ವಿಟ್ಲ: ಉರಿಮಜಲು ಜಂಕ್ಷನ್ನಲ್ಲಿ ಓರ್ವ ವ್ಯಕ್ತಿಗೆ ಎಲ್ಲರ ಕಣ್ಣಮುಂದೆಯೇ ಆರೋಪಿ ಚೂರಿ ಇರಿದ ಘಟನೆ ಭಾನುವಾರ (ಆ.18ರಂದು) ಸಂಭವಿಸಿದೆ.
ಎಂಎಂಎಸ್ ಆಟೋ ಚಾಲಕ ಶರೀಫ್ ಎಂಬವನಿಗೆ ಇಡ್ಕಿದು ಪಂಚಾಯತ್ನ ಎದುರಲ್ಲಿ ಕಾರ್ಯಾಡಿ ನಿವಾಸಿ ಆಪೀ ಎಂಬವನು ಚೂರಿ ಇರಿದಿದ್ದಾನೆ.
ಉರಿಮಜಲು ಮತ್ತು ಕಾರ್ಯಾಡಿ ಎಂಬಲ್ಲಿ ಗಾಂಜಾ ವ್ಯಸನಿಗಳ ಕಾಟ ಹೆಚ್ಚಾಗುತ್ತಿದೆ. ಇಂತಹ ಅಪರಾಧಿ ಚಟುವಟಿಕೆಗಳು ಹೆಚ್ಚಲು ಗಾಂಜಾ ಸೇವನೆಯೇ ಕಾರಣವೆನ್ನಲಾಗಿದೆ. ಪೊಲೀಸ್ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿ ಗಾಂಜಾ ವ್ಯಸನಿಗಳನ್ನು ಮಟ್ಟ ಹಾಕಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಗಂಭೀರ ಗಾಯಗೊಂಡ ಶರೀಫ್ನನ್ನು ಸ್ಥಳಿಯರು ಪುತ್ತೂರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿದ್ದಾರೆ.
ಸದ್ಯ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.