ಕಾಬೂಲ್: ಅಫ್ಘಾನಿಸ್ಥಾನದ ನಂಗಾರ್ಹಾರ್ ಪ್ರಾಂತ್ಯದಲ್ಲಿ ನಡೆದ ಬಾಂಬ್ ದಾಳಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಅಂಪಾಯರ್ ಬಿಸ್ಮಿಲ್ಲಾ ಜಾನ್ ಶಿನ್ವಾರಿ ನಿಧನರಾಗಿದ್ದಾರೆ.
ನಂಗಾರ್ಹಾರ್ ನಗರದಲ್ಲಿ ಶನಿವಾರ ಮಧ್ಯಾಹ್ನ ಬಾಂಬ್ ಸ್ಪೋಟ ನಡೆದಿತ್ತು. ನಂಗರ್ಹಾರ್ ನ ಗವರ್ನರ್ ರ ಮನೆಯ ಎದುರಿನ ರಸ್ತೆಯಲ್ಲಿ ಈ ಸ್ಪೋಟ ನಡೆದಿದೆ. ಅಫ್ಘಾನ್ ಮಾಧ್ಯಮಗಳ ವರದಿಯ ಪ್ರಕಾರ, ಕೆಲವು ಬಂದೂಕುಧಾರಿಗಳು ಮನೆಗೆ ನುಗ್ಗಲು ಪ್ರಯತ್ನಿಸಿದ್ದರು, ಕೂಡಲೇ ಭದ್ರತಾ ಪಡೆಗಳು ಅವರನ್ನು ಹೊಡೆದುರುಳಿಸಿದೆ.
ಘಟನೆಯಲ್ಲಿ ಕನಿಷ್ಠ 15 ಮಂದಿ ಸಾವನ್ನಪ್ಪಿದ್ದು, 30 ಜನರು ಗಾಯಗೊಂಡಿದ್ದರು.
ಇದನ್ನೂ ಓದಿ:ಐಪಿಎಲ್ ಗೆ ಮತ್ತೆ ವಕ್ಕರಿಸಿದೆ ಫಿಕ್ಸಿಂಗ್ ಭೂತ..! ಸ್ಟಾರ್ ಆಟಗಾರನನ್ನು ಸಂಪರ್ಕಿಸಿದ ಬುಕಿ
36 ವರ್ಷದ ಬಿಸ್ಮಿಲ್ಲಾ ಜಾನ್ ಶಿನ್ವಾರಿ ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ಅಂಪಾಯರ್ ಆಗಿದ್ದಾರೆ. ಇದುವರೆಗೆ ಆರು ಏಕದಿನ ಮತ್ತು ಆರು ಟಿ20 ಪಂದ್ಯಗಳಿಗೆ ಶಿನ್ವಾರಿ ಅಂಪಾಯರಿಂಗ್ ಮಾಡಿದ್ದಾರೆ.