Advertisement

ಬಾಲಕನ ಅಪಹರಣ: ನೇಪಾಲ ಮೂಲದ ಆರೋಪಿ ಸೆರೆ

12:40 AM Jun 09, 2022 | Team Udayavani |

ಬೆಂಗಳೂರು: ಹೊರ ಮಾವು ನಿವಾಸಿ, ಬಿಎಂಟಿಸಿ ಚಾಲಕ ಸುಭಾಷ್‌ ಅವರ ಪುತ್ರ ಮನದೀಪ್‌(11)ನನ್ನು ಅಪಹರಿಸಿ 50 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದ ಆರೋಪಿಯನ್ನು ಕೆಲವೇ ಗಂಟೆಗಳಲ್ಲಿ ಹೆಣ್ಣೂರು ಠಾಣೆ ಪೊಲೀಸರು ಬಂಧಿಸಿದ್ದು, ಬಾಲಕನನ್ನು ರಕ್ಷಿಸಲಾಗಿದೆ.

Advertisement

ನೇಪಾಲ ಮೂಲದ ಗೌರವ್‌ ಸಿಂಗ್‌ (50)  ಬಂಧಿತನಾಗಿದ್ದು,  ಪ್ರಕರಣದಲ್ಲಿ ಭಾಗಿಯಾಗಿರುವ ಈತನ ಅತ್ತಿಗೆ (ಸಹೋದರನ ಪತ್ನಿ) ದುರ್ಗಾ ಎಂಬಾಕೆಗಾಗಿ ಶೋಧ ನಡೆಯುತ್ತಿದೆ.  ಗೌರವ್‌ ಸಿಂಗ್‌ ಜಿಗಣಿಯಲ್ಲಿರುವ ಫಾರಂ ಹೌಸ್‌ನಲ್ಲಿ ಭದ್ರತಾ ಸಿಬಂದಿಯಾಗಿದ್ದು, ದುರ್ಗಾ ಖಾಸಗಿ ಕಂಪೆನಿಯೊಂದರ ಉದ್ಯೋಗಿಯಾಗಿದ್ದಳು. ಇವರು  20 ವರ್ಷಗಳಿಂದ ಬೆಂಗಳೂರಿನಲ್ಲಿಯೇ ವಾಸವಾಗಿದ್ದಾರೆ ಎಂದು ಪೊಲೀಸರು ಹೇಳಿದರು.

ಮನದೀಪ್‌ನನ್ನು ಮಂಗಳವಾರ ಸಂಜೆ 5.30ರ ಹೊತ್ತಿಗೆ ಉಪಾಯದಿಂದ ನೆರೆಮನೆಯ ದುರ್ಗಾ ಎಂಬಾಕೆ ಬಸ್‌ನಲ್ಲಿ ಕರೆತಂದು  ಗೌರವ್‌ ಸಿಂಗ್‌ಗೆ ಒಪ್ಪಿಸಿದ್ದಳು. ರಾತ್ರಿ 8.30ರ ಸುಮಾರಿಗೆ ಬಾಲಕನ ತಾಯಿಗೆ ದೂರವಾಣಿ ಕರೆ ಮಾಡಿ ಹಣಕ್ಕೆ ಬೇಡಿಕೆ ಇಡಲಾಗಿತ್ತು.

ಕಾರ್ಯಾಚರಣೆ
ಬಾಲಕನ ತಂದೆಯು ರಾತ್ರಿ ಹೆಣ್ಣೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಎಸಿಬಿ ನಿಂಗಪ್ಪ ಸಕ್ರಿ ನೇತೃತ್ವದಲ್ಲಿ ಎರಡು ತಂಡ ರಚಿಸಲಾಗಿತ್ತು. ಒಂದು ತಂಡ ಸ್ಥಳೀಯ ಸಿಸಿ ಕೆಮರಾ ಪರಿಶೀಲಿಸುತ್ತಿದ್ದರೆ, ಹೆಣ್ಣೂರು ಠಾಣೆ ಪಿಎಸ್‌ಐ ಲಿಂಗರಾಜು ತಂಡ ಆರೋಪಿಯ ಮೊಬೈಲ್‌ ಲೊಕೇಷನ್‌ ಆಧರಿಸಿ ಫಾರ್ಮ್ ಹೌಸ್‌ನ ಸುಮಾರು 8 ಅಡಿ ಎತ್ತರದ ಕಾಂಪೌಂಡ್‌ ಗೋಡೆಯನ್ನು  ಹಾರಿ ಆರೋಪಿಯನ್ನು ಬಂಧಿಸಿ ಬಾಲಕನನ್ನು ರಕ್ಷಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next