Advertisement
ಬೌಲಿಂಗ್ ವ್ಯೂಹದ ರಚನೆ ಬಗ್ಗೆ ವ್ಯವಸ್ಥಾಪಕರು ಗಂಭೀರ ಚಿಂತನೆ ಮಾಡುತ್ತಿದ್ದಾರೆ, ಹೆಚ್ಚುವರಿ ಸೀಮರ್ ಆಗಿ ಮೊಹಮ್ಮದ್ ಶಮಿ ಅಥವಾ ಇಲ್ಲಿನ ಪಿಚ್‌ಗೆ ಅನುಗುಣವಾಗಿ ಸ್ಥಳೀಯ ಹೀರೋ ಆರ್. ಅಶ್ವಿನ್ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಚರ್ಚೆ ನಡೆಯುತ್ತಿದೆ. ಹಾರ್ದಿಕ್ ಪಾಂಡ್ಯ ಬಹುತೇಕ ಪೂರ್ಣ ಓವರ್ ಎಸೆಯಲು ಸಮರ್ಥರಾಗಿದ್ದರೂ ಆಸ್ಟ್ರೇಲಿಯದ ತಂತ್ರಗಳಿಗೆ ಕಡಿವಾಣ ಹಾಕಲು ಸಮರ್ಥರಿರುವ ಅಶ್ವಿನ್ ಅವರನ್ನು ಕಣಕ್ಕೆ ಇಳಿಸುವುದು ಉತ್ತಮವೆಂಬುದು ಕೆಲವರ ಅಭಿಪ್ರಾಯವಾಗಿದೆ.
ಸ್ಥಳೀಯ ನೆಟ್ ಬೌಲರ್‌ಗಳ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಕೊಹ್ಲಿ ಅವರು ಸ್ವಲ್ಪ ಹೊತ್ತು ಚೆಂಡನ್ನು ಎಸೆಯುವ ಅಭ್ಯಾಸವನ್ನು ಮಾಡಿದರು. ಅಭ್ಯಾಸ ಪಂದ್ಯಗಳನ್ನು ಆಡಲು ಸಾಧ್ಯವಾಗದ ಕಾರಣ ಆಟಗಾರರು ಕಠಿನ ತರಬೇತಿಯಲ್ಲಿ ಪಾಲ್ಗೊಂಡರು. ಎರಡು ತಾಸು ನಿಗದಿಯಾಗಿದ್ದರೂ ಕೊಹ್ಲಿ ಅವರು ಹೆಚ್ಚುವರಿಯಾಗಿ 45 ನಿಮಿಷ ಅಭ್ಯಾಸ ನಡೆಸಿದರು. ಕೊಹ್ಲಿ ಅವರಲ್ಲದೇ ಆಲ್‌ರೌಂಡರ್‌ಗಳಾದ ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ ಮತ್ತು ಸ್ಪಿನ್ನರ್ ಕುಲದೀಪ್ ಯಾದವ್ ನೆಟ್‌ನಲ್ಲಿ ಬೌಲಿಂಗ್ ನಡೆಸಿದರು. ಜಡೇಜ ಬೌಲಿಂಗ್ ಮಾತ್ರವಲ್ಲದೇ ಬ್ಯಾಟಿಂಗ್ ಅಭ್ಯಾಸ ಪಡೆದರು.
Related Articles
Advertisement