Advertisement

Cricket World Cup 2023: ಸಚಿನ್‌ ತೆಂಡುಲ್ಕರ್‌ ಜಾಗತಿಕ ರಾಯಭಾರಿ

07:47 AM Oct 05, 2023 | Team Udayavani |

ವಿಶ್ವಕಂಡ ಸರ್ವಶ್ರೇಷ್ಠ ಕ್ರಿಕೆಟಿಗ ಸಚಿನ್‌ ತೆಂಡುಲ್ಕರ್‌ ಅವರನ್ನು ಐಸಿಸಿ 2023ರ ವಿಶ್ವಕಪ್‌ ಕೂಟದ ಜಾಗತಿಕ ರಾಯಭಾರಿಯನ್ನಾಗಿ ನೇಮಿಸಿದೆ. ಏಕದಿನ ವಿಶ್ವಕಪ್‌ನಲ್ಲಿ ಸಚಿನ್‌ 6 ಬಾರಿ ಕಾಣಿಸಿಕೊಂಡು ದಾಖಲೆ ಬರೆದಿರುವ ಸಚಿನ್‌, ಸರ್ವಾಧಿಕ ರನ್‌ ಬಾರಿಸಿದ ಹಿರಿಮೆಯನ್ನೂ ಹೊಂದಿದ್ದಾರೆ.

Advertisement

ಇಂಗ್ಲೆಂಡ್‌-ನ್ಯೂಜಿಲ್ಯಾಂಡ್‌-ಇಂಗ್ಲೆಂಡ್‌ ನಡುವಿನ ಉದ್ಘಾಟನ ಪಂದ್ಯಕ್ಕೂ ಮೊದಲು ಸಚಿನ್‌ ತೆಂಡುಲ್ಕರ್‌ ವಿಶ್ವಕಪ್‌ ಟ್ರೋಫಿಯೊಂದಿಗೆ ಮೈದಾನ ಪ್ರವೇಶಿಸಲಿದ್ದಾರೆ. “1987ರ ವಿಶ್ವಕಕಪ್‌ನಲ್ಲಿ ನಾನು ಬಾಲ್‌ಬಾಯ್‌ ಆಗಿದ್ದೆ, ಅನಂತರ ಒಟ್ಟು 6 ಬಾರಿ ವಿಶ್ವಕಪ್‌ ಕೂಟಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದೇನೆ. 2011ರಲ್ಲಿ ವಿಶ್ವಕಪ್‌ ಗೆದ್ದದ್ದು ನನ್ನ ಜೀವನದ ಅವಿಸ್ಮರಣೀಯ ಗಳಿಗೆ’ ಎಂದು ತೆಂಡುಲ್ಕರ್‌ ಹೇಳಿದ್ದಾರೆ.

ಆತಿಥೇಯ ದೇಶವಾಗಿರುವುದರಿಂದ ಭಾರತ ಪ್ರಸ್ತುತ ಏಕದಿನ ವಿಶ್ವಕಪ್‌ ಗೆಲ್ಲುವ ಮೆಚ್ಚಿನ ತಂಡವಾಗಿದೆ. ಈ ಪೈಪೋಟಿಯಲ್ಲಿ ಇನ್ನೂ ನಾಲ್ಕು ದೇಶಗಳು ಪ್ರಬಲ ಸ್ಪರ್ಧೆಯೊಡ್ಡಿವೆ. ಆಸ್ಟ್ರೇಲಿಯ, ಇಂಗ್ಲೆಂಡ್‌, ನ್ಯೂಜಿಲ್ಯಾಂಡ್‌, ಪಾಕಿಸ್ಥಾನಗಳು ಪ್ರಶಸ್ತಿ ಮೇಲೆ ಕೈ ಇಡಬಲ್ಲ ಸಾಮರ್ಥ್ಯ ಹೊಂದಿವೆ. ಪರಿಶ್ರಮದೊಂದಿಗೆ ಅದೃಷ್ಟವೂ ಸಕಾಲದಲ್ಲಿ ಅವರ ಕೈಹಿಡಿದರೆ ಪ್ರಶಸ್ತಿ ಎತ್ತುವುದೇನೂ ಕಷ್ಟವಲ್ಲ. ಮೇಲಿನ ನಾಲ್ಕು ತಂಡಗಳ ಸಾಮರ್ಥ್ಯ ಮತ್ತು ದೌರ್ಬಲ್ಯಗಳ ವಿಶ್ಲೇಷಣೆಗಳು ಇಲ್ಲಿವೆ.

Advertisement

Udayavani is now on Telegram. Click here to join our channel and stay updated with the latest news.

Next