Advertisement

ಕ್ರಿಕೆಟ್‌ಗೆ ಎಸ್‌. ಅರವಿಂದ್‌ ವಿದಾಯ

08:15 AM Feb 28, 2018 | Team Udayavani |

ಬೆಂಗಳೂರು: ಮೂರನೇ ಸಲ ವಿಜಯ್‌ ಹಜಾರೆ ಏಕದಿನ ಕ್ರಿಕೆಟ್‌ ಟ್ರೋಫಿ ಯನ್ನು ಕರ್ನಾಟಕ ತಂಡ ಗೆಲ್ಲುತ್ತಿದ್ದಂತೆ ರಾಜ್ಯ ಕ್ರಿಕೆಟಿಗ ಶ್ರೀನಾಥ್‌ ಅರವಿಂದ್‌ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ.

Advertisement

ಮಂಗಳವಾರ ಈ ವಿಷಯವನ್ನು ಕರ್ನಾ ಟಕ ಕ್ರಿಕೆಟ್‌ ಸಂಸ್ಥೆ ಪ್ರಕಟನೆಯಲ್ಲಿ ತಿಳಿಸಿದೆ. ಸೌರಾಷ್ಟ್ರ ವಿರುದ್ಧದ ವಿಜಯ್‌ ಹಜಾರೆ ಫೈನಲ್‌ ಪಂದ್ಯಕ್ಕೂ ಮೊದಲು 33 ವರ್ಷದ ಅರವಿಂದ್‌ ಕೆಎಸ್‌ಸಿಎ ಕಾರ್ಯದರ್ಶಿಗೆ ಪತ್ರ ಬರೆದು ಮುಂದಿನ ಯುವ ಪೀಳಿ ಗೆಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ವಿದಾಯ ಹೇಳುತ್ತಿ ರುವುದಾಗಿ ತಿಳಿಸಿದ್ದಾರೆ.

ಇದೇ ವೇಳೆ ತನ್ನನ್ನು ತಂಡಕ್ಕೆ ಆಯ್ಕೆ ಮಾಡಿರುವ ಆಯ್ಕೆ ಸಮಿತಿ, ಕೋಚ್‌ಗಳಿಗೆ, ರಾಜ್ಯ ಕ್ರಿಕೆಟ್‌ ಸಂಸ್ಥೆಯ ಎಲ್ಲ ಸಿಬಂದಿಗೆ ಅರವಿಂದ್‌ ಧನ್ಯವಾದಗಳನ್ನು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಮುಖ್ಯವಾಗಿ ವೇಗದ ಬೌಲರ್‌ಗಳಿಗೆ ಹಾಗೂ ಕ್ರಿಕೆಟ್‌ಗೆ ಕ್ರೀಡಾಂಗಣದ ಹೊರಗೆ ನಿಂತು ಯಾವುದೇ ಸಹಾಯಕ್ಕೂ ಸಿದ್ಧವಾಗಿದ್ದೇನೆ. ಅವಕಾಶ ಸಿಕ್ಕರೆ ರಾಜ್ಯದ ಕ್ರಿಕೆಟ್‌ ಬೆಳವಣಿಗೆಗೆ ಕೆಎಸ್‌ಸಿಎ ಜತೆಗೆ ಸಕ್ರಿಯವಾಗಿ ತೊಡಗಿಸಿಕೊಳ್ಳುವುದಾಗಿ ಅರವಿಂದ್‌ ಸ್ಪಷ್ಟಪಡಿಸಿದ್ದಾರೆ.

ಏಕೈಕ ಟಿ20 ಆಡಿದ್ದ ಅರವಿಂದ್‌
2015ರಲ್ಲಿ ಧರ್ಮಶಾಲಾದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಕ್ರಿಕೆಟ್‌ ಕೂಟದಲ್ಲಿ ಭಾರತ ಪ್ರತಿನಿಧಿಸುವ ಅವಕಾಶವನ್ನು ಎಸ್‌.ಅರವಿಂದ್‌ ಪಡೆದು ಕೊಂಡಿದ್ದರು. 22 ಎಸೆತಗಳಿಂದ 1 ವಿಕೆಟ್‌ ಪಡೆದುಕೊಂಡಿದ್ದರು. ಐಪಿಎಲ್‌ನಲ್ಲಿ ರಾಯಲ್‌ ಚಾಲೆಂಜರ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದರು. ಕೆಪಿಎಲ್‌ನಲ್ಲಿ ಮಂಗಳೂರು ಯುನೈಟೆಡ್‌ ತಂಡವನ್ನು ಪ್ರತಿನಿಧಿಸಿದ್ದರು. ತಮಿಳುನಾಡು ವಿರುದ್ಧ ಬೆಂಗಳೂರಿನಲ್ಲಿ 2014-15ರಲ್ಲಿ ನಡೆದಿದ್ದ ರಣಜಿ ಪಂದ್ಯದಲ್ಲಿ ಅರವಿಂದ್‌ ಹ್ಯಾಟ್ರಿಕ್‌ ವಿಕೆಟ್‌ ಕಬಳಿಸಿದ್ದರು ಎನ್ನುವುದು ವಿಶೇಷ.

Advertisement

Udayavani is now on Telegram. Click here to join our channel and stay updated with the latest news.

Next