ಕುಂದಾಪುರ: ಬಸ್ಸಿನಿಂದ 18 ಲಕ್ಷ ರೂ.ಗಳ ಚಿನ್ನಾಭರಣ ಎಗರಿಸಿದ್ದ ನಾಲ್ವರು ಆರೋಪಿಗಳಿಗೆ ಬೈಂದೂರು ನ್ಯಾಯಾಲಯ ಶುಕ್ರವಾರ ಜಾಮೀನು ನಿರಾಕರಿಸಿದೆ.
ಶಿರೂರಿನಲ್ಲಿ ಮಹಾರಾಷ್ಟ್ರದ ಈಶ್ವರ್ ದಲಿಚಂದ್ ಪೊರ್ವಾಲ್ ಅವರು ಮುಂಬಯಿಯ ವಿವಿಧ ಚಿನ್ನಾಭರಣ ಅಂಗಡಿಗಳಿಂದ ತಂದಿದ್ದ 18 ಲಕ್ಷ ರೂ. ಮೌಲ್ಯದ 466.96 ಗ್ರಾಂ ತೂಕದ ಚಿನ್ನ ಕಳ್ಳತನವಾಗಿತ್ತು.
ಈ ಪ್ರಕರಣದಲ್ಲಿ ಮಧ್ಯಪ್ರದೇಶದ ಧರ್ಮಪುರಿಯ ಆಲಿಖಾನ್ (31), ಅಮ್ಜದ್ ಖಾನ್ (33), ಮನವೂರಿನ ಇಕ್ರಾರ್ ಖಾನ್ (30), ಗೋಪಾಲ್ ಅಮ್ಲಾವಾರ್ (35) ನನ್ನು ಮಹಾರಾಷ್ಟ್ರದ ಸೊನ್‌ಗಿರ್ ಟೋಲ್‌ಗೇಟ್‌ನಲ್ಲಿ ಪೊಲೀಸರು ಬಂಧಿಸಿದ್ದರು. ಆರೋಪಿಗಳಿಂದ ಒಟ್ಟು ಮೌಲ್ಯ 18 ಲಕ್ಷ ರೂ.ಗಳ 457 ಗ್ರಾಂ ಚಿನ್ನ, ಬ್ರಿàಜಾ ಕಾರು, 2 ಮೊಬೈಲ್ ಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತು.
ನ್ಯಾ.ಬಂಧನದಲ್ಲಿದ್ದ ಆರೋಪಿಗಳು ಬೈಂದೂರು ಸಂಚಾರಿ ನ್ಯಾಯಾಲಯ ಪೀಠದಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಮಧ್ಯಪ್ರದೇಶದವರಾದ ಆರೋಪಿಗಳು ವಿಚಾರಣೆಗೆ ಹಾಜ ರಾಗದೇ ತಲೆಮರೆಸಿಕೊಳ್ಳುವ ಸಾಧ್ಯತೆ ಇದೆ.
ದೂರುದಾರರಿಗೆ ಬೆದರಿಕೆ ಹಾಕುವ ಸಾಧ್ಯತೆಯಿದೆ. ಸೊತ್ತುಗಳನ್ನು ಸ್ವಾಧೀನಪಡಿಸಿದ್ದು, ಪ್ರಾಥಮಿಕ ಸಾಕ್ಷ್ಯಾಧಾರ ಗಳಿಂದ ಆರೋಪ ಸಾಬೀತು ಆಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಜಾಮೀನು ನೀಡಬಾರದು ಎಂದು ಸಹಾಯಕ ಸರಕಾರಿ ಅಭಿಯೋಜಕಿ ವರ್ಷಶ್ರೀ ಮಾಡಿದ ವಾದ ಪುರಸ್ಕರಿಸಿದ ನ್ಯಾಯಾಧೀಶ ಧನೇಶ ಮುಗಳಿ ಜಾಮೀನು ತಿರಸ್ಕರಿಸಿದ್ದಾರೆ.