Advertisement

ಪತ್ನಿಯ ಚಿಕಿತ್ಸೆಗಾಗಿ ಕ್ರಿಕೆಟಿಗ ಶಹಾಬಾಜ್ ನದೀಂ ಪರದಾಟ

01:16 PM Apr 20, 2020 | keerthan |

ಜಾರ್ಖಂಡ್‌: ವೇಗದ ಬೌಲರ್‌ ಜಾರ್ಖಂಡ್‌ನ‌ ಶಹಾಬಾಜ್‌ ನದೀಂ ಕೊರೊನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಪತ್ನಿಗೆ ಚಿಕಿತ್ಸೆ ಕೊಡಿಸಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

Advertisement

“ಪತ್ನಿಯ ಪಿತ್ತಜನಕಾಂಗದಲ್ಲಿ ಕೊಬ್ಬು ತುಂಬಿಕೊಂಡಿದ್ದು ಇದಕ್ಕೆ ಕಳೆದ 5 ತಿಂಗಳಿನಿಂದ ಕೋಲ್ಕತದಲ್ಲಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಇದೀಗ ಲಾಕ್‌ಡೌನ್‌ ಇರುವುದರಿಂದ ವೈದ್ಯರಲ್ಲಿ ಹೋಗಲು ಸಾಧ್ಯವಾಗುತ್ತಿಲ್ಲ, ಆಕೆಗೆ ಈಗ ಹೆಚ್ಚು ಸುಸ್ತು, ವಾಂತಿ ಕೂಡ ಆಗುತ್ತಿದೆ. ತುರ್ತು ಪರಿಸ್ಥಿತಿಯಲ್ಲಿ ವೈದ್ಯರಲ್ಲಿ ತೆರಳಬೇಕಾಗಿರುವ ಅನಿವಾರ್ಯತೆ ಇದೆ.

ಸದ್ಯ ಲಾಕ್‌ಡೌನ್‌ ಇರುವುದರಿಂದ ಕೋಲ್ಕತಕ್ಕೆ ತೆರಳಿ ಚಿಕಿತ್ಸೆ ಪಡೆಯಲು ಅನುಮತಿ ಸಿಗುತ್ತಿಲ್ಲ’ ಎಂದು ನದೀಂ ಅಳಲು ತೋಡಿಕೊಂಡಿದ್ದಾರೆ.

ನದೀಂ ಐಪಿಎಲ್‌ನಲ್ಲಿ 64 ಪಂದ್ಯವನ್ನಾಡಿದ್ದಾರೆ. ಇದರಲ್ಲಿ 42 ವಿಕೆಟ್ ಪಡೆದಿದ್ದಾರೆ. ಉತ್ತಮ ಆಲ್ ರೌಂಡರ್ ಅಗಿರುವ ಶಹಬಾಜ್ ನದೀಂ ಐಪಿಎಲ್ ನಲ್ಲಿ 1570 ರನ್ ಗಳಿಸಿದ್ದಾರೆ. ಭಾರತದ ಪರ ಒಂದು ಟೆಸ್ಟ್ ಆಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next