ಉಪ್ಪಿನಂಗಡಿ: ಎರಡು ಕಾರು ಹಾಗೂ ಟಾಟಾ ಏಸ್ ವಾಹನ ಬುಧ ವಾರ ಉದನೆ ಬಳಿ ಢಿಕ್ಕಿಯಾಗಿ ನಾಲ್ವರು ಗಾಯಗೊಂಡಿದ್ದಾರೆ.
Advertisement
ಸುನೀಲ್, ಮಲ್ಲೇಶ್, ಪ್ರವೀಣ್ ಮತ್ತು ಸಂತೋಷ್ ಗಾಯಾಳು ಗಳು. ಇವರಿಗೆ ನೆಲ್ಯಾಡಿಯ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೋಟ:ಇಲ್ಲಿನ ಮೂರುಕೈ ಬಳಿ ಕಟ್ಟಡದಿಂದ ಬಿದ್ದು ಗಾಯಗೊಂಡಿದ್ದ ಹಾವೇರಿ ಜಿಲ್ಲೆ ಶಿಗ್ಗಾಂವ್ ತಾಲೂಕಿನ ಕುಮಾರ ಅಕ್ಕಸಾಲಿ(32) ಮಂಗಳವಾರ ಮೃತಪಟ್ಟಿದ್ದಾರೆ.
ಅವರು ಎ.27ರಂದು ಕಟ್ಟಡದ ಎರಡನೇ ಮಹಡಿಗೆ ತೆರಳಲು ಮೆಟ್ಟಿಲು ಹತ್ತುತ್ತಿದ್ದಾಗ ಕಾಲು ಜಾರಿ ಬಿದ್ದಿದ್ದರು. ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Related Articles
ವಿಟ್ಲ: ಕೊಳ್ನಾಡು ಕುಡ್ತಮುಗೇರು ಮಂಕುಡೆ ನಿವಾಸಿ ಕರಿಯಪ್ಪ (51) ಅವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವ ರು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement
ರೈಲು ಢಿಕ್ಕಿ ಹೊಡೆದು ವೃದ್ಧ ಸಾವುಕುಂದಾಪುರ: ಕನ್ಯಾನ ಬಂಡಾಡಿ ಸಮೀಪ ರೈಲು ಢಿಕ್ಕಿ ಹೊಡೆದು ಕಿವುಡ ಹಾಗೂ ಮೂಕ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಬಂಡಾಡಿ ಸಹದೇವಿ ಮನೆಯ ನಾರಾಯಣ ಶೆಟ್ಟಿ (75) ಮೃತಪಟ್ಟ ವರು.ಬುಧವಾರ ಬೆಳಗ್ಗೆ 6.45ರ ಸುಮಾರಿಗೆ ಇವರು ಡಿಪೋಗೆ ಹಾಲು ಕೊಡಲು ಹೋಗುತ್ತಿದ್ದಾಗ ಅವ ಘಡ ಸಂಭವಿಸಿದೆ. ಕೃಷಿಕರಾಗಿದ್ದ ಅವರು ಪತ್ನಿಯನ್ನು ಅಗಲಿದ್ದಾರೆ. ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವ್ಯಕ್ತಿ ಸತ್ತು ಬಿದ್ದಿದ್ದರೂ ಹಂದಿ ದೇಹವನ್ನು ಕೊಂಡೊಯ್ದರು!
ನಾರಾಯಣ ಶೆಟ್ಟಿ ಮೃತಪಟ್ಟ ಸ್ಥಳದ ಸಮೀಪವೇ ಹಂದಿಯೊಂದು ಸತ್ತು ಬಿದ್ದಿತ್ತು.ನಾರಾಯಣ ಶೆಟ್ಟಿ ಮೃತ ಪಟ್ಟು ಬಿದ್ದಿದ್ದರೂ ಜನರು ಮಾಂಸಕ್ಕಾಗಿ ಹಂದಿಯ ದೇಹ ವನ್ನು ಕೊಂಡೊಯ್ದಿದ್ದಾರೆ ಎನ್ನುವ ಸುದ್ದಿ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಕಂಡೂÉರು ಎಸ್‌ಐ ಶ್ರೀಧರ್ ನಾಯಕ್ ಅವರಲ್ಲಿ ವಿಚಾರಿ ಸಿದಾಗ,ಇಂಥದ್ದೊಂದು ಸುದ್ದಿ ವ್ಯಾಟ್ಸಾಪ್‌ಗ್ಳಲ್ಲಿ ಹರಿದಾಡುತ್ತಿದೆ.ಅದರ ಬಗ್ಗೆ ಇನ್ನೂ ಖಚಿತವಾಗಿಲ್ಲ. ನಾವು ಸ್ಥಳಕ್ಕೆ ಹೋದಾಗ ಅಲ್ಲಿ ಜನ ಸೇರಿದ್ದರು. ಬಹುಷ ಅವರು ಮೃತದೇಹವನ್ನು ಪೊಲೀಸರು ಬಂದ ಬಳಿಕವೇ ತೆಗೆದರೆ ಆಯಿತು ಎಂದು ಕಾಯುತ್ತಿದ್ದಿರಬಹುದು ಎಂದಿದ್ದಾರೆ. ನಮ್ಮ ಸಿಬಂದಿ ಅಲ್ಲಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಲ್ಲಿ ಹಂದಿ ಸತ್ತಿರುವ ಬಗ್ಗೆ ಯಾವುದೇ ಕುರುಹು ಸಿಕ್ಕಿಲ್ಲ. ಮತ್ತಷ್ಟು ಮಾಹಿತಿ ಕಲೆ ಹಾಕುತ್ತಿದ್ದೇವೆ ಎಂದು ಕುಂದಾಪುರ ವಲಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರ್ ಕುಲಾಲ್ ಅವರು “ಉದಯವಾಣಿ’ಗೆ ತಿಳಿಸಿದ್ದಾರೆ. ಮೂಡುಬೆಳ್ಳೆ: ವ್ಯಕ್ತಿ ನಾಪತ್ತೆ
ಶಿರ್ವ: ಬೆಳ್ಳೆ ಗ್ರಾಮದ ಮೂಡುಬೆಳ್ಳೆ ಪೊಯ್ಯದಪಾಡಿ ನಿವಾಸಿ ಅಲೋ#ನ್ಸ್ ಆಳ್ವ (52) ಅವರು ಎ. 28ರ ಸಂಜೆ 5 ಗಂಟೆಗೆ ದ್ವಿಚಕ್ರ ವಾಹನದಲ್ಲಿ ತನ್ನ ಮನೆಯಿಂದ ಹೊರ ಹೋದವರು ನಾಪ ತ್ತೆಯಾಗಿದ್ದಾರೆ.ಅವರ ಪತ್ನಿ ನ್ಯಾನ್ಸಿ ಆಳ್ವ ದೂರಿನಂತೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನೇಣು ಬಿಗಿದು ಆತ್ಮಹತ್ಯೆ
ಉಪ್ಪಿನಂಗಡಿ: ಅಸ್ತಮಾದಿಂದ ಬಳಲುತ್ತಿದ್ದ ಕಿಟ್ಟಣ್ಣ ಪೂಜಾರಿ (62) ಅವರು ಬುಧವಾರ ಸಂಜೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಚಿಲಂಪಾಡಿ ಮುಚ್ಚಿಲ ಮನೆ ಸಮೀಪದ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು,ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರು ಪತ್ನಿ ಹಾಗೂ 2 ಪುತ್ರರನ್ನು ಅಗಲಿದ್ದಾರೆ. ಮಟ್ಕಾ: ಬಂಧನ
ಮಂಗಳೂರು: ಮೂಡುಶೆಡ್ಡೆಯ ಶಿವನಗರದಲ್ಲಿ ಮಟ್ಕಾ ಆಡುತ್ತಿದ್ದ ಸ್ಥಳೀಯ ನಿವಾಸಿ ದೀಪಕ್ (37)ನನ್ನು ಕಾವೂರು ಪೊಲೀಸರು ಬಂಧಿಸಿ 7,880 ರೂ.ಅನ್ನು ವಶ ಪಡಿಸಿಕೊಂಡಿದ್ದಾರೆ.ಬುಧವಾರ ಮಧ್ಯಾಹ್ನ ವೇಳೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.