Advertisement
ಈ ಸರಣಿಗಳ ವೇಳೆ 2 ನೂತನ ಅಂತಾ ರಾಷ್ಟ್ರೀಯ ಕೇಂದ್ರಗಳನ್ನು ಬಿಸಿಸಿಐ ಪರಿಚಯಿ ಸಲಿದೆ. ಕೇರಳದ ತಿರುವನಂತಪುರದ “ಗ್ರೀನ್‌ಫೀಲ್ಡ್ ಇಂಟರ್‌ನ್ಯಾಶನಲ್ ಸ್ಟೇಡಿಯಂ’ ಹಾಗೂ ಅಸ್ಸಾಮ್‌ನ ಗುವಾಹಟಿಯ ಬರ್ಸಾಪಾರಕ್ಕೆ ಈ ಅದೃಷ್ಟ ಲಭಿಸಿದೆ.
“ತವರಿನ ಸರಣಿ’ ಆಸ್ಟ್ರೇಲಿಯದ ಆಗಮನದೊಂದಿಗೆ ಆರಂಭಗೊಳ್ಳುತ್ತದೆ. ಸೆಪ್ಟಂಬರ್-ಅಕ್ಟೋಬರ್ ನಡು ಅವಧಿಯಲ್ಲಿ ಸಾಗುವ ಈ ಸರಣಿ ವೇಳೆ 5 ಏಕದಿನ, 3 ಟಿ-20 ಪಂದ್ಯಗಳನ್ನು ಆಡಲಾಗುವುದು. ಏಕದಿನ ಪಂದ್ಯಗಳು ಚೆನ್ನೈ, ಬೆಂಗಳೂರು, ನಾಗ್ಪುರ, ಇಂದೋರ್ ಮತ್ತು ಕೋಲ್ಕತಾದಲ್ಲಿ ನಡೆಯಲಿವೆ. ಟಿ-20 ಪಂದ್ಯಗಳಿಗಾಗಿ ಹೈದರಾಬಾದ್, ರಾಂಚಿ ಮತ್ತು ಬರ್ಸಾಪಾರವನ್ನು ಆಯ್ಕೆ ಮಾಡಲಾಗಿದೆ. ಆಸ್ಟ್ರೇಲಿಯ ಸರಣಿಯ ಬಳಿಕ ನ್ಯೂಜಿ ಲ್ಯಾಂಡ್ ಆಗಮನವಾಗಲಿದೆ. ಈ ವೇಳೆ 3 ಏಕದಿನ, 3 ಟಿ-20 ಪಂದ್ಯಗಳನ್ನು ಆಡಲಾಗು ವುದು. ಅಕ್ಟೋಬರ್-ನವೆಂಬರ್‌ನಲ್ಲಿ ಈ ಸರಣಿ ನಡೆಯಲಿದೆ. ಏಕದಿನ ಪಂದ್ಯಗಳ ಆತಿಥ್ಯ ಪುಣೆ, ಮುಂಬಯಿ ಮತ್ತು ಕಾನ್ಪುರಕ್ಕೆ ಲಭಿಸಿದೆ. ಟಿ-20 ಪಂದ್ಯಗಳು ಹೊಸದಿಲ್ಲಿ, ಕಟಕ್, ರಾಜ್‌ಕೋಟ್‌ನಲ್ಲಿ ನಡೆಯಲಿವೆ.
Related Articles
Advertisement
ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯಗಳು ಧರ್ಮಶಾಲಾ, ಮೊಹಾಲಿ ಮತ್ತು ವಿಶಾಖ ಪಟ್ಟಣದಲ್ಲಿ ಸಾಗಲಿವೆ. ಟಿ-20 ಪಂದ್ಯಗಳ ಆತಿಥ್ಯ ತಿರುವನಂತಪುರಂ, ಇಂದೋರ್ ಮತ್ತು ಮುಂಬಯಿ ಪಾಲಾಗಿದೆ.
ಡಿಸೆಂಬರ್‌ನಲ್ಲಿ ಭಾರತದ ಈ ತವರಿನ ಕ್ರಿಕೆಟ್ ಸರಣಿ ಕಾರ್ಯಕ್ರಮ ಅಂತ್ಯಗೊಳ್ಳಲಿದೆ. ಅನಂತರ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳುವ ಕಾರ್ಯಕ್ರಮವಿದೆ.ಎಲ್ಲ ಕೇಂದ್ರಗಳಿಗೂ ಆತಿಥ್ಯ
“ಭಾರತದ ಎಲ್ಲ ಕ್ರಿಕೆಟ್ ಕೇಂದ್ರಗಳಿಗೂ ಪಂದ್ಯಗಳ ಆತಿಥ್ಯ ನೀಡುವುದು ನಮ್ಮ ಯೋಜನೆ. ಹಾಗೆಯೇ 2 ನೂತನ ಕ್ರಿಕೆಟ್ ಕೇಂದ್ರಗಳನ್ನು ಪರಿಚಯಿಸಲಾಗುತ್ತಿದೆ. ಒಂದು ತಿರುವನಂತಪುರದ ಗ್ರೀನ್‌ಫೀಲ್ಡ್ ಇಂಟರ್ ನ್ಯಾಶನಲ್ ಸ್ಟೇಡಿಯಂ, ಮತ್ತೂಂದು ಅಸ್ಸಾಮ್‌ನ ಬರ್ಸಾಪಾರ ಸ್ಟೇಡಿಯಂ’ ಎಂದು ಬಿಸಿಸಿಐ ಮಂಗಳವಾರದ ತವರಿನ ಸರಣಿಯ ವೇಳಾಪಟ್ಟಿ ಪ್ರಕಟನೆಯ ಬಳಿಕ ಮಾಧ್ಯಮಗಳಿಗೆ ತಿಳಿಸಿತು. ರಣಜಿ ಹಳೆ ಮಾದರಿಗೆ
ರಣಜಿ ಟ್ರೋಫಿ ಪಂದ್ಯಾವಳಿಯ ತಟಸ್ಥ ಮಾದರಿ ಕೇವಲ ಒಂದೇ ಋತುವಿಗೆ ಮುಗಿದಿದೆ. ಇದನ್ನು ಹಿಂದಿನಂತೆ ತವರಿನ ಹಾಗೂ ಹೊರಗಿನ ಮಾದರಿಗೆ ಪರಿವರ್ತಿಸಲಾಗಿದೆ. ಸೌರವ್ ಗಂಗೂಲಿ ನೇತೃತ್ವದ ಬಿಸಿಸಿಐ ತಾಂತ್ರಿಕ ಸಮಿತಿ ಮಂಗಳವಾರ ಈ ಬದಲಾವಣೆಯನ್ನು ಪ್ರಕಟಿಸಿತು. ಇಲ್ಲಿ ಸಂಭವಿಸಿದ ಇನ್ನೊಂದು ಬದಲಾವಣೆಯೆಂದರೆ ತಂಡಗಳನ್ನು ಮೂರರ ಬದಲು 4 ವಿಭಾಗಗಳಾಗಿ ವಿಂಗಡಿಸಿದ್ದು. ಪ್ರತಿಯೊಂದು ವಿಭಾಗದಲ್ಲಿ ಏಳರಂತೆ ಒಟ್ಟು 28 ತಂಡಗಳು ಸ್ಪರ್ಧಿಸಲಿವೆ. 2017-18ರ ರಣಜಿ ಋತು ಆ. 6ರಿಂದ ಆರಂಭವಾಗಲಿದೆ.