Advertisement

ಜಾಮೀನು ಪಡೆದ ಕೆಲವೇ ಗಂಟೆಗಳಲ್ಲಿ ದೀಪ್ ಸಿ‍ಧು ಮತ್ತೆ ಬಂಧನ

04:04 PM Apr 17, 2021 | Team Udayavani |

ನವದೆಹಲಿ :  ಇಂದು ಮಧ್ಯಾಹ್ನವಷ್ಟೆ ಜಾಮೀನು ಪಡೆದು ಹೊರ ಬಂದಿದ್ದ ‘ಗಣರಾಜ್ಯೋತ್ಸವ ಗಲಭೆ’ ಪ್ರಕರಣದ ಆರೋಪಿ ದೀಪ್ ಸಿ‍ಧು ಅವರನ್ನು ದೆಹಲಿಯ ಅಪರಾಧ ವಿಭಾಗದ ಪೊಲೀಸರು ಮತ್ತೆ ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

Advertisement

ಜನವರಿ 26ರಂದು ರೈತರ ಪ್ರತಿಭಟನಾ ಮೆರವಣೆಗೆ ವೇಳೆ ದೆಹಲಿಯ ಕೆಂಪು ಕೋಟೆಯಲ್ಲಿ ನಡೆದ ಗಲಭೆ-ಹಿಂಸಾಚಾರ ಪ್ರಕರಣದಡಿ ಬಂಧಿತರಾಗಿರುವ ನಟ ದೀಪ್ ಸಿಧುಗೆ ಇಂದು ( ಏಪ್ರಿಲ್ 17) ದೆಹಲಿ ನ್ಯಾಯಾಲಯ ಜಾಮೀನು ನೀಡಿತ್ತು. ವಿಶೇಷ ನ್ಯಾಯಾಧೀಶ ನೀಲೋಫರ್ ಅಬಿದಾ ಪರ್ವೀನ್ ಅವರು 30,000 ರೂ.ಗಳ ವೈಯಕ್ತಿಕ ಬಾಂಡ್ ಪಡೆದು ಆರೋಪಿಗೆ ಜಾಮೀನು ಮಂಜೂರು ಮಾಡಿದ್ದರು. ಅಂದು ನಡೆದ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿದ ಆರೋಪದಲ್ಲಿ ಸಿಧು ಅವರನ್ನು ಫೆಬ್ರುವರಿ 9 ರಂದು ಬಂಧಿಸಿ ನ್ಯಾಯಾಲಯದ ಎದುರು ಹಾಜರು ಪಡಿಸಲಾಗಿತ್ತು.

ಇಂದು ನಡೆದ ವಿಚಾರಣೆ ವೇಳೆ ‘ಸಿಧು ಅವರು ಪ್ರತಿಭಟನೆಗಾಗಿ ಕರೆ ನೀಡಿದ್ದಕ್ಕೆ, ಜನಸಮೂಹವನ್ನು ಪ್ರತಿಭಟನೆಯಲ್ಲಿ ತೊಡಗುವಂತೆ ಮಾಡಿದ್ದಕ್ಕೆ ಯಾವುದೇ ಪುರಾವೆಗಳಿಲ್ಲ’ ಎಂದು ಅವರ ವಕೀಲರು ನ್ಯಾಯಾಲಯದಲ್ಲಿ ವಾದಿಸಿದರು. ಅಲ್ಲದೆ ಸಿಧು ಯಾವ ರೈತ ಮುಖಂಡ, ರೈತ ಸಂಘದ ಸದಸ್ಯರಲ್ಲ ಎಂದು ಅವರ ಪರ ವಕೀಲರು ಹೇಳಿದ್ದಾರೆ.

ಸಿಧು ಅವರು ಫೇಸ್‌ಬುಕ್‌ನಲ್ಲಿ ವೀಡಿಯೊ ಪೋಸ್ಟ್ ಮಾಡುವಲ್ಲಿ ತಪ್ಪು ಮಾಡಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ ಮತ್ತು ಅದು ಅಪರಾಧವಲ್ಲ ಎಂದು ವಾದಿಸಿದ ವಕೀಲ ಹೇಳಿದ್ದಾರೆ . “ನಾನು ವೀಡಿಯೊವನ್ನು ಪೋಸ್ಟ್ ಮಾಡಿದ್ದೇನೆ, ಅದು ನನ್ನ ತಪ್ಪು. ಪ್ರತಿಯೊಂದು ತಪ್ಪೂ ಅಪರಾಧವಲ್ಲ. ನಾನು ವಿಡಿಯೋ ಪೋಸ್ಟ್ ಮಾಡಿದ ಕಾರಣ ಮಾಧ್ಯಮಗಳು ನನ್ನನ್ನು ಮುಖ್ಯ ಆರೋಪಿ ಎಂದು ಹೆಸರಿಸಿದೆ. ನನ್ನನ್ನು ಮುಖ್ಯ ಸಂಚುಕೋರನಾಗಿ ಮಾಧ್ಯಮಗಳು ಬಿಂಬಿಸಿದ್ದವು. ಅವು ಹಾಗೇಕೆ ಮಾಡಿದವೆಂದು ನನಗೆ ಅರಿವಿಲ್ಲ” ಏಪ್ರಿಲ್ 8 ರಂದು ಜಾಮೀನು ಅರ್ಜಿಯ ಸಂದರ್ಭದಲ್ಲಿ ಸಿಧು ತನ್ನ ವಕೀಲರ ಮೂಲಕ ನ್ಯಾಯಾಲಯಕ್ಕೆ ತಿಳಿಸಿದ್ದರು.

Advertisement

ಇನ್ನು ಕೇಂದ್ರ ಸರ್ಕಾರದ ಕೃಷಿ ಕಾನೂನುಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರು, ಗಣರಾಜ್ಯೋತ್ಸವದಂದು ದೆಹಲಿಯಲ್ಲಿ ಟ್ರ್ಯಾಕ್ಟರ್ ಪರೇಡ್ ಹಮ್ಮಿಕೊಂಡಿದ್ದರು. ಆದರೆ, ಈ ಜಾಥಾ ಹಿಂಸಾರೂಪ ಪಡೆದು, ದೆಹಲಿಯ ಕೆಂಪುಕೋಟೆಗೆ ಲಗ್ಗೆ ಇಟ್ಟಿದ್ದ ರೈತರು ಗಲಭೆ ನಡೆಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next