Advertisement

Sri Lanka; ಕ್ರಿಕೆಟಿಗ ಲಹಿರು ತಿರಮನ್ನೆ ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತ

01:53 PM Mar 14, 2024 | Team Udayavani |

ಕೊಲಂಬೊ: ಶ್ರೀಲಂಕಾದ ಕ್ರಿಕೆಟಿಗ ಲಹಿರು ತಿರಮನ್ನೆ ಅವರಿದ್ದ ಕಾರು ಭೀಕರ ಅಪಘಾತಕ್ಕೆ ಒಳಗಾಗಿದ್ದು, ತಿರಮನ್ನೆ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ ಎಂದು ವರದಿ ಹೇಳಿದೆ.

Advertisement

ಅನುರಾಧಪುರದ ತಿರಪನ್ನೆ ಎಂಬಲ್ಲಿ ಈ ಘಟನೆ ನಡೆದಿದೆ. ಲಾರಿಗೆ ಡಿಕ್ಕಿ ಹೊಡೆದ ರಭಸಕ್ಕೆ ತಿರಿಮನ್ನೆ ಅವರಿದ್ದ ಕಾರು ತೀವ್ರ ಜಖಂಗೊಂಡಿದ್ದು, ಘಟನೆ ನಡೆದ ಸ್ಥಳದಲ್ಲಿ ಆತಂಕಕಾರಿ ದೃಶ್ಯಗಳು ಕಂಡು ಬಂದವು.

ತಿರಮನ್ನೆ ಅವರು ಕುಟುಂಬದೊಂದಿಗೆ ದೇವಸ್ಥಾಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ.  ವರದಿಯ ಪ್ರಕಾರ, ಮಾಜಿ ಕ್ರಿಕೆಟಿಗ ತರಿಮನ್ನೆ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

2022 ರಲ್ಲಿ ಕ್ರಿಕೆಟ್‌ನಿಂದ ನಿವೃತ್ತರಾದ ನಂತರ, 34 ವರ್ಷ ವಯಸ್ಸಿನ ತಿರಮನ್ನೆ ಅವರು ಇತ್ತೀಚೆಗೆ ಲೆಜೆಂಡ್ಸ್ ಲೀಗ್ ನಲ್ಲಿ ಆಡಿದ್ದಾರೆ.

ಅವರು ಬುಧವಾರದಂದು ನ್ಯೂಯಾರ್ಕ್ ಸ್ಟ್ರೈಕರ್ಸ್ ಪರವಾಗಿ ಪಂದ್ಯವನ್ನು ಆಡಿದರು, ಅದರಲ್ಲಿ ಅವರು 18 ರನ್ ಗಳಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next