Advertisement

Panaji: ಗ್ರಾಹಕರಿಗೆ ಮಾದಕ ವಸ್ತು ಸರಬರಾಜು… ಗೋವಾದಲ್ಲಿ ಮುಂಬೈ ಮೂಲದ ವ್ಯಕ್ತಿಯ ಬಂಧನ

03:11 PM Jan 27, 2024 | Team Udayavani |

ಪಣಜಿ: ಮಾದಕ ವಸ್ತು ಕಳ್ಳಸಾಗಣೆ ವಿರುದ್ಧ ಸರ್ಕಾರ ಕ್ರಮಕ್ಕೆ ಮುಂದಾಗಿದೆ. ಈ ನಿಟ್ಟಿನಲ್ಲಿ ಮುಂಬೈ ಮೂಲದ ವ್ಯಕ್ತಿಯೊಬ್ಬ ಗೋವಾದ ಪರ್ರಾದಲ್ಲಿ ಡ್ರಗ್ಸ್ ಸರಬರಾಜು ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಕ್ರೈಂ ಬ್ರ್ಯಾಂಚ್ ಪೊಲೀಸರು ಬಲೆ ಬೀಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಲಭ್ಯ ಮಾಹಿತಿ ಪ್ರಕಾರ, ಪರ್ರಾದ ಹೋಲಿ ಕ್ರಾಸ್ ಬಳಿ ಸ್ಟಾನ್ಲಿ ಕರ್ವಾಲೋ (50, ಮುಂಬೈ) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಸ್ಟಾನ್ಲಿ ಪ್ರಸ್ತುತ ಗಿರಿಯಲ್ಲಿ ನೆಲೆಸಿದ್ದಾರೆ. ಪೊಲೀಸರಿಗೆ ಸಿಕ್ಕ ಮಾಹಿತಿ ಪ್ರಕಾರ ಈತ ಗ್ರಾಹಕರಿಗೆ ಡ್ರಗ್ಸ್ ಸರಬರಾಜು ಮಾಡಲು ಬಂದಿದ್ದ. ಈ ವೇಳೆ ಪೊಲೀಸರು ಆತನನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.

ಈತನಿಂದ 2.50 ಲಕ್ಷ ಮೌಲ್ಯದ ಆಂಫೆಟಮೈನ್, ಎಕ್ಸ್‍ಟಾಸಿ ಮಾತ್ರೆ ಸೇರಿದಂತೆ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈತ ಬೇರೆ ಯಾವುದೇ ಅಪರಾಧಗಳಲ್ಲಿ ಭಾಗಿಯಾಗಿದ್ದಾರೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Dandeli: 7 ತಿಂಗಳ ಹಿಂದೆ ಖರೀದಿಸಿದ್ದ ಎಲೆಕ್ಟ್ರಿಕ್ ಸ್ಕೂಟರಿಗೆ ಬೆಂಕಿ… ತಪ್ಪಿದ ಅನಾಹುತ

Advertisement

Udayavani is now on Telegram. Click here to join our channel and stay updated with the latest news.

Next