ಹೊಸದಿಲ್ಲಿ : ಕ್ರಿಕೆಟರ್ ವಿರಾಟ್ ಕೊಹ್ಲಿ ಮತ್ತು ವೇಟ್ ಲಿಫ್ಟರ್ ಮೀರಾಬಾಯಿ ಚಾನು ಅವರನ್ನು ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.
ಅರ್ಜುನ ಪ್ರಶಸ್ತಿ ಸಮಿತಿಯು ಈ ವಿಷಯವನ್ನು ದೃಢೀಕರಿಸಿರುವುದಾಗಿ ಎಎನ್‌ಐ ವರದಿ ಮಾಡಿದೆ.
ಈ ವರ್ಷ ಎಪ್ರಿಲ್‌ನಲ್ಲಿ ಬಿಸಿಸಿಐ ವಿರಾಟ್ ಕೊಹ್ಲಿ ಅವರ ಹೆಸರನ್ನು ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಶಿಫಾರಸು ಮಾಡಿತ್ತು.
2016ರಲ್ಲೇ ಕೊಹ್ಲಿ ಹೆಸರನ್ನು ಈ ಪ್ರಶಸ್ತಿಗೆ ಕಳುಹಿಸಲಾಗಿತ್ತು. ಆದರೆ ಅದು ಒಲಿಂಪಿಕ್ ವರ್ಷವಾಗಿದ್ದುದರಿಂದ ಮೂವರು ರಿಯೋ ತಾರೆಯರಾದ ಪಿವಿ ಸಿಂಧು, ಸಾಕ್ಷಿ ಮಲಿಕ್ ಮತ್ತು ದೀಪಾ ಕರ್ಮಾಕರ್ ಅವರಿಗೆ ಪ್ರಶಸ್ತಿಯನ್ನು ನೀಡಲಾಗಿತ್ತು.
ಪ್ರಕೃತ ಸಾಗುತ್ತಿರುವ ಏಶ್ಯ ಕಪ್‌ನಲ್ಲಿ ವಿರಾಟ್ ಕೊಹ್ಲಿ ಆಡುತ್ತಿಲ್ಲವಾದರೂ ಅವರು ಬ್ಯಾಟ್ಸ್‌ಮನ್ ಗಳ ಐಸಿಸಿ ಟೆಸ್ಟ್ ರಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಖೇಲ್ ರತ್ನ ಪ್ರಶಸ್ತಿ ಪಡೆಯುವಲ್ಲಿ ಕೊಹ್ಲಿ ಅವರು ತೆಂಡುಲ್ಕರ್ (1997) ಮತ್ತು ಮಹೇಂದ್ರ ಸಿಂಗ್ ಧೋನಿ (2007) ಅವರ ಬಳಿಕದಲ್ಲಿ ಮೂರನೇಯವರಾಗಿದ್ದಾರೆ.