ಮಂಗಳೂರು: ದುಬಾಯಿಯಿಂದ ಮಂಗಳವಾರ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಇಬ್ಬರು ಪ್ರಯಾಣಿಕರಿಂದ ಕಸ್ಟಮ್ಸ್ ಅಧಿಕಾರಿಗಳು 14.09 ಲ.ರೂ. ಮೌಲ್ಯದ 447.61 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
Advertisement
ಓರ್ವ ಪ್ರಯಾಣಿಕ 395.26 ಗ್ರಾಂ ಚಿನ್ನವನ್ನು ಪೇಸ್ಟ್ ರೂಪದಲ್ಲಿ ಗುದ ದ್ವಾರದಲ್ಲಿ ಅಡಗಿಸಿಟ್ಟು ತಂದಿದ್ದು, ಇದರ ಮೌಲ್ಯ 12.84 ಲಕ್ಷ ರೂ. ಆಗಿರುತ್ತದೆ.
ಸುಬ್ರಹ್ಮಣ್ಯ: ಬೆಂಗಳೂರು- ತಮಿಳುನಾಡು ಹೆದ್ದಾರಿ ನಡುವಿನ ಕೃಷ್ಣಗಿರಿಯಲ್ಲಿ ಬುಧವಾರ ಮುಂಜಾನೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವೋಲ್ವೊ ಬಸ್ ಹಾಗೂ ಲಾರಿ ಪರಸ್ಪರ ಢಿಕ್ಕಿ ಹೊಡೆದು ಬಸ್ ಚಾಲಕ,ಮಂಗಳೂರಿನಲ್ಲಿ ವಾಸವಿದ್ದ ಸುಬ್ರಹ್ಮಣ್ಯ ಮೂಲದ ಪದೇಲ ರಾಜಣ್ಣ ಯಾನೆ ತಿರುಮಲೇ ಶ್ವರ (52) ಅವರು ಮೃತಪಟ್ಟಿದ್ದಾರೆ.
Related Articles
ಇದು ನಸುಕಿನ ಜಾವ ನಾಲ್ಕು ಗಂಟೆ ಸುಮಾರಿಗೆ ನಿಂತಿದ್ದ ಲಾರಿಗೆ ಢಿಕ್ಕಿ ಹೊಡೆ ಯಿತು. ಪರಿಣಾಮ ರಾಜಣ್ಣರ ತಲೆ ಹಾಗೂ ದೇಹಕ್ಕೆ ಗಂಭೀರ ಗಾಯವಾಗಿ ಸ್ಥಳದಲ್ಲೇ ಸಾವನ್ನಪ್ಪಿದರು. ಬಸ್ಸಿನಲ್ಲಿ ಪ್ರಯಾಣಿಸುತಿದ್ದ ಇತರ ಕೆಲವರಿಗೂ ತೀವ್ರ ತರಹದ ಗಾಯಗಳಾಗಿವೆ.
Advertisement
ಮೃತರು ಪತ್ನಿ, ಪುತ್ರಿ ಹಾಗೂ ಪುತ್ರನನ್ನು ಅಗಲಿದ್ದಾರೆ. ಸುಬ್ರಹ್ಮಣ್ಯ ಸಮೀಪದ ಮನೆಯಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು.
ಸಜೀಪಪಡು ಮಿತ್ತಪಡು³: ದನ ಕಳವುಬಂಟ್ವಾಳ: ಸಜೀಪಪಡು ಗ್ರಾಮದ ಮಿತ್ತಪಡು³ ನಿವಾಸಿ ಧರ್ಣಪ್ಪ ಸಪಲ್ಯರ ಹಟ್ಟಿಯಿಂದ ಎ. 16ರಂದು ರಾತ್ರಿ ಎರಡು ದನಗಳನ್ನು ಕಳವು ಮಾಡಲಾಗಿದೆ. ಅದರಲ್ಲಿ ಒಂದು ದನ ತುಂಬು ಗರ್ಭಿಣಿಯಾಗಿದ್ದು, ಮನೆ ಮಂದಿ ತೀವ್ರ ದುಃಖೀತರಾಗಿದ್ದಾರೆ.ಎರಡು ವರ್ಷಗಳ ಹಿಂದೆ ನೆರೆ ಮನೆಯ ಸುಬ್ರಹ್ಮಣ್ಯರ ಹಟ್ಟಿಯಿಂದ ಒಂದು ದನ ಕಳವು ಮಾಡಲಾಗಿತ್ತು. ಒಂದು ತಿಂಗಳ ಹಿಂದೆ ಮನೆಯ ನಾಯಿಗೆ ವಿಷ ಹಾಕಿ ಕೊಲ್ಲಲಾಗಿತ್ತು.ವಾರದ ಹಿಂದೆ ಇಬ್ಬರು ಬಂದು “ದನ ಮಾರಾಟ ಮಾಡುತ್ತೀರಾ’ ಎಂದು ಕೇಳಿದ್ದರು. ಇಲ್ಲ ಎಂದಾಗ ವಾಪಸ್ ಹೋಗಿದ್ದರು ಎಂದು ಧರ್ಣಪ್ಪರ ಮನೆಮಂದಿ ತಿಳಿಸಿದ್ದಾರೆ.ಬಂಟ್ವಾಳ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ. ಉದ್ಯಾವರ: ಬಾಲಕಿ ಮೇಲೆ ಅತ್ಯಾಚಾರ; ಆರೋಪಿ ಬಂಧನ
ಕಾಪು: ಫಿಶ್ ಮಿಲ್‌ನಲ್ಲಿ ಕೆಲಸಕ್ಕಿದ್ದ ಛತ್ತೀಸ್‌ಘಡ ಮೂಲದ ವಿವಾಹಿತನೋರ್ವ ತನ್ನದೇ ಊರಿನ ಬಾಲಕಿಯೊಬ್ಬಳ ಮೇಲೆ ಅತ್ಯಾ ಚಾರ ನಡೆಸಿ ಗರ್ಭಿಣಿಯನ್ನಾಗಿಸಿದ ಘಟನೆ ಉದ್ಯಾವರದಲ್ಲಿ ನಡೆದಿದ್ದು,ಆರೋಪಿ ಸಜುನ್ ರಾಮ್ ಚೌಹಾಣ್(30)ನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ತನ್ನ ಪತ್ನಿಯ ಬಾಣಂತನದ ಸಂದರ್ಭ ತಾಯಿ ಮತ್ತು ಮಗುವನ್ನು ನೋಡಿಕೊಳ್ಳಲು ಕಳೆದ ವರ್ಷ ಆ. 18ರಂದು 16 ವರ್ಷದ ಬಾಲ ಕಿಯನ್ನು ಛತ್ತೀ ಸ್‌ಘಡದಿಂದ ಉದ್ಯಾವರಕ್ಕೆ ಕರೆ ತಂದಿದ್ದ. ಆಕೆ ಯನ್ನು ತನ್ನ ಮನೆ ಯಲ್ಲೇ ಉಳಿ ಸಿ ಕೊಂಡಿದ್ದ ಆರೋಪಿಯು ಬಲವಂತದಿಂದ ದೈಹಿಕ ಸಂಪರ್ಕ ನಡೆಸಿದ್ದ.ಬಳಿಕ ಬಾಲಕಿ ಅಸ್ವಸ್ಥಳಾದಾಗ ವೈದ್ಯರ ಬಳಿಗೆ ಕರೆದೊಯ್ದಿದ್ದು, ಆಗ ಆಕೆ ಗರ್ಭಿಣಿಯಾಗಿ ರುವುದು ತಿಳಿದುಬಂತು. ಬಳಿಕ ಬಾಲಕಿ ಪೊಲೀಸ್ ದೂರು ನೀಡಿದ್ದು,ಕಾಪು ಪೊಲೀ ಸರು ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿ ವಿರುದ್ಧ ಅತ್ಯಾಚಾರ ಸಹಿತ ಪೋಕೊÕ ಕಾಯ್ದೆಯ ವಿವಿಧ ಪ್ರಕರಣದಡಿ ಕೇಸು ದಾಖಲಿಸಿಕೊಳ್ಳಲಾಗಿದೆ. ರಿಕ್ಷಾ – ಸ್ಕೂಟರ್ ಢಿಕ್ಕಿ: ವ್ಯಕ್ತಿ ಸಾವು; ಓರ್ವ ನಿಗೆ ಗಾಯ
ಹೊಸದುರ್ಗ: ಕಾಲಿಚ್ಚನಡ್ಕ ಸರಕಾರಿ ಶಾಲೆ ಪರಿಸರದಲ್ಲಿ ರಿಕ್ಷಾ ಹಾಗೂ ಸ್ಕೂಟರ್ ಢಿಕ್ಕಿ ಹೊಡೆದಿದೆ. ಪರಿ ಣಾಮ ರಿಕ್ಷಾ ಚಾಲಕ ನಂಬ್ಯಾರ್‌ಕೊಚ್ಚಿ ನಿವಾಸಿ ಅಚ್ಚುಮ್ಮಾಡತ್ತ್ ಮಹಮ್ಮದ್ (58) ಸಾವಿಗೀಡಾದರು. ಸ್ಕೂಟರ್‌ನಲ್ಲಿ ಪ್ರಯಾಣಿಸುತ್ತಿದ್ದ ಕಾಯಕುನ್ನು ನಿವಾಸಿ ಅಬ್ದುಲ್ ರಹ್ಮಾನ್ ಗಾಯಗೊಂಡಿದ್ದು, ಅವ ರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ನಕಲಿ ನಂಬರ್ ಪ್ಲೇಟ್ ಬಳಸಿ ವಂಚನೆ: ಲಾರಿ ವಶ
ಹೊಸಂಗಡಿ: ಪಂಜಾಬ್‌ನಲ್ಲಿ ನೋಂದಾಯಿಸಿದ ದಾಖಲೆಗಳಿಲ್ಲದ ಟ್ರೈಲರ್ ಹಾಗೂ ನಾಗಾಲ್ಯಾಂಡ್‌ನಲ್ಲಿ ನೋಂದಾ ಯಿಸಿದ ಇನ್ನೊಂದು ವಾಹನದ ನಂಬರನ್ನು ಬಳಸಿ ರಾಜ್ಯಕ್ಕೆ ತೆರಿಗೆ ವಂಚಿಸಿ ಸರಕು ಸಾಗಿಸಲೆತ್ನಿಸುತ್ತಿ ದ್ದು ದನ್ನು ಮಂಜೇಶ್ವರ ಆರ್‌ಟಿಒ ಚೆಕ್‌ಪೋಸ್ಟ್‌ನಲ್ಲಿ ಪತ್ತೆ ಹಚ್ಚಿ ವಶಪಡಿಸಲಾಗಿದೆ. ಕಳೆದ ವಾರವೂ ಇದೇ ರೀತಿ ವಾಹನವನ್ನು ವಶಪಡಿಸಲಾಗಿತ್ತು.ತನಿಖೆ ಮುಂದುವರಿದಿದೆ. ವಕ್ವಾಡಿ: ಮೈಕ್‌ನಿಂದ ಹಲ್ಲೆ; ದೂರು ದಾಖಲು
ಕುಂದಾಪುರ: ಮೈಕ್‌ನಿಂದ ಹಲ್ಲೆ ನಡೆಸಲಾ ಗಿದೆ ಎಂದು ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಬ್ದುಲ್ ಖಾದರ್ ವಕ್ವಾಡಿ ಅವರು ತಮ್ಮ ಮನೆ ಎದುರಿನ ರಸ್ತೆ ಬದಿಯಲ್ಲಿ ಒಂದು ಮೈಕ್ ಅನ್ನು ಹಿಡಿದುಕೊಂಡು ನಿಂತಿದ್ದಾಗ, ಆರೋಪಿ ಆನಂದ ಅವರು ಮೈಕ್ ನೀಡುವಂತೆ ಒತ್ತಾಯಿಸಿದ್ದ. ಕೊಡದಿದ್ದಾಗ ಬೈದು ಮೈಕ್ ಕಿತ್ತುಕೊಂಡು ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಹಂಗಳೂರು: ಬಸ್ – ಬೈಕ್ ಢಿಕ್ಕಿ
ಕುಂದಾಪುರ: ಹಂಗಳೂರು ಗ್ರಾಮದ ಯೂನಿಟಿ ಹಾಲ್‌ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್ ಮತ್ತು ಬೈಕ್ ಢಿಕ್ಕಿಯಾಗಿದೆ. ನವಾಜ್ ಶರೀಫ್ ಅವರು ಬಸ್ಸನ್ನು ಕುಂದಾಪುರ ಕಡೆಯಿಂದ ಕೋಟೇಶ್ವರ ಕಡೆಗೆ ಚಲಾಯಿಸುತ್ತಾ ಕರುಣಾಕರ ಪೂಜಾರಿ ಅವರ ಬೈಕನ್ನು ಓವರ್‌ಟೇಕ್ ಮಾಡಿದರು. ಮುಂದೆ ಹೋಗಿ ಏಕಾಏಕಿ ಯಾವುದೇ ಸೂಚನೆ ನೀಡದೆ ನಿಲ್ಲಿಸಿದ ಪರಿಣಾಮ ಬೈಕ್ ಬಸ್ಸಿನ ಹಿಂಬದಿಗೆ ಢಿಕ್ಕಿ ಹೊಡೆ ದಿದೆ.ಪರಿಣಾಮ ಕರುಣಾಕರ ಪೂಜಾರಿ ಗಾಯ ಗೊಂಡಿದ್ದು,ಕೋಟೇಶ್ವರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕುಂದಾಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೈಕಿಗೆ ಬಸ್ ಢಿಕ್ಕಿ
ಶಿರ್ವ: ಶಿರ್ವ – ಬೆಳ್ಮಣ್ ರಸ್ತೆಯ ಪಿಲಾರು ಗುಂಡುಪಾದೆ ಸಾಸ್ತಾವು ಮಹಾಲಿಂಗೇಶ್ವರ ದೇವ ಸ್ಥಾನದ ಗೋಪುರದ ಬಳಿ ಎ.16ರ ಸಂಜೆ ಬೈಕಿಗೆ ಬಸ್ಸು ಢಿಕ್ಕಿ ಹೊಡೆದು ಸವಾರ ಶ್ರೀಕಾಂತ ಆಚಾರ್ಯ (23) ಅವರು ಗಾಯಗೊಂಡಿದ್ದಾರೆ. ಅವರಿಗೆ ಶಿರ್ವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಉಡುಪಿಯ ಆಸ್ಪತ್ರೆಗೆ ದಾಖಲಿಸಲಾ ಗಿದೆ. ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೈಕ್ – ಟಾಟಾ ಏಸ್ ಢಿಕ್ಕಿ
ಸಿದ್ದಾಪುರ: ಆಜ್ರಿ ಗ್ರಾಮದ ಶನೀಶ್ವರ ದೇವಸ್ಥಾನ ಕ್ರಾಸ್ ಬಳಿ ಬೈಕ್ ಹಾಗೂ ಟಾಟಾ ಏಸ್ ವಾಹನ ಢಿಕ್ಕಿಯಾಗಿದೆ. ಶಿವರಾಮ ಆಚಾರ್ಯ ಅವರು ವಾಸುದೇವ ಆಚಾರ್ಯ ಅವರೊಂದಿಗೆ ಆಜ್ರಿ ಕಡೆಗೆ ಹೋಗುತ್ತಿದ್ದಾಗ ಸಿದ್ದಾಪುರ ಕಡೆಯಿಂದ ಬಂದ ಟಾಟಾ ಏಸ್ ಹಿಂದಿನಿಂದ ಢಿಕ್ಕಿ ಹೊಡೆದಿದೆ. ಪರಿಣಾಮ ಶಿವರಾಮ ಆಚಾರ್ಯ ಹಾಗೂ ವಾಸುದೇವ ಆಚಾರ್ಯ ಅವರು ಗಾಯಗೊಂಡಿದ್ದಾರೆ. ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಕೂಟರ್ ಸ್ಕಿಡ್: ವಿದ್ಯಾರ್ಥಿನಿ ಸಾವು
ಎಡಪದವು: ಸಾಮಗ್ರಿ ತರಲೆಂದು ತೆರಳಿದ್ದ ವಿದ್ಯಾರ್ಥಿನಿಯೋರ್ವಳು ಸ್ಕೂಟರ್ ಸ್ಕಿಡ್ ಆಗಿ ಮೃತಪಟ್ಟ ಘಟನೆ ಗಂಜಿಮಠ ಸಮೀಪದ ಕುಕ್ಕಟ್ಟೆ ತಾರೆಮಾರ್ ಬಳಿ ಬುಧವಾರ ಮಧ್ಯಾಹ್ನ ಸಂಭವಿಸಿದೆ. ಮೊಗರುಗುತ್ತು ಹೊಸಮನೆ ಸೀತಾರಾಮ ಶೆಟ್ಟಿ – ಯಶೋದಾ ದಂಪತಿಯ ಪುತ್ರಿ,ಗುರುಪುರ ಕೈಕಂಬದ ಪೊಂಪೈ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿನಿ ಸುಷ್ಮಾ ಶೆಟ್ಟಿ (15) ಮೃತಪಟ್ಟವರು. ಅವರು ಮನೆಗೆ ಸಾಮಗ್ರಿ ತರಲೆಂದು ಸಮೀಪದ ತಾರೆಮಾರ್‌ನ ಅಂಗಡಿಗೆ ಸ್ಕೂಟರಿನಲ್ಲಿ ತೆರಳಿದ್ದಳು. ಈರುಳ್ಳಿ ಹಾಗೂ ಐಸ್‌ಕ್ರೀಂ ಖರೀದಿಸಿ ಮನೆಗೆ ಹಿಂದಿರುಗುತ್ತಿ ದ್ದಾಗ ಸ್ಕೂಟರ್ ಸ್ಕಿಡ್ ಆಗಿ ಪಕ್ಕದ ತೋಡಿಗೆ ಬಿದ್ದಿದ್ದರು. ಈ ವೇಳೆ ಸ್ಕೂಟರ್ ನೇರವಾಗಿ ಆಕೆಯ ತಲೆಗೆ ಬಿದ್ದ ಪರಿಣಾಮ ಸ್ಥಳದಲ್ಲೇ ಮೃತ ಪಟ್ಟಿದ್ದಾರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದ ಈಕೆಯ ಸಾವಿನಿಂದ ಇಡೀ ಗ್ರಾಮ ಶೋಕದಲ್ಲಿ ಮುಳು ಗಿದೆ. ಬಜಪೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಬಾಲಕನಿಗೆ ಲೈಂಗಿಕ ಕಿರುಕುಳ: ಗ್ರಾ.ಪಂ.ಸದಸ್ಯ ಬಂಧನ ಬೈಂದೂರು ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ಆರೋ ಪ ದಲ್ಲಿ ಕೆರ್ಗಾಲು ಗ್ರಾ.ಪಂ.ಸದಸ್ಯ ರಮೇಶ ಗಾಣಿಗ (38 )ನನ್ನು ಬಂಧಿಸಲಾಗಿದೆ. ಈತ 14 ವರ್ಷದ ಬಾಲಕನನ್ನು ನಿರ್ಮಾಣ ಹಂತದ ಕಟ್ಟಡದೊಳಗೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ್ದ. ಅಲ್ಲಿಂದ ತಪ್ಪಿಸಿಕೊಂಡು ಬಂದ ಬಾಲಕ ಮನೆಯವರಿಗೆ ವಿಷಯ ತಿಳಿಸಿದ್ದ.ಬಳಿಕ ಪಾಲಕರು ಹಾಗೂ ಸ್ಥಳೀಯರು ಈತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಈತ ಹಿಂದೆಯೂ ಈ ರೀತಿ ಬಾಲಕರಿಗೆ ತೊಂದರೆ ಕೊಡುತ್ತಿದ್ದ ಎಂದು ಸ್ಥಳೀಯರು ಹೇಳಿದ್ದಾರೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹಿಳೆ ಮೇಲೆ ಹಲ್ಲೆ ಯತ್ನ: ದೂರು
ಕೊಲ್ಲೂರು: ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ ದೈಹಿಕ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವುದಾಗಿ ಸುಪ್ರಿಯಾ (29) ಅವರು ಕೃಷ್ಣ ಎಂಬಾತನ ವಿರುದ್ಧ ಕೊಲ್ಲೂರು ಠಾಣೆಗೆ ದೂರು ನೀಡಿದ್ದಾರೆ. ಟೈಲ್ಸ್ ಅಂಗಡಿಯಲ್ಲಿ ದಾಂಧಲೆ
ಕುಂದಾಪುರ: ಕೋಟೇಶ್ವರದ ಕೆ.ಕೆ. ಮಾರ್ಬಲ್ಸ್‌ನ ಕೃಷ್ಣ ಕಾಂಚನ್ ಅವರಿಗೆ ಕೋಟೇಶ್ವರದ ನಾಗೇಶ್ ಕುಮಾರ್ ಅವ ರು ವ್ಯಾವಹಾರಿಕ ಕಾರಣದಿಂದ ದಾಂಧಲೆ ನಡೆಸಿದ್ದಾರೆ ಎಂದು ದೂರಲಾಗಿದೆ. ಕೆ.ಕೆ. ಮಾರ್ಬಲ್ಸ್ ಅಂಗಡಿ ಇರುವ ಜಾಗವು ನಾಗೇಶ್ ಕುಮಾರ್‌ಗೆ ಸೇರಿದ್ದು, ಅಂಗಡಿಕೋಣೆ ತೆರವು ಮಾಡಲು ಮತುಕತೆ ನಡೆದಿತ್ತು. ಆರೋಪಿ ನಾಗೇಶ್ ಕುಮಾರ್ ಅವರು ಸ್ಟೀಲ್‌ಪೈಪ್ ಹಿಡಿದುಕೊಂಡು ಏಕಾಏಕಿಯಾಗಿ ಬಂದು ಟೈಲ್ಸ್ ಗಳನ್ನು ಒಡೆದು 25,000 ರೂ. ನಷ್ಟಗೊಳಿಸಿ, ಬೆದರಿಕೆ ಹಾಕಿದ್ದಾರೆ ಎಂದು ಪ್ರಕರಣ ದಾಖಲಾಗಿದೆ. ಮರದಿಂದ ಬಿದ್ದು ಸಾವು
ಸೋಮವಾರಪೇಟೆ: ಆಕಸ್ಮಿಕವಾಗಿ ಮರದಿಂದ ಬಿದ್ದು ವ್ಯಕ್ತಿ ಓರ್ವರು ಮೃತಪಟ್ಟ ಘಟನೆ ಇಲ್ಲಿಗೆ ಸಮೀಪದ ನೇಗಳ್ಳೆ ಕರ್ಕಳ್ಳಿ ಗ್ರಾಮದಲ್ಲಿ ಸಂಭವಿಸಿದೆ. ನೇಗಳ್ಳೆ ಕರ್ಕಳ್ಳಿ ನಿವಾಸಿ ದಿ| ಕೆ.ಎಲ್. ಚಂಗಪ್ಪ ಹಾಗೂ ಲಲಿತಮ್ಮ ದಂಪತಿಯ ಪುತ್ರ ಕೆ.ಸಿ. ಸೂರ್ಯ ಕುಮಾರ್ ಮೃತಪಟ್ಟವರು. ಇವರು ಮಧ್ಯಾಹ್ನ 12 ಗಂಟೆ ಸುಮಾ ರಿಗೆ ತಮ್ಮ ಮನೆ ಸಮೀಪದ ತೋಟದಲ್ಲಿ ಮರ ಕಡಿಯುತ್ತಿದ್ದ ಸಂದರ್ಭ ದುರಂತ ಸಂಭವಿಸಿದೆ. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ ಅವರು ಸುಮಾರು 30 ವರ್ಷಗಳಿಂದ ಆರೆ ಸ್ಸೆಸ್ ಸ್ವಯಂಸೇವಕರಾಗಿದ್ದು, ಪ್ರಸ್ತುತ ವ್ಯವಸ್ಥಾ ಪ್ರಮುಖ್ ಆಗಿದ್ದರು. ನೇರುಗಳಲೆ ಗ್ರಾಮ ಪಂಚಾಯತ್ ಸದಸ್ಯರಾಗಿ, ಉಪಾಧ್ಯಕ್ಷರಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ.