Advertisement

ತುರುವೇಕೆರೆ ಶಾಸಕ ಮಸಾಲೆ ಜಯರಾಮ್ ಪುತ್ರನ ಮೇಲೆ ದುಷ್ಕರ್ಮಿಗಳಿಂದ ದಾಳಿ, ಹತ್ಯೆ ಯತ್ನ

11:36 PM Apr 06, 2021 | Team Udayavani |

ತುಮಕೂರು: ತುರುವೇಕೆರೆ ಶಾಸಕ ಮಸಾಲೆ ಜಯರಾಮ್ ಅವರ ಮಗ ತೇಜ್ ಜಯರಾಮ್ ಅವರ ಮೇಲೆ ದುಷ್ಕರ್ಮಿಗಳು ತುಮಕೂರು ತಾಲ್ಲೂಕಿನ ಹೆಬ್ಬೂರು ಬಳಿ ದಾಳಿ ಮಾಡಿ ಹತ್ಯೆ ಮಾಡಲು ಯತ್ನ ನಡೆಸಿದ್ದಾರೆ .

Advertisement

ತೇಜ್ ಜಯರಾಮ ಮೇಲೆ ಹಲ್ಲೆ ಮಾಡುತ್ತಲೇ ಅಲ್ಲಿಂದ ತಪ್ಪಿಸಿಕೊಂಡು ಗುಬ್ಬಿ ತಾಲೂಕಿನ ನೆಟ್ಟಿಕೆರೆ ಕ್ರಾಸ್ ಬಳಿ ಶಾಸಕ ಮಸಾಲೆ ಜಯರಾಮ್ ಅವರ ಮಗ ತೇಜ್ ಬರುತ್ತಲೇ ಅಲ್ಲಿ ಕೆಲವರು ಅವರ ಕಪಾಳಕ್ಕೆ ಹೊಡೆದು ಮಚ್ಚಿ ನಿಂದ ಹಲ್ಲೆ ಮಾಡಲು ಮುಂದಾದಾಗ ದುಷ್ಕರ್ಮಿಗಳಿಂದ ತಪ್ಪಿಸಿಕೊಂಡು ಹೋಗಿದ್ದಾರೆ.

ವಿಷಯ ತಿಳಿದು ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಕೃತ್ಯಕ್ಕೆ ಬಳಸಿದ್ದ ಕಾರು, ಲಾಂಗ್, ಮಚ್ಚು, ಕಾರದಪುಡಿ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

ಹಲ್ಲೆ ನಡೆಸಿರುವವರು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಬೆಂಬಲಿಗರು ಎಂಬ ಆರೋಪ ಕೇಳಿಬಂದಿದೆ. ಹೆಚ್ಚಿನ ಮಾಹಿತಿ ಪೊಲೀಸರ ತನಿಖೆಯಿಂದ ಹೊರಬರಬೇಕಿದೆ.

ಇದನ್ನೂ ಓದಿ :ಮುತ್ತಪ್ಪ ರೈ ಆಸ್ತಿ ಪರಭಾರೆಗೆ ಸಿವಿಲ್‌ ಕೋರ್ಟ್‌ ಬ್ರೇಕ್‌

Advertisement

ಹಾಲಿ ಮತ್ತು ಮಾಜಿ ಶಾಸಕರ ನಡುವೆ ಮುಸುಕಿನ ಗುದ್ದಾಟ ವಿದ್ದು ಈ ಘಟನೆಯಿಂದ ಮುಂದೆ ಯಾವ ಹಂತಕ್ಕೆ ಹೋಗುತ್ತದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next