಣೆಗೊಂಡ ಬಳಿಕವೂ ಹಾಸನ ವಿಭಾಗದ ಕಡತಗಳನ್ನು ವಶದಲ್ಲಿರಿಸಿಕೊಂಡು ವಿಲೇವಾರಿ ಮಾಡುತ್ತಿದ್ದ ಆರೋಪದ ಮೇಲೆ ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾ ಗೀಯ ನಿಯಂತ್ರಕ ಪಿ. ಯಶವಂತ ಕುಮಾರ್ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಅವರು ಹಾಸನ ವಿಭಾಗದ ಕಡತ ಗಳನ್ನು ಮಂಗಳೂರಿಗೆ ತಂದು ವಿಲೇವಾರಿ ಮಾಡುತ್ತಿದ್ದಾರೆ ಎಂಬ ಆರೋಪ ಬಂದಿತ್ತು. ದೂರು ಆಧರಿಸಿ ಮಂಗಳೂರು ವಿಭಾಗೀಯ ನಿಯಂತ್ರಕರ ಕಚೇರಿಯಲ್ಲಿ ಇತ್ತೀಚೆಗೆ ದಿಢೀರ್ ಶೋಧ ನಡೆಸಿದ್ದ ಬೆಂಗಳೂರಿನ ಕೆಎಸ್‌ಆರ್‌ಟಿಸಿ ವಿಜಿಲೆನ್ಸ್ ಅಧಿಕಾರಿಗಳು, ಹಾಸನ ವಿಭಾಗಕ್ಕೆ ಸಂಬಂಧಿಸಿದ ಕೆಲವು ಕಡತಗಳನ್ನು ವಶಪಡಿಸಿದ್ದರು. ಪ್ರಸ್ತುತ ಜೈಶಾಂತ್ ಅವರನ್ನು ಮಂಗಳೂರು ವಿಭಾಗದ ನಿಯಂತ್ರಣ ಅಧಿಕಾರಿ ಯನ್ನಾಗಿ ನೇಮಕ ಮಾಡಲಾಗಿದೆ. ನದಿಗೆ ಬಿದ್ದು ಸಾವು
ಉಪ್ಪುಂದ: ಸೌಪರ್ಣಿಕಾ ನದಿಯಲ್ಲಿ ತೇಲುತ್ತಿದ್ದ ತೆಂಗಿನ ಕಾಯಿಯನು ದೋಣಿಯ ಮೂಲಕ ಹೋಗಿ ಹೆಕ್ಕುತ್ತಿದ್ದ ಸಂದ ರ್ಭದಲ್ಲಿ ವ್ಯಕ್ತಿಯೋರ್ವ ನೀರಿಗೆ ಬಿದ್ದು ಮೃತರಾದ ಘಟನೆ ಮರವಂತೆ ಗ್ರಾಮದ ಕಳಿಹಿತ್ಲಿನಲ್ಲಿ ಶುಕ್ರ ವಾರ ಸಂಜೆ ಸಂಭವಿಸಿದೆ. ಕಳಿಹಿತ್ಲಿನ ರಿಚಡ್ ಗೋಸ್ವಾ ಲಿಸ್ (58) ಅವರು ಮೃತಪಟ್ಟವರು.ಇವರ ಪತ್ನಿ ಸಂಜೆ ಮನೆಗೆ ಬಂದಾಗ ಗಂಡ ಮನೆಯಲ್ಲಿರಲಿಲ್ಲ. ಹುಡುಕಾಡಿದಾಗ ದುರಂತ ಬೆಳಕಿಗೆ ಬಂದಿದ್ದು, ಗಂಗೊಳ್ಳಿ ಠಾಣೆಯಲ್ಲಿ ಪ್ರಕ ರಣ ದಾಖಲಾಗಿದೆ.
ಕಿನ್ನಿಮೂಲ್ಕಿ: ಸ್ಕೂಟಿ ಸ್ಕಿಡ್; ಸವಾರ ಗಂಭೀರ
ಉಡುಪಿ: ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಬರುವ ಸರ್ವಿಸ್ ರಸ್ತೆಯ ಹಂಪ್‌ನಲ್ಲಿ ಸ್ಕೂಟಿ ಸವಾರರೊಬ್ಬರು ಶುಕ್ರವಾರ ರಾತ್ರಿ ಸ್ಕಿಡ್ ಆಗಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಸಾರ್ವಜನಿಕರು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸವಾರನ ಬಗ್ಗೆ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ. ಹೆಲ್ಮೆಟ್ ಧರಿಸಿದ್ದರೂ ಅವರ ತಲೆಗೆ ಗಂಭೀರ ಏಟಾ ಗಿದ್ದು, ತೀವ್ರ ರಕ್ತಸ್ರಾವವೂ ಆಗಿದೆ. ಬೈಕ್‌ಗಳು ಢಿಕ್ಕಿ: ದಂಪತಿಗೆ ಗಾಯ
ಗಂಗೊಳ್ಳಿ: ತಲ್ಲೂರಿನಿಂದ ಆಲೂರಿಗೆ ಸಾಗುತ್ತಿದ್ದ ಬೈಕಿಗೆ ಇನ್ನೊಂದು ಬೈಕ್ ಢಿಕ್ಕಿ ಹೊಡೆದು ಪರಾರಿಯಾದ ಘಟನೆ ಹಕ್ಲಾಡಿ ಭಜನ ಮಂದಿರ ಬಳಿ ಸಂಭವಿಸಿದೆ. ಪರಿಣಾಮ ಜಗದೀಶ್ ಹಾಗೂ ಅವರ ಪತ್ನಿ ಮಾಲತಿ ಗಾಯಗೊಂಡಿದ್ದಾರೆ.ಅಪಘಾತ ನಡೆಸಿದ ಬರ್ಕೆ ಮಂಜು ಎಂಬಾತ ಬೈಕ್ ಸಹಿತ ಪರಾರಿಯಾಗಿದ್ದು, ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೀಜಾಡಿ: ಅಪಘಾತ; ಐವರಿಗೆ ಗಾಯ
ಕುಂದಾಪುರ: ಬೀಜಾಡಿ ಜಂಕ್ಷನ್ ಬಳಿಯ ಹೆದ್ದಾರಿಯಲ್ಲಿ ಸರಣಿ ಅಪಘಾತವಾಗಿದೆ. ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಸುಬೀರ್ ಎಂ.ಚಲಾಯಿಸುತ್ತಿದ್ದ ಲಾರಿಯು ಬಾಲಕೃಷ್ಣ ಪೂಜಾರಿ ಚಲಾಯಿಸುತ್ತಿದ್ದ ಜೀಪಿಗೆ ಹಿಂದಿನಿಂದ ಢಿಕ್ಕಿ ಹೊಡೆ ದಿದೆ.ಪರಿಣಾಮ ಜೀಪು ನಿಲ್ಲಿಸಿದ್ದ ಸ್ಕೂಟರಿಗೆ ಗುದ್ದಿದೆ. ಘಟ ನೆಯಿಂದ ಸ್ಕೂಟರಿನಲ್ಲಿದ್ದ ರಂಜನ್ ಉಡುಪ, ಜೀಪಿನಲ್ಲಿದ್ದ ಉದಯ,ಇಂದಿರಾ,ವಾಣಿಶ್ರೀ ಮತ್ತು ದುರ್ಗಾದಾಸ್ ಗಾಯಗೊಂಡು ಕೋಟೇಶ್ವರ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಉದನೆ: ಬಸ್ ಢಿಕ್ಕಿ ಹೊಡೆದು ಬೈಕ್ ಸವಾರ ಸಾವು
ಉಪ್ಪಿನಂಗಡಿ: ಕೆಎಸ್ಸಾರ್ಟಿಸಿ ಬಸ್ ಢಿಕ್ಕಿ ಹೊಡೆದು ಬೈಕ್ ಸವಾರ, ನೆಲ್ಯಾಡಿ ಬಳಿಯ ಕೊಪ್ಪ ಮಾದೇರಿ ನಿವಾಸಿ ಉಮೇಶ್ ಗೌಡ (55) ಅವರು ಸ್ಥಳದಲ್ಲೇ ಮೃತಪಟ್ಟ ಘಟನೆ ಉದನೆ ಬಳಿ ಶುಕ್ರವಾರ ಸಂಜೆ ಸಂಭವಿಸಿದೆ.ಅವರು ಶಿರಾಡಿ ಗಡಿಯಲ್ಲಿ ಕ್ಯಾಂಟೀನ್ ಹೊಂದಿದ್ದರು. ಕ್ಯಾಂಟೀನ್ ಮುಚ್ಚಿ ಮನೆಯತ್ತ ಬರುತ್ತಿದ್ದಾಗ ಅಪ ಘಾತ ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಬಸ್ ಢಿಕ್ಕಿ ಹೊಡೆದಿದೆ.ಪರಿಣಾಮ ತಲೆಗೆ ಗಂಭೀರ ಗಾಯವಾಗಿ ಸ್ಥಳದಲ್ಲೇ ಸಾವನ್ನಪ್ಪಿದರು. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.