Advertisement

ಕರಾವಳಿ ಭಾಗದ ಅಪರಾಧ ಸುದ್ದಿಗಳು

02:47 AM May 04, 2019 | Team Udayavani |

ಕೂಲಿ ಕಾರ್ಮಿಕರ ದಾಖಲೆ ಬಳಸಿ ಕ್ರಿಮಿನಲ್‌ಗಳಿಗೆ ಸಿಮ್‌: ಮೂವರಿಂದ ಪೊಲೀಸರಿಗೆ ದೂರು
ಉಡುಪಿ: ಉಡುಪಿಯ ಮೂವರು ಕೂಲಿ ಕಾರ್ಮಿಕರು ಸಿಮ್‌ ಕಾರ್ಡ್‌ ಪಡೆಯಲು ನೀಡಿದ ದಾಖಲೆಗಳನ್ನು ಆಧಾರವಾಗಿಟ್ಟು ಕೊಂಡು ಬೆಂಗಳೂರಿನಲ್ಲಿ ವಿವಿಧ ಪ್ರಕರಣಗಳಲ್ಲಿ ಭಾಗಿಯಾದ ಆರೋ ಪಿಗಳಿಗೆ ಸಿಮ್‌ ಕಾರ್ಡ್‌ ನೀಡಿರುವ ಪ್ರಕರಣ ಬೆಳಕಿಗೆ ಬಂದಿದೆ.

Advertisement

ಬಾದಾಮಿ ತಾಲೂಕು ಲಾಯದ ಗುಂಡಿಯ ಈಶ್ವರ್‌ ಆಚನೂರು (35), ಬೂದಿ ನಗಡದ ಸಂತೋಷ್‌ ನಕ್ಕರ್‌ಗುಂಡಿ (25) ಮತ್ತು ಹನುಮಂತ ಎತ್ತಿನಮನಿ (38) ಅವರು ಈ ಬಗ್ಗೆ ದೂರು ನೀಡಿದ್ದು, ಕೂಲಿ ಕಾರ್ಮಿಕರಾಗಿರುವ ತಮಗೆ ವಂಚನೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

“ನಾವು ಉಡುಪಿಯಲ್ಲಿ ಕೂಲಿ ಕಾರ್ಮಿಕರಾಗಿದ್ದು, ಸುಮಾರು ಒಂದು ವರ್ಷದ ಹಿಂದೆ ಉಡುಪಿ ಸಿಟಿ ಬಸ್‌ ನಿಲ್ದಾಣದಲ್ಲಿ ವೊಡಾಫೋನ್‌ ಕಂಪೆನಿ ವತಿಯಿಂದ ಸಿಮ್‌ ಕಾರ್ಡ್‌ಗಳನ್ನು ಮಾರಾಟ ಮಾಡುತ್ತಿದ್ದಾಗ ನಮ್ಮ ಆಧಾರ್‌ ಕಾರ್ಡ್‌ ಮತ್ತು ಹೆಬ್ಬೆರಳಿನ ಗುರುತು ನೀಡಿ ಸಿಮ್‌ ಖರೀದಿಸಿದ್ದೆವು. ಅದೇ ದಾಖಲೆಗಳನ್ನು ಆಧಾರವಾಗಿಟ್ಟುಕೊಂಡು ಬೆಂಗ ಳೂರು ನಗರದ ರಾಜರಾಜೇಶ್ವರಿ ನಗರ ಠಾಣೆಯಲ್ಲಿ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿಗಳಿಗೆ ಕೂಡ ಸಿಮ್‌ ಕಾರ್ಡ್‌ ನೀಡಿ ನಮಗೆ ವಂಚಿಸಲಾಗಿದೆ’ ಎಂದು ಉಡುಪಿ ನಗರ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಕೊಲೆ ಆರೋಪಿಗಳು
ಕೂಲಿ ಕಾರ್ಮಿಕರ ದಾಖಲೆಗಳ ಆಧಾರದಲ್ಲಿ ಸಿಮ್‌ ಪಡೆದಿರುವ ಆರೋಪಿಗಳ ವಿರುದ್ಧ ಕೊಲೆ ಸಹಿತ ವಿವಿಧ ಪ್ರಕರಣಗಳಿವೆ. ಆಮ್ಸ್‌ì ಆ್ಯಕ್ಟ್ ಮತ್ತು ಕೋಕಾ ಪ್ರಕರಣದಲ್ಲಿಯೂ ಆರೋಪಿಗಳಾಗಿದ್ದಾರೆ. ಬೆಂಗಳೂರಿನ ಪೊಲೀಸರು ಸಿಮ್‌ ಕಾರ್ಡ್‌ ದಾಖಲೆಗಳ ಆಧಾರದಲ್ಲಿ ತನಿಖೆ ನಡೆಸುತ್ತಾ ಉಡುಪಿಯಲ್ಲಿದ್ದ ಕೂಲಿ ಕಾರ್ಮಿಕರನ್ನು ವಿಚಾರಿಸಿದಾಗ ಕಾರ್ಮಿಕರಿಗೆ ವಿಚಾರ ಗೊತ್ತಾಗಿದೆ.

ವಂಚನೆ,ಜೀವ ಬೆದರಿಕೆ: ಪಿಡಿಒ ವಿರುದ್ಧ ಜಾಮೀನು ರಹಿತ ವಾರಂಟ್‌
ಉಡುಪಿ: ಹಣ ವಂಚನೆ ಪ್ರಕರಣವೊಂದರಲ್ಲಿ ಪಿಡಿಒ ಅಪ್ಪು ಶೇರಿಗಾರ್‌ ವಿರುದ್ಧ ಉಡುಪಿ ನ್ಯಾಯಾ ಲಯ ಶುಕ್ರವಾರ ಜಾಮೀನು ರಹಿತ ಬಂಧನ ವಾರಂಟ್‌ ಹೊರಡಿಸಿದೆ.

Advertisement

ಅಪ್ಪು ಶೇರಿಗಾರ್‌ 3,30,000 ರೂ. ವಂಚಿಸಿರುವುದು, ಅತಿಕ್ರಮಣ ಮಾಡಿರುವುದು ಮತ್ತು ಜೀವ ಬೆದರಿಕೆ ಒಡ್ಡಿರುವ ಬಗ್ಗೆ ಉಳ್ಳಾಲ ಸೋಮೇಶ್ವರದ ಪ್ರವೀಣ್‌ ಎಸ್‌. ರಾವ್‌ ಅವರು ಕಾಪು ಠಾಣೆಗೆ ದೂರು ನೀಡಿದ್ದರು. ಆದರೆ ಪೊಲೀಸರು “ಬಿ’ ರಿಪೋರ್ಟ್‌ ಸಲ್ಲಿಸಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಪ್ರವೀಣ್‌ ನ್ಯಾಯಾಲಯದ ಮೊರೆ ಹೋಗಿದ್ದರು. ಉಡುಪಿ 2ನೇ ಹೆಚ್ಚು ವರಿ ಸಿವಿಲ್‌ ನ್ಯಾಯಾಲಯ ಮತ್ತು ಜೆಎಂಎಫ್ಸಿ ನ್ಯಾಯಾಧೀಶೆ ಶೋಭಾ ಇ. ಅವರು ವಂಚನೆ ಬಗ್ಗೆ ಕ್ರಿಮಿನಲ್‌ ಪ್ರಕರಣ ದಾಖಲಿಸಿ, ಮೇ 3ರಂದು ಜಾಮೀನುರಹಿತ ವಾರಂಟ್‌ ಹೊರಡಿಸಿದ್ದಾರೆ. ದೂರು ದಾರರ ಪರ ನ್ಯಾಯವಾದಿ ಶಿರಿಯಾರ ಕಲಮರ್ಗಿ ಪ್ರಭಾಕರ ನಾಯಕ್‌ ವಾದಿಸಿದ್ದಾರೆ.

ಮರಳು ಸಹಿತ ಲಾರಿ ವಶ, ಚಾಲಕ ಸೆರೆ
ಕಾಪು: ಅಕ್ರಮವಾಗಿ ಮಂಗಳೂರು ಕಡೆಯಿಂದ ಉಡುಪಿಯ ತ್ತ ಮರಳು ಸಾಗಿಸುತ್ತಿದ್ದ ಲಾರಿಯನ್ನು ಕಾಪು ಪೊಲೀಸರು ಶುಕ್ರವಾರ ಪಾಂಗಾಳದಲ್ಲಿ ತಡೆದು ನಿಲ್ಲಿಸಿ ವಶಕ್ಕೆ ಪಡೆದು ಕೊಂಡಿದ್ದಾರೆ.

ಖಚಿತ ಮಾಹಿತಿ ಆಧಾರದಲ್ಲಿ ಕಾಪು ಎಸ್‌ಐ ನವೀನ್‌ ನಾಯ್ಕ ಅವರು ಸಿಬಂದಿ ಜತೆ ಯಲ್ಲಿ ಪಾಂಗಾಳ ಹಳೆ ವಿಜಯ ಬ್ಯಾಂಕ್‌ ಹತ್ತಿರ ಲಾರಿಯನ್ನು ತಡೆಯಲು ಮುಂದಾದರು. ಆದರೆ ತಮ್ಮ ಸೂಚನೆಯನ್ನು ಧಿಕ್ಕರಿಸಿ ತಪ್ಪಿಸಿಕೊಳ್ಳಲು ಮುಂದಾದ ಲಾರಿಯನ್ನು ಪೊಲೀಸರು ಜೀಪಿನಲ್ಲಿ ಬೆನ್ನಟ್ಟಿ ತಡೆದು ನಿಲ್ಲಿಸಿದರು. ಬಳಿಕ ಚಾಲಕ ಪ್ರವೀಣ್‌ನನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ತಾನು ಫ‌ರಿಂಗಿ ಪೇಟೆಯಿಂದ ಶಬ್ಬೀರ್‌ ಮಂಗಳೂರು ಅವರ ಸೂಚನೆಯಂತೆ ಮರಳನ್ನು ಉಡುಪಿ ಕಡೆಗೆ ಸಾಗಿಸುತ್ತಿದ್ದುದಾಗಿ ಪೊಲೀಸರಿಗೆ ತಿಳಿಸಿದ್ದಾನೆ.

ಸುಮಾರು 15 ಸಾ.ರೂ. ಮೌಲ್ಯದ 17 ಟನ್‌ ಮರ ಳನ್ನು ಲಾರಿ ಸಹಿತ ವಶಕ್ಕೆ ಪಡೆದಿರುವ ಪೊಲೀಸರು, ಚಾಲಕ ನನ್ನು ಬಂಧಿಸಿದ್ದಾರೆ. ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾ ಗಿದೆ.

ಹರ್ಷಿಕಾ ಪೂಣಚ್ಚಗೆ ಕಿರುಕುಳ: ಸೆರೆ‌
ಮಡಿಕೇರಿ: ಸ್ಯಾಂಡಲ್‌ವುಡ್‌ ನಟಿ, ಕೊಡಗಿನ ಹರ್ಷಿಕಾ ಪೂಣಚ್ಚ ಅವರಿಗೆ ಇಬ್ಬರು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ನಟ ಭುವನ್‌ ಪೊನ್ನಣ್ಣ ಅವರು ಮಡಿಕೇರಿ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ಮಕ್ಕಂದೂರು ಮೂಲದ ಬನ್ಸಿ ನಾಣಯ್ಯ ಎಂಬಾ ತ ನನ್ನು ಪೊಲೀಸರು ಬಂಧಿಸಿದ್ದು, ಬಿಪಿನ್‌ ದೇವಯ್ಯ ಎಂಬಾತನಿಗೆ ಬಲೆ ಬೀಸಿದ್ದಾರೆ.

ಹರ್ಷಿಕಾ ಪೂಣಚ್ಚ ಮೇ 2ರಂದು ಮಡಿಕೇರಿ ಹೊರವಲಯದ ಕಡಗದಾಳು ಸಮೀಪದ ರೆಸಾರ್ಟ್‌ ನಲ್ಲಿ ಆಯೋಜಿಸಲಾಗಿದ್ದ, ಸಂಬಂ ಧಿಕರ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅಲ್ಲಿಗೆ ಬಂದಿದ್ದ ಮಕ್ಕಂದೂರು ಮೂಲದ ಬನ್ಸಿ ನಾಣಯ್ಯ ಹಾಗೂ ಬಿಪಿನ್‌ ದೇವಯ್ಯ ಅವರು ರಾತ್ರಿ 11 ಗಂಟೆ ಸುಮಾರಿಗೆ ನಟಿ ಹರ್ಷಿಕಾ ಜತೆ ಜಗಳವಾಡಿ ಕಿರುಕುಳ ನೀಡಿದ್ದಾರೆ ಎನ್ನ ಲಾಗಿದೆ.

ಬೈಕ್‌ ಸ್ಕಿಡ್‌: ಸಹಸವಾರೆ ಸಾವು
ಬ್ರಹ್ಮಾವರ: ಬಾರಕೂರು ಕೂಡ್ಲಿ ಕ್ರಾಸ್‌ ಬಳಿ ಗುರುವಾರ ರಾತ್ರಿ ಬೈಕ್‌ ಸ್ಕಿಡ್‌ ಆಗಿ ಹಿಂಬದಿ ಸವಾರೆ ಶೃಂಗೇರಿ ಕುಲಾಲ್ತಿ ಮೃತಪಟ್ಟಿದ್ದಾರೆ. ಸವಾರ ವಿಜಯ ಕುಲಾಲ್‌ ಕೂಡ ಗಾಯಗೊಂಡಿದ್ದಾರೆ.

ಬೈಕ್‌ ಬಾರಕೂರು ಕಡೆ ತೆರಳುತ್ತಿದ್ದಾಗ ಕೂಡ್ಲಿ ತಿರುವು ಬಳಿ ನಿಯಂತ್ರಣ ತಪ್ಪಿ ಬಿದ್ದ ಪರಿಣಾಮ ತಲೆಗೆ ತೀವ್ರ ಗಾಯವಾಗಿ ಶೃಂಗೇರಿ ಕುಲಾಲ್ತಿ ಕೊನೆಯುಸಿರೆಳೆದರು.

ಬೆಂಕಿ ತಗಲಿ ಗಾಯಗೊಂಡಿದ್ದ ಮಹಿಳೆ ಸಾವು
ಮಲ್ಪೆ: ಮನೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಬೆಂಕಿ ತಗಲಿ ಗಂಭೀರವಾಗಿ ಗಾಯಗೊಂಡಿದ್ದ ಕಲ್ಯಾಣಪುರದ ಜಯಲಕ್ಷಿ$¾à ಕೆದ್ಲಾಯ (78) ಶುಕ್ರವಾರ ಮಣಿಪಾಲದ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾರೆ. ಅವರು ಮನೆಯಲ್ಲಿ ಒಂಟಿಯಾಗಿದ್ದು, ಗುರುವಾರ ಮಧ್ಯಾಹ್ನ ಬೆಂಕಿ ತಗಲಿತ್ತು.

ಹಲ್ಲೆ, ಬೆದರಿಕೆ: ದೂರು
ಬ್ರಹ್ಮಾವರ: ಹನೆಹಳ್ಳಿ ಗ್ರಾಮದ ಬಂಡಿಮಠದಲ್ಲಿ ಬುಧವಾರ ಸ್ವಂತ ಮನೆಯ ಉಪ ಯೋಗಕ್ಕೆ ಬಾವಿ ತೋಡುವಾಗ ಹಲ್ಲೆ ನಡೆದಿರುವುದಾಗಿ ಜಯಲಕ್ಷ್ಮೀ ಕೆದ್ಲಾಯ ಆರೋಪಿಸಿದ್ದಾರೆ.

ಖಾಸಗಿ ಸ್ಥಳಕ್ಕೆ ಅಕ್ರಮವಾಗಿ ಪ್ರವೇಶಿಸಿದ ರಾಜೇಶ ಅಡಿಗ, ಪ್ರಭಾಕರ ಶೆಟ್ಟಿ, ಗಂಗಾಧರ ಶೆಟ್ಟಿ, ಯೋಗೀಶ ಶೆಟ್ಟಿ, ಕಾಂತಿಮತಿ, ವಿಠಲ ಶೆಟ್ಟಿ, ಶಂಕರ ಶಾಂತಿ ಮೊದಲಾದವರು ತನಗೆ ಹಾಗೂ ಬಾವಿ ತೋಡಲು ಗುತ್ತಿಗೆ ಪಡೆದ ಪ್ರಸನ್ನ ಆಚಾರ್ಯ, ಪ್ರಸಾದ ಆಚಾರ್ಯ ಅವರಿಗೂ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ಕ್ಷುಲ್ಲಕ ವಿಚಾರಕ್ಕೆ ಹಲ್ಲೆ
ವಿಟ್ಲ: ಕ್ಷುಲ್ಲಕ ವಿಚಾರಕ್ಕೆ ಸಂಬಂಧಿ ಇಸ್ಮಾಯಿಲ್‌ ಅವರು ಹಲ್ಲೆ ನಡೆಸಿದ್ದಾರೆ ಎಂದು ಆರೋ ಪಿಸಿ, ವಿಟ್ಲ ಮೇಗಿನಪೇಟೆ ಪಾದೆ ನಿವಾಸಿ ಮಹಮ್ಮದ್‌ ಯೂನಸ್‌ (18) ವಿಟ್ಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲಾಗಿದ್ದಾರೆ.

ಗ್ರಾ.ಪಂ.ಸಿಬಂದಿಗೆ ಹಲ್ಲೆ : ಬಂಧನ
ವಿಟ್ಲ: ಬ್ಯಾನರ್‌ ತೆರವು ವಿವಾದದಲ್ಲಿ ಪೆರುವಾಯಿ ಗ್ರಾಮ ಪಂಚಾಯತ್‌ ಸಿಬಂದಿ ಮೇಲೆ ಹಲ್ಲೆ ನಡೆಸಿದ್ದ ಆರೋಪಿ ಪೆರುವಾಯಿ ಅಶ್ವಥನಗರ ನಿವಾಸಿ ಯತೀಶ್‌ ಪೆರುವಾಯಿ (28)ಯನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.

ಪುತ್ತೂರು: ಮಧ್ಯವ ಯಸ್ಕ ನಾಪತ್ತೆ
ಪುತ್ತೂರು:ಬನ್ನೂರು ನಂದಿಲ ಮಾರಡ್ನ ಸಮೀಪ ಬಾಡಿಗೆ ಮನೆಯಲ್ಲಿದ್ದ ಅಲೆಕ್ಸ್‌ ಮಸ್ಕರೇನಸ್‌ (58) ಅವರು ನಾಪತ್ತೆಯಾಗಿರುವ ಕುರಿತು ಪುತ್ತೂರು ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಅವರು ಮಾನಸಿಕ ಅಸ್ವಸ್ಥರಾಗಿದ್ದು, ಎ. 26ರಂದು ಮನೆ ಯಿಂದ ಪೇಟೆಗೆಂದು ಹೋದವರು ಹಿಂದಿರುಗಿಲ್ಲ ಎಂದು ಪತ್ನಿ ನೀತಾ ಮಸ್ಕರೇನಸ್‌ ಪೊಲೀಸರಿಗೆ ದೂರು ನೀಡಿದ್ದಾರೆ.

ಕಾರು ಅಡ್ಡಗಟ್ಟಿ ಹಲ್ಲೆ: ದೂರು
ಉಡುಪಿ: ಕಾರು ತಡೆದು ನಿಲ್ಲಿಸಿ ಹಲ್ಲೆ ನಡೆಸಿರುವ ಬಗ್ಗೆ ಸಂತೆಕಟ್ಟೆ ನಯಂಪಳ್ಳಿಯ ಗೋಪಾಲಕೃಷ್ಣ ಆಚಾರ್ಯ ದೂರು ನೀಡಿದ್ದಾರೆ.

“ಮೇ 2ರಂದು ರಾತ್ರಿ 11 ಗಂಟೆ ಸುಮಾರಿಗೆ ಸ್ನೇಹಿತ ಪ್ರವೀಣ್‌ ಜತೆ ಯಲ್ಲಿ ಕಾರಿನಲ್ಲಿ ನಯಂಪಳ್ಳಿ 4ನೇ ಅಡ್ಡರಸ್ತೆ ತಲುಪುತ್ತಿದ್ದಾಗ ಸತೀಶ್‌ ರಾವ್‌, ಯೋಗೀಶ್‌ ಆಚಾರ್ಯ, ಮಾಲತಿ, ಶ್ರೇಯಾ, ಸುರೇಂದ್ರ ಮತ್ತು ಮಹೇಶ್‌ ಅವರು ಸಂಚ ರಿ ಸು ತ್ತಿದ್ದ ಕಾರನ್ನು ನನ್ನ ಕಾರಿಗೆ ಅಡ್ಡವಿಟ್ಟರು. ಬಳಿ ಕ ಕಾರಿನ ಬಾಗಿಲನ್ನು ಎಳೆದು ನನಗೆ ಹಾಗೂ ಪ್ರವೀಣ್‌ಗೆ ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದ್ದಾರೆ.ಕಾರಿಗೂ ಹಾನಿ ಮಾಡಿದ್ದಾರೆ’ ಎಂದು ಉಡುಪಿ ನಗರ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಬಿಜೂರು: ಅಣ್ಣನನ್ನು ಕೊಂದ ತಮ್ಮ
ಉಪ್ಪುಂದ: ಬಿಜೂರು ಗ್ರಾಮದ ಬವಳಾಡಿಯ ಕುಪ್ಪ ಕೊರಗ ಅವರ ಮಗ ನಾಗರಾಜ (47)ನನ್ನು ಸಹೋದರ ಸಂತೋಷ (20) ಕೊಂದಿ ದ್ದಾನೆಂದು ಆರೋಪಿಸಲಾಗಿದೆ.

ಘಟನೆ ವಿವರ: ಕುಪ್ಪ ಕೊರಗ ಹಾಗೂ ಶುಕ್ರು ದಂಪತಿಗೆ 8 ಮಂದಿ ಪುತ್ರಿಯರು ಹಾಗೂ ನಾಲ್ವರು ಪುತ್ರರಿದ್ದು, ಒಂದೇ ಮನೆಯಲ್ಲಿ ವಾಸವಿದ್ದಾರೆ.

ಸಹೋದರರಾದ ನಾಗರಾಜ ಹಾಗೂ ಸಂತೋಷ ರಾತ್ರಿ 9.30ಕ್ಕೆ ವಿಪರೀತ ಮದ್ಯಸೇವಿಸಿ ಮನೆಗೆ ಬಂದಿದ್ದರು. ಬಳಿಕ ನಿಕ್ಕರ್‌ ವಿಚಾರದಲ್ಲಿ ಜಗಳವಾಗಿ ಸಂತೋಷನು ತಂದೆಯ ಊರುಗೋಲಿನಿಂದ ನಾಗರಾಜನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ.ಪರಿಣಾಮ ತಡರಾತ್ರಿ ಮೃತಪಟ್ಟಿದ್ದಾನೆ. ಸಹೋದರರ ಜಗಳ ಬಿಡಿಸಲು ಬಂದಿದ್ದ ಭಾವನೂ ಗಾಯಗೊಂಡು ಬೈಂದೂರು ಸರಕಾರಿ ಆಸ್ಪತ್ರೆಯಲ್ಲಿ ದಾಖ ಲಾಗಿದ್ದಾನೆ.

ಬೆಳಗ್ಗೆ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ನಡೆಸುತ್ತಿದ್ದಂತೆ ಸ್ಥಳೀಯರು ನೀಡಿದ್ದ ಮಾಹಿತಿ ಆಧಾರದಲ್ಲಿ ಬೈಂದೂರು ಸಿಐ ಪರಮೇಶ್ವರ ಗುನಗ,ಠಾಣಾಧಿಕಾರಿ ತಿಮ್ಮೇಶ್‌ ಬಿ. ಎನ್‌. ಮತ್ತು ಸಿಬಂದಿ ಸ್ಥಳಕ್ಕೆ ಆಗಮಿಸಿದರು. ಪೋಲಿಸರು ಬರುತ್ತಿದ್ದಂತೆ ಸಂತೋಷ್‌ ಪರಾರಿಯಾಗಿದ್ದಾನೆ.

ಎಸ್ಪಿ ನಿಶಾ ಜೇಮ್ಸ್‌ ಕೂಡ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಬೈಂದೂರು ಠಾಣೆಯಲ್ಲಿ ದೂರು ದಾಖಲಾಗಿದ್ದು, ಬೈಂದೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶವದ ಮರಣೋತ್ತರ ಪರೀಕ್ಷೆ ಮಾಡಿದ್ದು, ತನಿಖೆ ನಡೆಯುತ್ತಿದೆ.

ಆರೋಪಿ ಸಂತೋಷ್‌ ಸ್ತ್ರೀಲೋ ಲನಾಗಿದ್ದು, ಆತನ ಮೇಲೆ ಈ ಹಿಂದೆಯೂ ಅನೇಕ ದೂರುಗಳು ಕೇಳಿಬಂದಿದ್ದವು.

ಸತ್ತ ಕೋಳಿ ಎಸೆದವರ ವಿರುದ್ಧ ದೂರು
ನರಿಮೊಗರು: ಮುಂಡೂರು ಗ್ರಾ.ಪಂ.ವ್ಯಾಪ್ತಿಯ ಸರ್ವೆ ಗ್ರಾಮದ ಕಲ್ಲಗುಡ್ಡೆಯಲ್ಲಿ ಸುಮಾರು 500ಕ್ಕೂ ಮಿಕ್ಕಿ ಸತ್ತ ಕೋಳಿಗಳನ್ನು ರಾಶಿ ಹಾಕಿರುವುದನ್ನು ಶುಕ್ರವಾರ ಪತ್ತೆ ಹಚ್ಚಿದ ಸ್ಥಳೀಯರು ಮುಂಡೂರು ಗ್ರಾ.ಪಂ.ಗೆ ದೂರು ನೀಡಿದ್ದಾರೆ. ಬಳಿಕ ಗ್ರಾ.ಪಂ.ನಿಂದ ಪೊಲೀಸರಿಗೆ ದೂರು ನೀಡಲಾಗಿದೆ.

ಮುಂಡೂರು ಗ್ರಾಮದ ಕಡ್ಯ ನಿವಾಸಿ ಕುಶಾಲಪ್ಪ ಗೌಡ ಹಾಗೂ ಇತರ ಮೂವರು ಸತ್ತ ಕೋಳಿಗಳನ್ನು ರಾಶಿ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

ಗ್ರಾ. ಪಂ.ಅಭಿವೃದ್ಧಿ ಅಧಿಕಾರಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಸಂಪ್ಯ ಗ್ರಾಮಾಂತರ ಎಸ್‌ಐ ಶಕ್ತಿವೇಲು ಮತ್ತು ಸಿಬಂದಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಹೆರ್ಗ: ಅಪರಿಚಿತ ಯುವಕ ಆತ್ಮಹತ್ಯೆ
ಉಡುಪಿ: ಹೆರ್ಗ ಗ್ರಾಮದ ಮಾಣಿಬೆಟ್ಟಿನ ಹಾಡಿಯಲ್ಲಿ ಸುಮಾರು 25-30 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾವು ಸಂಭವಿಸಿ ಕೆಲವು ದಿನಗಳು ಕಳೆದಿರಬಹುದು ಎಂದು ಅಂದಾಜಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next